19 C
Bengaluru
Thursday, January 23, 2020

ಇತ್ತ ರೈತ ಸಾಲ ಮನ್ನಾ ಖಂಡನೆ ಅತ್ತ ರಾಜನ್ ಕಂಪನಿಗಳ ಭಜನೆ!

Latest News

ಹೃದಯದೊಳಗೆ ಸತ್ವದ ಝುರಿ

ಶಕ್ತಿ ಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ | ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ || ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ | ಸತ್ತ್ವದಚ್ಛಿನ್ನಝುರಿ - ಮಂಕುತಿಮ್ಮ || ‘ವಿಧಿಯು ನಿನ್ನ ಶಕ್ತಿಗೂ ಮೀರಿದ...

ಭಿಕ್ಷುಗಳನ್ನು ಆಶ್ರಯಿಸಿರುವ ಬಾಡದ ಭಕ್ತಿಕುಸುಮ

ಬಿಚ್ಚಾಲೆಯಲ್ಲಿ ಏಕಶಿಲಾಬೃಂದಾವನದಲ್ಲಿ ನೆಲೆಸಿರುವ ಗುರುರಾಯರು ಇಂದಿಗೂ ಅದೃಶ್ಯರೂಪದ ಅಪ್ಪಣಾಚಾರ್ಯರಿಂದಲೇ ನಿತ್ಯದಲ್ಲೂ ಪರಿಸೇವಿತರಾಗಿದ್ದಾರೆಂಬುದು ಭಕ್ತರ ನಂಬುಗೆ. ಗುರುರಾಯರ ಈ ಸುಕ್ಷೇತ್ರವನ್ನು ಕುರುಡಿ ರಾಘವೇಂದ್ರಾಚಾರ್ಯರು ಮನಮೋಹಕವಾಗಿ ವರ್ಣಿಸಿದ್ದಾರೆ. ಇಲ್ಲಿ...

ಈ ಅಣ್ಣತಮ್ಮಂದಿರ ಕಥೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ!

ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳನ್ನು ನೋಡಿದಾಗ, ಅವುಗಳ ವಹಿವಾಟಿನ ಮೊತ್ತವನ್ನು ಕೇಳಿದಾಗ ನಾವು ಆಶ್ಚರ್ಯ ಪಡುತ್ತೇವೆ. ಇದೊಂದು ರಾತ್ರಿ ಬೆಳಗಾಗುವುದರಲ್ಲಿ ಘಟಿಸಿದ ಅದ್ಭುತ ಎಂದೇ ಅಂದುಕೊಳ್ಳುತ್ತೇವೆ....

ಕರಾವಳಿಗರಲ್ಲಿ ವಿಶೇಷ ಧಾರ್ಮಿಕ ನಂಬಿಕೆ: ಡಾ.ವಿಜಯ ಸಂಕೇಶ್ವರ

ಕಟೀಲು: ದ.ಕ ಜಿಲ್ಲೆಯ ಜನರು ವಿಶೇಷ ಧಾರ್ಮಿಕ ನಂಬಿಕೆ ಹೊಂದಿದವರಾಗಿದ್ದಾರೆ. ಕಟೀಲು ದೇವಸ್ಥಾನದಲ್ಲಿ ನಿರಂತರ ಉತ್ತಮ ಕಾರ್ಯ ಗಳು ನಡೆಯುತ್ತಿವೆ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ...

ವಿಜಯವಾಣಿ ವಿಶೇಷ ಫಲಪುಷ್ಪ ಪ್ರದರ್ಶನ ಸಿದ್ಧತೆ

ಭರತ್ ಶೆಟ್ಟಿಗಾರ್ ಮಂಗಳೂರು ಕಣ್ಮನ ಸೆಳೆಯುವ ಬಣ್ಣಬಣ್ಣದ ಆಕರ್ಷಕ ಪುಷ್ಪಗಳು, ನಳನಳಿಸುವ ತರಕಾರಿ... ಇವೆಲ್ಲದರ ಮಧ್ಯೆ ಆಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಗಣರಾಜ್ಯೋತ್ಸವ ಪ್ರಯುಕ್ತ...

| ಡಾ.ಕೆ.ವಿದ್ಯಾಶಂಕರ್

ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಏನು? ಇದು ರೂಢಿಗತ ಮಾತು. ಯಾರೋ ಬಂದು ಏನೋ ಅಪ್ಪಣೆ ಮಾಡಿದರೆ ಯಾರು ಕೇಳುತ್ತಾರೆ ಅನ್ನೋದು ಈ ಮಾತಿನ ಅರ್ಥ. ಈ ಮಾತು ರಘುರಾಂ ರಾಜನ್ ಅವರಿಗೆ ನೂರಕ್ಕೆ ನೂರು ಅನ್ವಯ. ಇವರು ಯಾರು ಎಂದು ಎಲ್ಲರಿಗೂ ಗೊತ್ತು.

