Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಗೃಹ ಸಾಲ ರಿಜೆಕ್ಟ್ ಆದ್ರೆ ಏನ್ ಮಾಡ್ಬೇಕು?

Monday, 09.07.2018, 3:03 AM       No Comments

# ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗಷ್ಟೇ ನಾನು ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ಕ್ರೆಡಿಟ್ ಸ್ಕೋರ್ ಸರಿ ಇಲ್ಲ ಎನ್ನುವ ಕಾರಣ ನೀಡಿ ಸಾಲದ ಅರ್ಜಿ ತಿರಸ್ಕರಿಸಲಾಗಿದೆ. ಈಗ ನಾನು ಏನು ಮಾಡಬಹುದು ತಿಳಿಸಿ

| ಅಶ್ವಿನ್ ಬಾನೂರು ಬೆಂಗಳೂರು

ಕ್ರೆಡಿಟ್ ಸ್ಕೋರ್ ಸರಿಯಿಲ್ಲ ಎಂಬ ಕಾರಣಕ್ಕೆ ಸಾಲದ ಅರ್ಜಿ ತಿರಸ್ಕರಿಸಿದ್ದಾರೆ ಎಂದು ನೀವು ಹೇಳಿದ್ದೀರಿ. ಆದರೆ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆಯಾಗಿದೆ ಎಂಬುದರ ಬಗ್ಗೆ ನೀವು ಮಾಹಿತಿ ಒದಗಿಸಿಲ್ಲ. ಹಾಗಾಗಿ ನಾನು ಎಲ್ಲರಿಗೂ ಅನ್ವಯಿಸುವಂತಹ ಉತ್ತರ ನೀಡಲು ಬಯಸುತ್ತೇನೆ. ಬ್ಯಾಂಕ್​ಗಳು ಗೃಹ ಸಾಲ ನೀಡುವಾಗ ಹಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಸಾಲ ಪಡೆಯುವ ವ್ಯಕ್ತಿಯ ಒಟ್ಟು ಮಾಸಿಕ ವೇತನ, ಸಾಲ ಮರು ಪಾವತಿ ಸಾಮರ್ಥ್ಯ, ಅರ್ಜಿದಾರರ ವಯಸ್ಸು, ಆರ್ಥಿಕ ಸ್ಥಿತಿಗತಿ, ಈ ಹಿಂದೆ ಸಾಲ ಪಡೆದಿರುವ ಇತಿಹಾಸ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸುತ್ತವೆ. ಹಿಂದೆ ಮಾಡಿರುವ ಸಾಲವನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡದಿದ್ದರೆ, ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸದಿದ್ದರೆ, ತಡವಾಗಿ ಸಾಲ ಪಾವತಿಸಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇರುತ್ತದೆ. ಕ್ರೆಡಿಟ್ ಸ್ಕೋರ್ ಸಾಲ ಪಡೆದ ವ್ಯಕ್ತಿಯ ನಡವಳಿಕೆಯ ಸಂಪೂರ್ಣ ವಿವರ ಒದಗಿಸುತ್ತದೆ. ಕ್ರೆಡಿಟ್ ಸ್ಕೋರ್​ನಲ್ಲಿ ನಿಮ್ಮ ಟ್ರಾ್ಯಕ್ ರೆಕಾರ್ಡ್ ಸರಿಯಿಲ್ಲದಿದ್ದರೆ ನಿಮಗೆ ಸಾಲ ಸಿಗುವುದು ಕಷ್ಟವಾಗುತ್ತದೆ. ಗೃಹ ಸಾಲವನ್ನು 15 – 20 ವರ್ಷಗಳಿಗೆ ನೀಡುವುದರಿಂದ ಹಲವು ವಿಚಾರಗಳನ್ನು ಗಮನಿಸಿದ ಬಳಿಕವಷ್ಟೇ ಸಾಲದ ಅರ್ಜಿಯನ್ನು ಬ್ಯಾಂಕ್​ಗಳು ಪುರಸ್ಕರಿಸುತ್ತವೆ. ನೀವು ಖರೀದಿಸುತ್ತಿರುವ ಆಸ್ತಿಯ ದಾಖಲೆಗಳಲ್ಲಿ ದೋಷಗಳಿದ್ದರೆ, ನಿಮ್ಮ ಉದ್ಯೋಗ ಸ್ಥಿರವಾಗಿರದಿದ್ದರೆ, ಸಾಲಕ್ಕಾಗಿ ಸಲ್ಲಿಸಿರುವ ದಾಖಲೆಗಳು ಅಪೂರ್ಣವಾಗಿದ್ದರೆ, ನೀವು ಖರೀದಿಸಲು ಮುಂದಾಗಿರುವ ಮನೆಯ ಮೇಲೆ ಈಗಾಗಲೇ ಸಾಲವಿದ್ದರೆ ನಿಮ್ಮ ಗೃಹ ಸಾಲದ ಅರ್ಜಿ ತಿರಸ್ಕೃತವಾಗುತ್ತದೆ.

