ಸ್ವಾರಸ್ಯಕರ ದಿನಗಳು ಮುಂದೆ ಕಾದಿವೆ….

Latest News

ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮೂಲಕ ಭಾರತಕ್ಕೆ ಬರುತ್ತಿದೆ ನಕಲಿ ಔಷಧ!

ಮುಂಬೈ: ಪಕ್ಕದ ರಾಷ್ಟ್ರ ಬಾಂಗ್ಲಾದೇಶದಿಂದ ನಕಲಿ ಔಷಧಗಳು ಅಕ್ರಮವಾಗಿ ಭಾರತದ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಲಗ್ಗೆ ಇಡುತ್ತಿವೆ ಎಂಬ ಕಳವಳಕಾರಿ ಮಾಹಿತಿ ಬಹಿರಂಗಗೊಂಡಿದೆ....

ಕೃಷಿ ಮೇಳ ದೂರ… ದೂರ

ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯ ಆಯೋಜಿಸುವ ಕೃಷಿ ಮೇಳಕ್ಕೂ ಅತಿವೃಷ್ಟಿಯ ಬಿಸಿ ತಟ್ಟಿದೆ. ರೈತರಿಂದ ರೈತರಿಗಾಗಿ ಮಾಹಿತಿ, ಕೃಷಿಯಲ್ಲಿ ತಾಂತ್ರಿಕತೆ ವಿವರ, ಸುಧಾರಿತ...

ಮಹಾರಾಷ್ಟ್ರ ರಾಜಕೀಯ ಮತ್ತೊಂದು ತಿರುವಿನತ್ತ ಹೊರಳುವ ಸುಳಿವು

ಪುಣೆ/ನವದೆಹಲಿ: ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್​ನ ಮೈತ್ರಿ ನಿರ್ಧಾರ ಸರ್ಕಾರ ರಚನೆಯ ಮಹಾ ಸರ್ಕಸ್​ಗೆ ತೆರೆ ಎಳೆಯಿತು ಎಂದು ಜನತೆ ನಿಟ್ಟುಸಿರು ಬಿಡುವಷ್ಟರಲ್ಲೇ ಮಹಾರಾಷ್ಟ್ರ...

ಗುರೂಪದೇಶವೇ ಬಾಳಿಗೆ ಬೆಳಕು

ಕಣ್ಣಿಗೆ ಆಕರ್ಷಕ ಅನ್ನಿಸುವಂತಹ ಅನೇಕ ವಿಷಯಗಳು ಸುತ್ತಲೂ ಇವೆ. ಹೃದಯಕ್ಕೆ ಸರಿಯೆನಿಸುವ ಸಂಗತಿಗಳನ್ನು ಆಯ್ದುಕೊಂಡಾಗ ಬದುಕು ಸುಂದರವಾಗುತ್ತದೆ. ಮೊದಲ ತಪ್ಪಿನಿಂದ ಪಾಠ ಕಲಿಯದಿದ್ದರೆ...

ಕಾಡಿದ ಕನಸಿನ ಬೆನ್ನತ್ತಿದಾಗ…

ಸಕಲ ಸಂಕೋಲೆಗಳನ್ನು ಕಳಚಿ ಮುಂದೆ ಬರುವುದು ಹೆಣ್ಣಿಗೆ ಗಂಡಿನಷ್ಟು ಸುಲಭವಾದ ಮಾತಲ್ಲ ಎನ್ನುವುದು ಸತ್ಯವೇ. ಅವುಗಳ ನಡುವೆಯೂ ಸಾಧನೆಯ ಉತ್ತುಂಗಕ್ಕೇರಿ ‘ಮೊದಲಿಗರು’ ಎಂಬ ಬಿರುದು ಪಡೆದಿರುವ...

ಮಲ್ಯರನ್ನು ಗಡಿಪಾರು ಮಾಡುವ ವಿಷಯದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಅನುಕೂಲಕರ ತೀರ್ಪ, ಇಂಥ ಎಲ್ಲ ಆರ್ಥಿಕ ಅಪರಾಧಿಗಳಲ್ಲಿ ನಖಶಿಖಾಂತ ನಡುಕವನ್ನೇ ಹುಟ್ಟಿಸಿಬಿಟ್ಟಿತು. ನೀರವ್ ಮೋದಿ, ಮೆಹುಲ್ ಚೋಕ್ಸಿಯಂಥ ಅನೇಕ ತಪ್ಪಿತಸ್ಥರು ಇದರಿಂದ ಇನ್ನೂ ಹೆಚ್ಚು ದಿಗಿಲಾಗಿರಲಿಕ್ಕೂ ಸಾಕು.