ಅಮೆರಿಕದಲ್ಲಿ ಬದುಕು ಕಳೆದು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಸೀಟಿನಲ್ಲಿ ಮೂರು ವರ್ಷ ಕುಳಿತಿದ್ದವರು. ಇವರನ್ನೇ ಮುಂದುವರಿಸಿ ಎಂದು ಪ್ರಧಾನಿ ನರೇಂದ್ರಮೋದಿ ಅವರಿಗೆ ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮರಿಂದ ಫೋನ್ ಮಾಡಿಸಿದ್ದೂ ಇತ್ತು. ಇವರು ನಾಲಾಯಕ್ ಎಂಬುದು ಮತ್ತೆ ಸಾಬೀತಾಗಿದೆ. ಡಿಸೆಂಬರ್​ನಲ್ಲಿ ಚುನಾವಣೆ ಆಯೋಗಕ್ಕೆ ರಾಜನ್ ಪತ್ರ ಬರೆದಿದ್ದಾರೆ. ‘ಚುನಾವಣೆ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಇರಲೇಬಾರದು ಎಂಬ ನಿಯಮ ಮಾಡಿ’ ಎಂಬುದು ಇವರ ಶಿಫಾರಸು. ರಾಜನ್​ಗೆ ಅಂತಾರಾಷ್ಟ್ರೀಯ ಹಣಕಾಸು ವಿದ್ಯಮಾನದ ವಿಚಾರ ಗೊತ್ತಿರಬಹುದು. ಭಾರತ ಗೊತ್ತೇ? ಇಲ್ಲಿನ ಬದುಕು ಹಳ್ಳಿಗಳಲ್ಲೇ ಎಂಬುದು ಗೊತ್ತೇ? ನಮ್ಮ ದೇಶದ ರೈತಾಪಿ ಕುಟುಂಬಗಳಲ್ಲಿ ಶೇ.52ರಷ್ಟು ಪಾಲು ಜನರಿಗೆ ಬ್ಯಾಂಕ್ ಎಂಬುದು ಗಗನಕುಸುಮ, ಅವರು ಕೈಸಾಲದಲ್ಲೇ ಜೀವನ ವ್ಯಾಪಾರ ನಡೆಸುವವರು ಎಂಬುದು ಗೊತ್ತೇ? ಖಂಡಿತ ಇಲ್ಲ, ಗೊತ್ತಿದ್ದರೆ ಹೀಗೆ ಪತ್ರ ಬರೆಯುತ್ತಿರಲಿಲ್ಲ.

ಈ ಮಹಾಶಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗ ಹೇಳಿದ್ದು ‘2008-14ರ ಅವಧಿಯಲ್ಲಿ ಬ್ಯಾಂಕುಗಳು 1.61 ಲಕ್ಷ ಕೋಟಿ ರೂ.ಗಳನ್ನು ಕಂಪನಿಗಳಿಗೆ ಸಾಲ ಮನ್ನಾ ರೂಪದಲ್ಲಿ ನೀಡಿವೆ. ಸಾಲಮನ್ನಾ ಸಿಗುತ್ತದೆ ಎಂದು ಬ್ಯಾಂಕ್ ಸಾಲ ಮಾಡಿ, ಬ್ಯಾಂಕುಗಳಿಗೆ ಟೋಪಿ ಹಾಕುವ ಕಂಪನಿಗಳ ಕುಬೇರರು ‘ವಿಲ್​ಫುಲ್ ಡಿಫಾಲ್ಟರ್ಸ್’ ನಮ್ಮಲ್ಲಿ ಬೇಕಾದಷ್ಟು ಮಂದಿ ಇದ್ದಾರೆ. ಇಲ್ಲಿ ಸಿಕ್ ಇಂಡಸ್ಟ್ರೀಸ್ ಅಂದರೆ ರೋಗಗ್ರಸ್ತ ಕಂಪನಿಗಳಿವೆ, ಆದರೆ ರೋಗಗ್ರಸ್ತ ಮಾಲೀಕರು ಅಂದರೆ ಸಿಕ್ ಪ್ರಮೋಟರ್ಸ್ ಯಾರೂ ಇಲ್ಲ…’ ಹೀಗಿತ್ತು 2014ರಲ್ಲಿ ರಘುರಾಂ ರಾಜನ್ ಪ್ರವಚನ.