ಗೃಹ ಸಾಲ ತಿರಸ್ಕೃತವಾಗಲು ಸಾಮಾನ್ಯ ಕಾರಣಗಳು

 • ಕ್ರೆಡಿಟ್ ಸ್ಕೋರ್ ಸರಿಯಿಲ್ಲದಿರುವುದು
 • ಕ್ರೆಡಿಟ್ ಸ್ಕೋರ್ ದೋಷಪೂರಿತವಾಗಿರುವುದು
 • ಈ ಹಿಂದೆ ಮಾಡಿದ್ದ ಸಾಲ ಮರುಪಾವತಿಯಲ್ಲಿ ವಿಳಂಬ
 • ಸ್ಥಿರವಾದ ಉದ್ಯೋಗ ಇಲ್ಲದಿರುವುದು
 • ಗೃಹ ಸಾಲದ ಅರ್ಜಿದಾರನ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿರುವುದು
 • ಆಸ್ತಿಗೆ ಸಂಬಂಧಿಸಿದಂತೆ ಅಪೂರ್ಣ ದಾಖಲೆಗಳ ಸಲ್ಲಿಕೆ
 • ಸಾಲ ಪಡೆಯುವ ವ್ಯಕ್ತಿಯ ವಯಸ್ಸು ಹೆಚ್ಚಾಗಿದ್ದರೆ ಸಾಲ ಸಿಗುವುದಿಲ್ಲ
 • ಈಗಾಗಲೇ ಅತಿಯಾದ ಸಾಲ ಮಾಡಿಕೊಂಡಿದ್ದರೆ ಸಾಲ ಸಿಗುವುದಿಲ್ಲ.

 

ಗೃಹ ಸಾಲ ತಿರಸ್ಕೃತವಾಗದಂತೆ ಮಾಡುವುದು ಹೇಗೆ?

 • ಕ್ರೆಡಿಟ್ ಸ್ಕೋರ್ ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು
 • ಕ್ರೆಡಿಟ್ ಸ್ಕೋರ್​ನಲ್ಲಿ ತಪ್ಪುಗಳಾಗಿದ್ದಲ್ಲಿ ಅದನ್ನು ಸರಿಪಡಿಸುವುದು
 • ಈಗಾಗಲೇ ಇರುವ ಸಾಲಗಳನ್ನು ಮರುಪಾವತಿ ಮಾಡುವುದರ ಜತೆಗೆ ಅಲ್ಪಾವಧಿ ಸಾಲಗಳನ್ನು ತೀರಿಸುವುದು
 • ತಿಂಗಳ ಸಂಬಳ ಪಡೆಯುತ್ತಿರುವ ಮತ್ತೊಬ್ಬ ಕುಟುಂಬ ಸದಸ್ಯನನ್ನು ಗೃಹ ಸಾಲಕ್ಕಾಗಿ ಸಹ ಅರ್ಜಿದಾರನನ್ನಾಗಿ ಸೇರಿಸಬಹುದು
 • ವ್ಯವಸ್ಥಿತ ಮರುಪಾವತಿ ಯೋಜನೆ ರೂಪಿಸುವುದು
 • ಉಳಿತಾಯ ಮತ್ತು ಹೂಡಿಕೆ ಮೂಲಕ ಸ್ಥಿರ ಆದಾಯ ಬರುವಂತೆ ಮಾಡಿಕೊಳ್ಳುವುದು
 • ಹೆಚ್ಚುವರಿ ಆದಾಯದ ವಿವರಗಳನ್ನು ನೀಡುವುದು

 

# ನನ್ನ ಹೆಸರು ಕೇಶವ. ಮೈಸೂರಿನ ಖಾಸಗಿ ಕಂಪನಿಯ ಉದ್ಯೋಗಿ. ಮ್ಯೂಚುವಲ್ ಫಂಡ್​ನಲ್ಲಿ 13 ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ ಮಗಳ ಮದುವೆಗೆ 25 ಲಕ್ಷ ರೂ. ಹಣ ಉಳಿತಾಯ ಮಾಡಿದ್ದೇನೆ. ನವೆಂಬರ್​ನಲ್ಲಿ ನನ್ನ ಮಗಳ ಮದುವೆ ಇದೆ. ಅಲ್ಲಿಯ ತನಕ ಈ ಹಣವನ್ನು ಡೆಟ್ ಫಂಡ್​ನಲ್ಲಿ ಇಡಲು ಉದ್ದೇಶಿಸಿದ್ದೇನೆ. ಇದು ಸರಿಯಾದ ನಿರ್ಧಾರವೇ ?

