ಹುಬ್ಬಳ್ಳಿ: ಹಳೇಹುಬ್ಬಳ್ಳಿ ಅರವಿಂದನಗರ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನ ಹಾಗೂ ಶಾಲೆಯ 56ನೇ ವಾರ್ಣಿಕೋತ್ಸವ ಅಂಗವಾಗಿ ವಿವೇಕೋತ್ಸವ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಶಕುಂತಲಾಬಾಯಿ ಬಿ. ದಂಡಿನ ಅವರು ಮಾತನಾಡಿದರು.
ಅತಿಥಿಯಾಗಿದ್ದ ಹೈಕೋರ್ಟ್ ವಕೀಲ ಅರುಣ ಜೋಶಿ, ವಿವೇಕಾನಂದರ ಆದರ್ಶಗಳು ಪ್ರತಿಯೊಬ್ಬರ ಜೀವನದಲ್ಲಿ ದಾರಿ ದೀಪವಾಗಿವೆ. ಭಾರತದ ಹಿರಿಮೆಯನ್ನು ಜಗತ್ತಿನೆಲ್ಲೆಡೆ ಅವರು ಪಸರಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರನಾಥ ದಂಡಿನ ಮಾತನಾಡಿ, ಸಂಸ್ಥೆಯು ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಮಧ್ಯಮ ವರ್ಗದ ಜನರನ್ನು ಸದೃಢವಾಗಿಸಲು ಐದು ದಶಕದಿಂದ ಕೆಲಸ ಮಾಡುತ್ತಿದೆ. ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ಪೂರೈಸುತ್ತಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಾಲೆಯ ಹಳೇ ವಿದ್ಯಾರ್ಥಿಗಳಾದ ಸಮರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಖಿಲಕುಮಾರ ಹಲಗತ್ತಿ, ಕೆಎಲ್ಇ ಆಸ್ಪತ್ರೆ ವೈದ್ಯ ಡಾ. ಫರ್ಜಾನಾ ಬೇಗಂ, ಇಸ್ರೋ ಸಂಸ್ಥೆ ವಿಜ್ಞಾನಿ ಸಂಜನಾ ಶಾವಿ ಅವರನ್ನು ಸನ್ಮಾನಿಸಲಾಯಿತು.
ಶೀಲಾ ಆರ್. ದಂಡಿನ, ಸಾಮಾಜಿಕ ಕಾರ್ಯಕರ್ತ ಸಿದ್ದು ಕವಲೂರ, ಉಮೇಶ ದುಶಿ, ಸಂಜು ಬಡಸ್ಕರ್, ಮಾಜಿ ಸೈನಿಕ ಪರಶುರಾಮ ದಿವಾನದ, ಪ್ರಾಚಾರ್ಯ ಶರಣು ಅಣ್ಣಿಗೇರಿ ಇತರರು ಉಪಸ್ಥಿತರಿದ್ದರು.