ಪ್ರತಿವರ್ಷ ಕಂಪನಿಗಳ ಸಾಲ ಮನ್ನಾ ಮಾಡುವುದು ನಮ್ಮ ಬ್ಯಾಂಕುಗಳ ಇತಿಹಾಸ! ಕಂಪನಿಗಳ ಸಾಲಬಾಕಿ ಮುಚ್ಚಿಡುವುದೇ ಬ್ಯಾಂಕುಗಳ ಬ್ಯಾಲೆನ್ಸ್ ಷೀಟ್ ಮಂತ್ರ. ಬರದೆ ಇರುವ ಕಂಪನಿ ಸಾಲವನ್ನು ಮರುಹೊಂದಾಣಿಕೆ ಮಾಡಿ ಅದನ್ನು ಸ್ಟ್ಯಾಂಡರ್ಡ್ ಸಾಲ ಎಂದು ಬರೆಯುವುದೇ ಬ್ಯಾಂಕುಗಳಲ್ಲಿ ವಾಡಿಕೆ. ಹೀಗೆ ಮರುಹೊಂದಾಣಿಕೆ ಮಾಡಿದ ಸಾಲವನ್ನು ಸಾಲ ಬಾಕಿ ಎಂದು ಲೆಕ್ಕದಲ್ಲಿ ತೋರಿಸುವುದಿಲ್ಲ. ಈ ಬಾಕಿ ಸಾಲಕ್ಕೆ ಬ್ಯಾಂಕುಗಳು ಮೀಸಲು ಇಡಬೇಕಿಲ್ಲ. ಇದರಿಂದ ಬ್ಯಾಂಕುಗಳಿಗೂ ಸುಖ, ಕಂಪನಿಗಳಿಗೂ ಲಾಭ. ಈ ವ್ಯವಸ್ಥೆಗೆ ಸಿಡಿಆರ್ (ಕಾಪೋರೇಟ್ ಡೆಟ್ ರಿಸ್ಟ್ರಕ್ಚರ್) ಎಂದು ಹೆಸರು. ಇದು ಉದಾರೀಕರಣ ಯುಗದ ಆರಂಭದಿಂದ ಬೇರೆ ಬೇರೆ ಹೆಸರಿನಲ್ಲಿ ಬಂದಿದೆ. ಇದು ತಪ್ಪು ಎಂದರು ರಘುರಾಂ. ಈತ ಮಹಾತ್ಮ ಎನಿಸಬಹುದು. ಸ್ವಲ್ಪ ತಡೆಯಿರಿ. 2015ರ ಏಪ್ರಿಲ್​ನಿಂದ ಇವೆಲ್ಲ ಬಂದ್. ಎಲ್ಲ ಸಾಲ ಬಾಕಿಯನ್ನೂ ಪುಸ್ತಕದಲ್ಲಿ ಬ್ಯಾಂಕುಗಳು ಬರೆದಿಡಬೇಕು ಎಂದರು ರಾಜನ್. ಇದು ದೊಡ್ಡ ಸಾಧನೆಯೇ ಹೌದು. ಅದು ಸರಿ, ಆಮೇಲೆ ಏನಾಯ್ತು ಗೊತ್ತೇ? ಸಾಲದ ಗುಪ್ತ ಸಮಾಲೋಚನೆ ಬಂದ್ ಎಂದು ರಾಜನ್ ಹೇಳಿದ ಕೂಡಲೇ ಕಂಪನಿ ಕುಬೇರರು ದಿಲ್ಲಿ ದೊರೆಗಳ ಬಳಿಗೆ ಅಹವಾಲು ಒಯ್ದರು. ಅಲ್ಲಿಂದಲೂ ಅಪ್ಪಣೆ ಬಂತು, ಅದನ್ನೂ ಶಿರಸಾವಹಿಸಿ ಪಾಲಿಸಿದರು ರಾಜನ್! ಕಂಪನಿ ಕುಬೇರರು ಸುಸ್ತಿದಾರರಾಗಿರುವುದನ್ನು ಮುಚ್ಚಿಡಲು ಹೊಸ ಹೊಸ ಯೋಜನೆಗಳನ್ನು ತಂದರು. ಸಿಡಿಆರ್ ಹೋಗಿ ಎಸ್​ಡಿಆರ್ ಬಂತು. ಆಮೇಲೆ ಎಸ್​ಎಸ್​ಎಸ್​ಎಸ್​ಎ ಎಂಬುದು ಬಂತು! ಕಂಪನಿಗಳು ಹೇಳಿದ್ದಕ್ಕೆಲ್ಲ ಯೆಸ್ ಎನ್ನುವುದೇ ರಾಜನ್ ನಡೆಯಾಗಿತ್ತು. ಕಂಪನಿಗಳ ಕೈಂಕರ್ಯದಲ್ಲಿ ತೊಡಗಿದ್ದ ರಾಜನ್ ಕಾಲದಲ್ಲಿ ಕಂಪನಿಗಳ ಕುಲಗೆಟ್ಟ ಸಾಲ ಕೇವಲ ಶೇ. 3.5 ಎಂದು ಬ್ಯಾಂಕುಗಳು ಹೇಳುತ್ತಿದ್ದವು. ಅಷ್ಟೊಂದು ಮುಚ್ಚಿಟ್ಟದ್ದಿತ್ತು. ಈ ಮನುಷ್ಯ ರಿಸರ್ವ್ ಬ್ಯಾಂಕಿನಿಂದ ತೊಲಗಿದ ಕೂಡಲೇ ಬ್ಯಾಂಕುಗಳ ಎನ್​ಪಿಎ-ಕುಲಗೆಟ್ಟ ಸಾಲವು ಶೇ.10.5 ಅಂದರೆ ಮೂರು ಪಟ್ಟು ಏರಿತ್ತು. ಹೀಗೆ ಕಂಪನಿಗಳ ಭಜನೆ ಮಾಡುವ ರಾಜನ್ ಈಗ ರೈತರ ಸಾಲಮನ್ನಾ ವಿರುದ್ಧ ಹರಿಹಾಯುತ್ತಿದ್ದಾರೆ.