ದೇಶದ ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲಿ ಕಳೆದ 15 ದಿನಗಳಿಂದ ಕ್ಷಿಪ್ರಗತಿಯ ಅನೇಕ ಬೆಳವಣಿಗೆಗಳಾಗಿವೆ. ಉತ್ತರ ಭಾರತದ ಹಿಂದಿಭಾಷಿಕ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗಾಳಿ ಬಿರುಸಾಗಿ ಬೀಸಿರುವುದು, 2019ರ ಲೋಕಸಭಾ ಚುನಾವಣೆಗಳ ಕುರಿತಂತೆ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿರುವುದಂತೂ ಹೌದು. ಒಂದೊಮ್ಮೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, 2014ರಿಂದೀಚೆಗೆ ಎನ್​ಡಿಎ ಸರ್ಕಾರದಿಂದ ಚಾಲನೆಗೊಂಡಿರುವ ಸುಧಾರಣಾಗತಿಗೆ ಅಡಚಣೆಗಳು ಎದುರಾಗಬಹುದು. ವಿಜಯ್ ಮಲ್ಯ ಹಸ್ತಾಂತರ ವಿಚಾರದಲ್ಲಿ ಆರಂಭಿಕ ಯಶಸ್ಸು ಹಾಗೂ ಅಗಸ್ಟಾ ಹೆಲಿಕಾಪ್ಟರ್ ವ್ಯವಹಾರದಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೇಲ್ ಬಂಧನ ಮತ್ತು ವಿಚಾರಣಾ ಪ್ರಕ್ರಿಯೆಗಳು, ಸರ್ಕಾರದ ನೆರವಿಗೆ ಬಂದಿವೆ ಎನ್ನಬೇಕು. ಆದಾಗ್ಯೂ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸಂಬಂಧಿತ ಬೆಳವಣಿಗೆಗಳು ಸರ್ಕಾರವನ್ನು ಹಿಂದಡಿ ಇಡುವಂತೆ ಮಾಡಿವೆ ಹಾಗೂ ಹಲವು ತೆರನಾದ ವಿವರಣೆ ನೀಡಬೇಕಾದ ಸ್ಥಿತಿಗೆ ಅದನ್ನು ತಂದುನಿಲ್ಲಿಸಿವೆ. ಇನ್ನೊಂದೆಡೆ, ರಫೇಲ್ ಯುದ್ಧವಿಮಾನ ಖರೀದಿ ವಿಷಯದಲ್ಲಿ ಸವೋಚ್ಚ ನ್ಯಾಯಾಲಯ ‘ಕ್ಲೀನ್​ಚಿಟ್’ ನೀಡಿರುವುದು, ಭ್ರಷ್ಟಾಚಾರದ ಕುರಿತಾದ ಸರ್ಕಾರದ ನಿಲುವಿಗೆ ಮತ್ತಷ್ಟು ಬಲತುಂಬಿರುವುದು ದಿಟ.

ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ ಸರ್ಕಾರಕ್ಕೆ ಒದಗಿದ ಅನಿರೀಕ್ಷಿತ ಆಘಾತವೆನ್ನಬೇಕು. ಒಟ್ಟಾರೆ ವಾತಾವರಣ ತಣ್ಣಗಾಗಿತ್ತಾದರೂ, ಹಾಗೂ ವಿತ್ತೀಯ ಮತ್ತು ಬ್ಯಾಂಕಿಂಗ್ ವಲಯದ ಬಹುತೇಕರು ಈ ವಾಸ್ತವತೆಗೆ ಒಪ್ಪಿಕೊಂಡಿದ್ದರಾದರೂ, ಉರ್ಜಿತ್ ಪಟೇಲ್ ಅನಿರೀಕ್ಷಿತ ನಡೆಯೆಂಬಂತೆ ಗವರ್ನರ್ ಹುದ್ದೆಯಿಂದ ಹೊರನಡೆದರು. ಆರ್​ಬಿಐ ಗವರ್ನರ್ ರಾಜೀನಾಮೆ ಹೊಸ ವಿದ್ಯಮಾನವೇನೂ ಅಲ್ಲ; ಆದರೆ ಅದರ ಪರಿಣಾಮ ಸುಸ್ಪಷ್ಟವಾಗಿತ್ತು ಮತ್ತು ಅನಿವಾರ್ಯವಾಗಿತ್ತು. ಆರ್​ಬಿಐ ಪಾತ್ರ ಹಾಗೂ ಅದಕ್ಕಿರಬೇಕಾದ ಸ್ವಾತಂತ್ರ್ಯದ ಕುರಿತಾದ ಪ್ರಶ್ನೆ, ಈ ಸಂದರ್ಭದಲ್ಲಿ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗುವುದಕ್ಕೂ ಈ ವಿದ್ಯಮಾನ ಕಾರಣವಾಯಿತು. ಆರ್​ಬಿಐ ಸ್ವಾಯತ್ತತೆ ಅವ್ಯತ್ಯಸನೀಯವಾಗಿದೆ (ಅಂದರೆ ವ್ಯತ್ಯಾಸ ಮಾಡಲಾಗದಂಥದ್ದಾಗಿದೆ) ಎಂಬುದೇನೋ ನಿಜವೇ, ಆದರೆ ತನ್ನ ಕಾರ್ಯಚಟುವಟಿಕೆಗಳು ಮತ್ತು ಕಾರ್ಯನೀತಿ ನಿರ್ಣಯಗಳಿಗೆ ಸಂಬಂಧಿಸಿದಂತೆ ಆರ್​ಬಿಐ ಅನ್ನು ಉತ್ತರದಾಯಿಯಾಗಿಸಬೇಕಾದ ಅಗತ್ಯವೂ ಇದೆ. ಏಕೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿನ ಯಾವುದೇ ಸಂಸ್ಥೆಯೂ, ನಿರ್ದಿಷ್ಟ ಸ್ವಾತಂತ್ರ್ಯದ ಪರಿಮಿತಿಯೊಳಗೇ ಕಾರ್ಯನಿರ್ವಹಿಸಬೇಕಾಗುತ್ತದೆ; ‘ಪರಿಪೂರ್ಣ ಸ್ವಾತಂತ್ರ್ಯ’ದ ಪರಿಕಲ್ಪನೆ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಹೊಂದಿಕೊಳ್ಳುವುದಿಲ್ಲ ಅಥವಾ ಅಸಮಂಜಸವೆನಿಸುತ್ತದೆ. ಸ್ವಾಯತ್ತತೆ ಮತ್ತು ಸ್ವಾತಂತ್ರ್ಯದಂಥ ವಿಶೇಷಾಧಿಕಾರವು, ಆರ್ಥಿಕ ಬೆಳವಣಿಗೆ ಮತ್ತು ಕ್ಷೇಮಾಭಿವೃದ್ಧಿಯಂಥ ಸರ್ಕಾರದ ಗುರಿಗಳ ಉದ್ದೇಶಕ್ಕೆ ಅಡಿಯಾಳಾಗಲು ಸಾಧ್ಯವಿಲ್ಲ. ಐಎಫ್​ಎಲ್​ಎಸ್ ಅಧ್ವಾನದ ತರುವಾಯದಲ್ಲಿ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಸಾಗಣೆ ಮತ್ತು ರಿಯಲ್ ಎಸ್ಟೇಟ್​ನಂಥ ಅನೇಕ ವಲಯಗಳಿಗೆ ಸಂಬಂಧಿಸಿದ ಹಣಕಾಸು ಹರಿವು ಸೊರಗತೊಡಗಿತು ಮತ್ತು ಇದು ಆರ್ಥಿಕತೆಯ ಆರೋಗ್ಯದ ಮೇಲೂ ನೇರ ಪರಿಣಾಮವನ್ನು ಬೀರಿತು. ದೋಷನಿವಾರಕ ಕ್ರಿಯಾಯೋಜನೆ (ಇಟ್ಟ್ಟ್ಚಜಿಡಛಿ ಅಠಿಜಿಟ್ಞ ಖ್ಚಜಛಿಞಛಿ) ಅನುಸಾರ ಬ್ಯಾಂಕಿಂಗ್ ವಲಯವೂ ಒತ್ತಡದಲ್ಲಿ ಸಿಲುಕಿತ್ತು. ವಾಸ್ತವತೆಯನ್ನು ಆರ್​ಬಿಐ ಅರ್ಥಮಾಡಿಕೊಂಡು ಅದಕ್ಕನುಸಾರವಾಗಿ ಬದಲಾವಣೆಗಳನ್ನು ಮಾಡುತ್ತದೆ ಎಂಬುದು ಸರ್ಕಾರದ ಸಹಜ ನಿರೀಕ್ಷೆಯಾಗಿತ್ತು. ಇದೊಂದು ಸಮಂಜಸ ಕಾಳಜಿಯೇ ಆಗಿದ್ದರೂ, ಈ ನಿಟ್ಟಿನಲ್ಲಿ ಪ್ರತಿಸ್ಪಂದಿಸಲು ಆರ್​ಬಿಐ ವಿಳಂಬಿಸಿತು. ಅದೇನೇ ಇರಲಿ, ಎಲ್ಲ ಬೆಳವಣಿಗೆಗಳನ್ನೂ ಪರಿಗಣನೆಗೆ ತೆಗೆದುಕೊಂಡಲ್ಲಿ, ಸರ್ಕಾರ ಈ ನಿಟ್ಟಿನಲ್ಲಿ ತೋರಿದ ದೃಢತೆ ಮತ್ತು ತೋರಿದ ಗಮನಗಳು ಮೇಲುಗೈ ಸಾಧಿಸಿದವು ಎನ್ನಬೇಕು.