ಮ್ಯೂಚುವಲ್ ಫಂಡ್​ನಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ ಎನ್ನುವುದಕ್ಕೆ ನಿಮ್ಮ ಪ್ರಯತ್ನವೇ ಸಾಕ್ಷಿ. ನಿಮಗೆ ಇನ್ನು ನಾಲ್ಕೈದು ತಿಂಗಳಲ್ಲಿ ಹಣ ಬೇಕಾಗುವುದರಿಂದ ಡೆಟ್ ಫಂಡ್ (ಸಾಲ ನಿಧಿ) ಗಳಲ್ಲಿ ಹೂಡಿಕೆ ಸೂಕ್ತವಲ್ಲ. ಡೆಟ್​ಫಂಡ್​ಗಳ ಕೆಲ ಮಾದರಿಯ ಹೂಡಿಕೆಗಳಲ್ಲಿ ರಿಸ್ಕ್ ಜಾಸ್ತಿ ಇರುತ್ತದೆ. ಡೆಟ್ ಫಂಡ್ ಮಾದರಿಗಳಾದ ಗಿಲ್ಟ್ ಫಂಡ್ ಮತ್ತು ಕ್ರೆಡಿಟ್ ರಿಸ್ಕ್ ಫಂಡ್​ಗಳಲ್ಲಿ ಹೂಡಿಕೆ ಮಾಡುವ ಹಣಕ್ಕೆ ಭದ್ರತೆ ಅಷ್ಟಾಗಿ ಇಲ್ಲ. ಹಾಗಾಗಿ ನೀವು ಲಿಕ್ವಿಡ್ ಫಂಡ್ ಮತ್ತು ಅಲ್ಟ್ರಾ ಶಾರ್ಟ್ ಟಮ್ರ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎಂಬುದು ನನ್ನ ಸಲಹೆ. ನಿಮ್ಮ ಉಳಿತಾಯದ ಹಣವನ್ನು ಈ ಎರಡು ಫಂಡ್​ಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಹೆಚ್ಚು ಸುರಕ್ಷಿತವಾಗಿರುವ ಸಾಧ್ಯತೆಯಿದ್ದು, ಅಗತ್ಯವಿದ್ದಾಗ ಹಣ ವಾಪಸ್ ಪಡೆಯಲು ಅವಕಾಶಗಳನ್ನೂ ಈ ಫಂಡ್ ಕಲ್ಪಿಸುತ್ತದೆ. ಇದಲ್ಲದೆ ಎಫ್​ಡಿ ಅಥವಾ ಉಳಿತಾಯ ಖಾತೆ ಮೇಲೆ ಸಿಗುವ ಬಡ್ಡಿ ದರಕ್ಕಿಂತ ಇದು ಹೆಚ್ಚು ಲಾಭ ತಂದುಕೊಡುವ ಸಾಧ್ಯತೆ ಇರುವುದರಿಂದ ಲಿಕ್ವಿಡ್ ಫಂಡ್ ಮತ್ತು ಅಲ್ಟ್ರಾ ಶಾರ್ಟ್ ಟಮ್ರ್ ಫಂಡ್​ಗಳಲ್ಲಿ ಹೂಡಿಕೆ ಸರಿಯಾದ ಕ್ರಮ ಎನ್ನಬಹುದು. ಲಿಕ್ವಿಡ್ ಫಂಡ್ ಮತ್ತು ಅಲ್ಟ್ರಾ ಶಾರ್ಟ್ ಟಮ್ರ್ ಫಂಡ್ ಬಗ್ಗೆ ಇನ್ನಷ್ಟು ಸ್ಪಷ್ಟತೆಗಾಗಿ ಈ ಕೆಳಗಿನ ಟೇಬಲ್ ಗಮನಿಸಿ.

Leave a Reply

Your email address will not be published. Required fields are marked *

Back To Top