ಒಂದು ವಿಚಾರ, ಕಂಪನಿಗಳ ಸಾಲ ಮನ್ನಾ ಲಾಗಾಯ್ತಿನಿಂದ ನಡೆದುಬಂದಿದೆ. 2008-14ರ ನಡುವೆ 1.61 ಲಕ್ಷ ಕೋಟಿ ರೂ. ಕಂಪನಿ ಸಾಲ ಮನ್ನಾ ಆಗಿದೆ. ಬಳಿಕ ಕಂಪನಿಗಳ ಸಾಲಬಾಕಿ ಹೊರಬಿದ್ದ ಕಾಲ ಬಂತು. ಆಗ ಬ್ಯಾಂಕುಗಳು ಸಾಲ ಮನ್ನಾ ಕಾಯಕವನ್ನು ಇನ್ನೂ ಜೋರಾಗಿ ಮುಂದುವರಿಸಿವೆ. 2015-18ರ ಅವಧಿಯಲ್ಲಿ ಹೀಗಿದೆ ನೋಡಿ. 2014-15ರಲ್ಲಿ 49,081 ಕೋಟಿ ರೂ, 2015-16ರಲ್ಲಿ 57,585 ಕೋಟಿ ರೂ. 2016-17ರಲ್ಲಿ 81,683 ಕೋಟಿ ರೂ, 2017-18ರಲ್ಲಿ 1.20 ಲಕ್ಷ ಕೋಟಿ ರೂ. ಬ್ಯಾಂಕುಗಳ ಬ್ಯಾಲೆನ್ಸ್ ಷೀಟ್​ನಿಂದ ಕಾಣೆಯಾಗಿ ಸಾಲ ಮನ್ನಾ ಆಗಿವೆ. 2017-18ರಲ್ಲಿ ಇಡೀ ಬ್ಯಾಂಕ್ ಲೋಕವು ಕೃಷಿಗೆ ಕೊಟ್ಟ ಸಾಲ ಒಟ್ಟು ಸಾಲದಲ್ಲಿ ಶೇ. 6.37 ಮಾತ್ರ. ಸಾಲಮನ್ನಾ ಮಾಡುತ್ತಿದ್ದರೆ ರೈತನಿಗೆ ಸಾಲ ಕೊಡುವುದು ಕಡಿಮೆ ಆಗುತ್ತೆ ಅಷ್ಟೆ ಎಂದು ಬ್ಯಾಂಕರುಗಳು ಬೊಬ್ಬೆ ಹೊಡೆಯುತ್ತಾರೆ. ಇದು ಶುದ್ಧ ತಪ್ಪು. ಕೃಷಿಗಿಂತ ಮೂರುಪಟ್ಟು ಸಾಲ ಉದ್ಯಮವಲಯಕ್ಕೆ ಸಿಕ್ಕಿದೆ. ಅಲ್ಲೇನು ಸಾಲ ಸುಸ್ತಿ ಇಲ್ಲವೇ? ಲೋಹ ಕಂಪನಿಗಳು ಶೇ. 40 ಸಾಲ ಬಾಕಿ ಇಟ್ಟಿವೆ. ವಾಹನ ಕ್ಷೇತ್ರದಲ್ಲಿ ಶೇ. 50, ಇಂಜಿನಿಯರಿಂಗ್ ಸಾಲ ಬಾಕಿ ಶೇ. 40, ಆಭರಣ ಕ್ಷೇತ್ರದಲ್ಲಿ ಶೇ. 40, ನಿರ್ಮಾಣ ಕ್ಷೇತ್ರದಲ್ಲಿ ಶೇ. 35 ಸಾಲಬಾಕಿ ಇದೆ. ಇಲ್ಲೆಲ್ಲ ಇನ್ನೂ ಬ್ಯಾಂಕ್ ಬ್ಯಾಂಕ್ ಸಾಲ ಹೆಚ್ಚುತ್ತಿದೆ. ಕೃಷಿಗೆ ಮಾತ್ರ ಏಕಿಲ್ಲ?