ವಿಜಯ್ ಮಲ್ಯರನ್ನು ಭಾರತಕ್ಕೆ ಮರಳಿ ಕರೆತಂದು, ಅವರ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕಾದ ಅಗಾಧ ಒತ್ತಡಕ್ಕೆ ಸರ್ಕಾರ ಸಿಲುಕಿತ್ತು. ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿದೆ ಎಂಬುದನ್ನು ಸರ್ಕಾರ ಈ ಸಂದರ್ಭದಲ್ಲಿ ತಳೆದ ನಿಲುವು ಸಾಬೀತುಪಡಿಸಿತೆನ್ನಬೇಕು. ಬ್ರಿಟಿಷ್ ಕಾನೂನುಗಳು ತೀರಾ ಕಟ್ಟುನಿಟ್ಟಿನವಾಗಿದ್ದು, ತನ್ನ ನೆಲದ ನಿವಾಸಿಗಳ ಪರವಾಗೇ ಯಾವಾಗಲೂ ದನಿಯೆತ್ತುತ್ತವೆ ಎಂಬುದನ್ನಿಲ್ಲಿ ಗಮನಿಸಬೇಕು. ಮಲ್ಯರನ್ನು ಗಡಿಪಾರು ಮಾಡುವ ವಿಷಯದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಅನುಕೂಲಕರ ತೀರ್ಪ, ಇಂಥ ಎಲ್ಲ ಆರ್ಥಿಕ ಅಪರಾಧಿಗಳಲ್ಲಿ ನಖಶಿಖಾಂತ ನಡುಕವನ್ನೇ ಹುಟ್ಟಿಸಿಬಿಟ್ಟಿತು. ನೀರವ್ ಮೋದಿ, ಮೆಹುಲ್ ಚೋಕ್ಸಿಯಂಥ ಅನೇಕ ತಪ್ಪಿತಸ್ಥರು ಇದರಿಂದ ಇನ್ನೂ ಹೆಚ್ಚು ದಿಗಿಲಾಗಿರಲಿಕ್ಕೂ ಸಾಕು. ಸರ್ಕಾರ ಪಟ್ಟುಹಿಡಿದು ಇಂಥದೊಂದು ನಿಲುವನ್ನು ತಳೆಯುವುದೆಂದು ಯಾರೊಬ್ಬರೂ ಎಂದೂ ಯೋಚಿಸಿರಲಿಲ್ಲ.