ಮೋದಿ ಸರ್ಕಾರ ರೈತರ 3 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲು ಚಿಂತಿಸುತ್ತಿದೆ ಎಂದಾಗ ದೇಶದಲ್ಲೆಲ್ಲ ಮಾಧ್ಯಮಗಳು ದೊಡ್ಡ ಹುಯಿಲು ಎಬ್ಬಿಸಿದವು. ಕಂಪನಿಗಳಿಗೆ 2008-13ರವರೆಗೆ ನೀಡಿದ ಸಾಲ ಬ್ಯಾಂಕುಗಳಲ್ಲಿ 18 ಲಕ್ಷ ಕೋಟಿ ರೂಪಾಯಿಯಿಂದ 54 ಲಕ್ಷ ಕೋಟಿ ರೂಪಾಯಿಗೆ ಏರಿತು. ಇದೇ ಬ್ರಹ್ಮಾಂಡವಾಗಿರುವ ಕುಲಗೆಟ್ಟ ಕಂಪನಿ ಸಾಲದ ಮೂಲ. ಇದರ ಹೊರೆಯಿಂದ ಬ್ಯಾಂಕುಗಳನ್ನು ಕಾಪಾಡಲು ಸರ್ಕಾರವು 2.1 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಬಿಡುಗಡೆ ಮಾಡಿದಾಗ ಈಗಿನ ರೈತ ಸಾಲ ಮನ್ನಾ ವಿರುದ್ಧ ಬೊಬ್ಬೆ ಹೊಡೆಯುತ್ತಿರುವ ಮಾಧ್ಯಮ ಪಂಡಿತರು ಈ ಬ್ಯಾಂಕ್ ಪ್ಯಾಕೇಜ್ ಅನ್ನು ಬ್ಯಾಂಕ್ ಗಳನ್ನು ಕಾಪಾಡುವ ಶ್ರೀರಕ್ಷೆ ಎಂದು ಬಿಂಬಿಸಿದರು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ. ಇದು ರಾಜನ್ ಮತ್ತು ಅವರಂಥ ಚಿಂತಕರ ದುರ್ಬುದ್ಧಿ.

ಮಂದಮತಿ ಅರುಂಧತಿ

ರಘುರಾಂ ರಾಜನ್ ಅವರಂಥ ಇನ್ನೋರ್ವ ವ್ಯಕ್ತಿ ಎಂದರೆ ಅರುಂಧತಿ ಭಟ್ಟಾಚಾರ್ಯ. ಈಕೆ ಎಸ್​ಬಿಐನ ಹಿಂದಿನ ಸಿಎಂಡಿ. ಇವರು ರೈತ ಸಾಲ ಮನ್ನಾ ವಿರುದ್ಧ ದೊಡ್ಡ ಪ್ರವಚನ ನೀಡಿದವರೇ. ‘ಹೀಗೆ ಸಾಲಮನ್ನಾ ಮಾಡುತ್ತ ಹೋದರೆ ರೈತರು ಸಾಲ ತೀರಿಸುವುದನ್ನು ಬಿಟ್ಟುಬಿಡುತ್ತಾರೆ, ಚುನಾವಣೆ ಬರುತ್ತೆ ಸಾಲಮನ್ನಾ ಆಗುತ್ತೆ ಎಂದು ಸಾಲ ತೀರಿಸುವುದಿಲ್ಲ’ ಎಂಬುದು ಇವರ ಪ್ರವಚನ. ಹೀಗೆ ಪ್ರವಚನ ಮಾಡುವ ಭಟ್ಟಾಚಾರ್ಯ ಎಸ್​ಬಿಐ ವರಿಷ್ಠರಾಗಿದ್ದಾಗ ಮಾಡಿದ್ದಾದರೂ ಏನು? ಅವರ ರೈತ ಸಾಲಮನ್ನಾ ವಿರುದ್ಧದ ಮಾತು ಪ್ರಕಟವಾದ ಕಾಲದಲ್ಲೇ ಹೊರಬಿದ್ದ ಒಂದು ಸುದ್ದಿ ಹೀಗಿತ್ತು-ಈಗ ಎಸ್​ಬಿಐ ಬ್ಯಾಲೆನ್ಸ್ ಷೀಟ್​ನಿಂದ ಸಾಲಮನ್ನಾ ರೂಪದಲ್ಲಿ 7016 ಕೋಟಿ ರೂ. ಮಾಫಿ ಆಗಿದೆ. ಇದರಲ್ಲಿ ಕಿಂಗ್ ಫಿಷರ್​ನ ಮಲ್ಯರ 1201 ಕೋಟಿ ರೂ. ಕೂಡ ಸೇರಿದೆ. ಇನ್ನೊಂದು ಸುದ್ದಿ, 2013-15ರ ಅವಧಿಯಲ್ಲಿ ಕಂಪನಿ ಸ್ವಾಮ್ಯದ ಬ್ಯಾಂಕ್​ಗಳು 1.14 ಲಕ್ಷ ಕೋಟಿ ರೂ.ಗಳನ್ನು ಕಂಪನಿಗಳಿಗೆ ಮಾಫಿ ಮಾಡಿವೆ. ಇದರಲ್ಲಿ ಮುಂದಾಳು ಎಸ್​ಬಿಐ. ಅದರ ಪಾಲು 40,084 ರೂ.

ಕಂಪನಿಯ ಸಾಲಮನ್ನಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಅರುಂಧತಿ ಮಹಾರಾಷ್ಟ್ರ ಸರ್ಕಾರ ರೈತ ಸಾಲ ಮನ್ನಾ ಘೊಷಿಸಿದ ಕೂಡಲೇ ‘ಇದು ಕೂಡದು’ ಎಂದು ಬೊಬ್ಬೆ ಹೊಡೆದಿದ್ದರು. ಒಂದು ಮಾತು, ಬ್ಯಾಂಕ್ ಲೋಕದ ಸಾಲದಲ್ಲಿ ಕೃಷಿ ಪಾಲು ಎಷ್ಟು ಅಲ್ಪ ಎಂದರೆ ಪರ್ಸನಲ್ ಸಾಲದ ಪಾಲು ಈ ಕೃಷಿ ಸಾಲ ಬಾಕಿಗಿಂತ ಡಬಲ್ ಇದೆ. ಹಾಗಾಗಿ ಬ್ಯಾಂಕಿಂಗ್ ಲೋಕದ ಬಾಯಿಬಡುಕರೆಲ್ಲ ಕೃಷಿ ಸಾಲದ ಬಗ್ಗೆ ಮರುಕ ತೋರಿದರೆ ಸ್ವಲ್ಪವಾದರೂ ಮರ್ಯಾದೆ ಉಳಿದೀತು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...