‘ಉದ್ಯಮ ಸಾಮ್ರಾಟ’ ಎನಿಸಿಕೊಂಡಿದ್ದವರೊಬ್ಬರು ಇಂಥದೊಂದು ಅವಮಾನಕರ ಪ್ರಕ್ರಿಯೆಗೆ ಒಳಗಾಗಬೇಕಾಗಿ ಬಂದಿರುವುದು ನಿಜಕ್ಕೂ ವಿಷಾದನೀಯ. ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು ಮತ್ತು ವೈಫಲ್ಯ ಸಾಮಾನ್ಯ ಸಂಗತಿಯಾದರೂ, ಇಂಥ ಘಟನೆಗಳನ್ನು ಮಲ್ಯ ತಪ್ಪಿಸಬಹುದಿತ್ತು. ಬ್ಯಾಂಕುಗಳಿಗೆ ಅಗಾಧ ಮೊತ್ತದ ಸಾಲದ ಹಣವನ್ನು ಬಾಕಿ ಉಳಿಸಿಕೊಂಡಿರುವ ಇನ್ನೂ ಅನೇಕ ದೊಡ್ಡದೊಡ್ಡ ಬಾಕಿದಾರರು ದೇಶದಲ್ಲಿದ್ದು, ಇದಕ್ಕೊಂದು ಪರಿಹಾರೋಪಾಯ ಕಂಡುಕೊಳ್ಳುವ ನಿಟ್ಟಿನಲ್ಲಿ ಅವರೆಲ್ಲ ಆಯಾಯಾ ಬ್ಯಾಂಕುಗಳೊಂದಿಗೆ ಸಹಕರಿಸಿದ್ದಾರೆ. ಆದರೆ ಮಲ್ಯರಲ್ಲಿ ಮಡುಗಟ್ಟಿರುವ ಅಹಮಿಕೆ ಹಾಗೂ ತಮಗೆ ಯಾರೇನೂ ಮಾಡಲಾಗದು ಎಂಬ ವರ್ತನೆಯೇ ಅವರನ್ನು ಇಂಥದೊಂದು ತೊಂದರೆಯಲ್ಲಿ ಸಿಲುಕಿಸಿತೇನೋ… ಅನೇಕ ತಿಂಗಳವರೆಗೆ ವೇತನಗಳು ಮತ್ತು ಶಾಸನವಿಹಿತ ಬಾಕಿಗಳನ್ನು ಪಾವತಿಸದಿರುವುದನ್ನು ಯಾವ ಆಳುಗ ವ್ಯವಸ್ಥೆಯೂ ಮನ್ನಿಸುವುದಿಲ್ಲ. ಹೀಗಾಗಿ, ವಂಚಿಸುವ ದೃಷ್ಟಿಯಿಟ್ಟುಕೊಂಡು ಭಾರತದಿಂದ ಯೋಜಿತ ರೀತಿಯಲ್ಲಿ ಪರಾರಿಯಾಗುವುದೇ ಅವರ ಬತ್ತಳಿಕೆಯಲ್ಲಿ ಉಳಿದಿದ್ದ ಕೊನೆಯ ಅಸ್ತ್ರವಾಗಿತ್ತು. ತಮ್ಮ ಖಾಸಗಿ ಸ್ವತ್ತುಗಳ ಆಧಾರದ ಮೇಲೆ ಬ್ಯಾಂಕಿನ ಎಲ್ಲ ಬಾಕಿಗಳನ್ನು ಪಾವತಿಸುವುದಾಗಿ ಅವರು ಇತ್ತೀಚೆಗಷ್ಟೇ ಮಂಡಿಸಿರುವ ಪ್ರಸ್ತಾವವು, ಕಾನೂನು ಕ್ರಮ/ಕಾರ್ಯಾಚರಣೆಯ ಔಚಿತ್ಯವನ್ನೇ ಪ್ರಶ್ನಿಸುವಂತಿದೆ. ‘ಭಾರತವೊಂದು ಸದೃಢ-ಸಮರ್ಥ ದೇಶವಾಗಿದ್ದು, ಕಾನೂನಿನ ಬಾಹುಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮೋಸಗಾರರು ಹರಸಾಹಸ ಪಡಬೇಕಾಗುತ್ತದೆ’ ಎಂಬುದೊಂದು ಸಂದೇಶ ಈ ಒಂದಿಡೀ ಪ್ರಸಂಗದಿಂದ ಹೊಮ್ಮಿದಂತಾಗಿದೆ. ದೊಡ್ಡವರೆನಿಸಿಕೊಂಡವರು ಮಾಡುವ ಇಂಥ ಅಪರಾಧಗಳು (ಡಿಜಜಿಠಿಛಿ ್ಚlಚ್ಟ cಜಿಞಛಿಠ) ಹಾಗೂ ಅಂಥವರಿಗೆ ವಿವಿಧ ರಾಷ್ಟ್ರಗಳಿಂದ ದಕ್ಕುತ್ತಿರುವ ಕೃಪಾಶ್ರಯದಂಥ ಚರ್ಚಾವಿಷಯ/ಸಮಸ್ಯೆಯ ಕುರಿತಾಗಿ ಸಮಾಲೋಚಿಸಬೇಕಾದ ಅಗತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚಿನ ಜಿ-20 ಶೃಂಗಸಭೆಯಲ್ಲಿ ಒತ್ತಿಹೇಳಿದ್ದನ್ನು ಇಲ್ಲಿ ಉಲ್ಲೇಖಿಸಿದರೆ ಅದು ಅಪ್ರಸ್ತುತವಾಗಲಾರದು. ಸದಸ್ಯ ದೇಶಗಳಲ್ಲಿ ಇಂಥದೊಂದು ಅರಿವು ಮೂಡಿರುವುದು ಮತ್ತು ತತ್ಪರಿಣಾಮವಾಗಿ ಅಂಥ ಅಪರಾಧಿಗಳನ್ನು ಗಡಿಪಾರು ಮಾಡುವ ವಿಷಯದಲ್ಲಿ ಸಂಭಾವ್ಯ ಬದಲಾವಣೆಗಳಾಗಿರುವುದು ಸ್ವಾಗತಾರ್ಹ ಬೆಳವಣಿಗೆಯೇ ಸರಿ.

ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ದಾರುಣ ಪರಿಸ್ಥಿತಿ ಹಾಗೂ ಹಳ್ಳಿಗರಲ್ಲಿ ಮಡುಗಟ್ಟಿರುವ ನಿರಾಶಾದಾಯಕ ಚಿತ್ತಸ್ಥಿತಿಯ ಕುರಿತಾಗಿ ಕಳೆದ ಅಂಕಣದಲ್ಲಿ ರ್ಚಚಿಸಿದ್ದೆ; ಇತ್ತೀಚೆಗಷ್ಟೇ ಘೋಷಣೆಯಾದ ಪಂಚರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಗಳು ಈ ಅಂಶವನ್ನು ಸಾಬೀತುಪಡಿಸುವ ರೀತಿಯಲ್ಲಿವೆ. ತೆಲಂಗಾಣ ರಾಜ್ಯದಲ್ಲಿ ಆಡಳಿತಾರೂಢ ಪಕ್ಷಕ್ಕೆ ದಕ್ಕಿರುವ ಸುಸ್ಪಷ್ಟ ವಿಜಯವು, ಇತರ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ತಲೆದೋರಿರುವ ದುಸ್ಥಿತಿಯ ನಿರ್ವಹಣೆಗೆ ಸಂಬಂಧಿಸಿದಂತೆ ಒಂದು ಪಾಠವಾಗಬಲ್ಲದು. ತೆಲಂಗಾಣ ರಾಜ್ಯದ ರೈತರು ವರ್ಷವೊಂದರಲ್ಲಿ ಎರಡು ಕಂತುಗಳಲ್ಲಿ ನಗದು ಪಾವತಿಗಳನ್ನು ನೇರವಾಗಿ ಸ್ವೀಕರಿಸಿದರು ಮತ್ತು ಈ ‘ಕೃಪಾಕಟಾಕ್ಷ’ ಅಲ್ಲಿ ಪವಾಡವನ್ನೇ ಮಾಡಿ ಆಡಳಿತಾರೂಢರಿಗೆ ಭರ್ಜರಿಜಯ ನೀಡಿರುವಂತೆ ತೋರುತ್ತದೆ. ಆರ್ಥಿಕ ಆಯಾಮದಲ್ಲಿ ಹೇಳುವುದಾದರೆ ಇದೇನೂ ವಿವೇಚನಾಯುಕ್ತ ನಡೆಯಲ್ಲವಾದರೂ, ಅಲ್ಲಿನ ರೈತರ ನಿರೀಕ್ಷೆಗಳೇ ಸರ್ಕಾರ ಈ ಮಾರ್ಗವನ್ನು ಅನುಸರಿಸುವಂತಾಗುವುದಕ್ಕೆ ನಿರ್ಬಂಧಿಸಿವೆ ಎನ್ನಬೇಕು. ಬಹುತೇಕ ರಾಜ್ಯ ಸರ್ಕಾರಗಳು ಇಂಥದೊಂದು ಅತಿಯಾದ ವೆಚ್ಚವನ್ನು ತಡೆದುಕೊಳ್ಳಲಾರವಾದರೂ, ಕೃಷಿಕರನ್ನು ಸಮಾಧಾನಗೊಳಿಸಲೆಂದು ಸಂಪನ್ಮೂಲಗಳನ್ನು ಕಂಡುಕೊಳ್ಳಲೇಬೇಕಾದ ಅನಿವಾರ್ಯತೆಗೆ ಮುಂಬರುವ ಸರ್ಕಾರಗಳು ಸಿಲುಕುವುದಂತೂ ಹೌದು. ಈ ಅಪಾಯಕಾರಿ ಪ್ರವೃತ್ತಿ ರಾಜ್ಯಗಳು ಅಭಿವೃದ್ಧಿ ಬಾಬತ್ತುಗಳಿಗೆ ಮಾಡಬೇಕಾದ ಖರ್ಚುಗಳ ಮೇಲೆ ಮಾರಕ ಪರಿಣಾಮ ಬೀರಬಹುದು. ಅದೇನೇ ಇದ್ದರೂ, ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಚುನಾಯಿತ ಸರ್ಕಾರಗಳು ನಿರ್ಣಾಯಕ ಸ್ಥಾನದಲ್ಲಿರುತ್ತವೆ ಎಂಬುದನ್ನು ಮರೆಯುವಂತಿಲ್ಲ; ಹೀಗಾಗಿ ಇಂಥ ನಡೆಗಳ ಭವಿಷ್ಯವೇನಾಗುತ್ತದೆ ಮತ್ತು ತತ್ಪರಿಣಾಮವಾಗಿ ಆಯಾ ರಾಜ್ಯಗಳ ಹಣಕಾಸು ಸ್ವಾಸ್ಥ್ಯಕ್ಕೆ ಯಾವ ಸ್ಥಿತಿ ಒದಗುತ್ತದೆ ಎಂಬುದು ಕಾದುನೋಡಬೇಕಾದ ಸಂಗತಿಗಳಷ್ಟೇ.

ಈ ಎಲ್ಲದರ ನಡುವೆಯೂ, ಭವಿಷ್ಯಕ್ಕಾಗಿನ ಸುಧಾರಣಾ ಕಾರ್ಯಸೂಚಿ ಕುರಿತಾದ ಕೇಂದ್ರ ಸರ್ಕಾರದ ಕಾಳಜಿಯನ್ನು ಗಮನಿಸಿದಾಗ ಖುಷಿಯಾಗುತ್ತದೆ, ಉತ್ಸಾಹ ಮೂಡುತ್ತದೆ. ಬೆಳವಣಿಗೆಯ ಗತಿ ಹೀಗೇ ಅಬಾಧಿತವಾಗಿರಬೇಕೆಂದರೆ, ಅನೇಕ ಅಗತ್ಯ ವಲಯಗಳ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಗಮನಹರಿಸಬೇಕಾದ ಅಗತ್ಯವಿದೆ. ರಸ್ತೆ ಮತ್ತು ರೈಲು ಸಾರಿಗೆ, ಲಿಂಗ ಸಮಾನತೆ, ಮಹಿಳಾ ಸಹಭಾಗಿತ್ವ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯ ಹೀಗೆ ಇಂಥ ಪ್ರಮುಖ ವಲಯಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಮುಂಬರುವ ಲೋಕಸಭಾ ಚುನಾವಣೆಯವರೆಗೆ ಯಾವುದೇ ‘ಅನಾಲೋಚಿತ ನಿರ್ಣಯಗಳನ್ನು’ ಕೇಂದ್ರ ಸರ್ಕಾರ ಕೈಗೊಳ್ಳುವುದು ಅಸಂಭವ ಎಂಬ ಅಭಿಪ್ರಾಯವೂ ಹಿತಾನುಭವವನ್ನೇ ನೀಡುವಂಥದು ಎನ್ನಲಡ್ಡಿಯಿಲ್ಲ!

ಅದೇನೇ ಇರಲಿ, ಮುಂಬರುವ ದಿನಗಳು ಸ್ವಾರಸ್ಯಕರವಾಗಿರುವುದಂತೂ ಹೌದು; ಅದರ ತೀವ್ರತೆ ಎಷ್ಟರಮಟ್ಟಿಗಿರುತ್ತದೆ ಎಂಬುದನ್ನಷ್ಟೇ ಕಾದುನೋಡಬೇಕಾದ್ದು ನಮ್ಮ ಕೆಲಸ.

(ಲೇಖಕರು ಆರ್ಥಿಕ ತಜ್ಞರು)

- Advertisement -

Stay connected

278,596FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...