ಶಿಶುಗಳ ಪಾಲಿಗೆ ಶಕ್ತಿಯಾಗಿದ್ದ ವಿಟಮಿನ್‌ ಎ ಲಸಿಕೆ ಕೊರತೆ: ದಿಗ್ವಿಜಯ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗ

ಬೆಂಗಳೂರು: ಶಿಶುಗಳ ರೋಗ ಪ್ರತಿಬಂಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಎ ಲಸಿಕೆಯು ರಾಜ್ಯದಲ್ಲಿ ಸಿಗುತ್ತಿಲ್ಲ. ಅನ್ನಾಂಗ ಕೊರತೆ ನಿವಾರಿಸುವ 10 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಹಾಕುವ ವಿಟಮಿನ್ ಎ ಲಸಿಕೆಯು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರತೆ ಉಂಟಾಗಿದ್ದು, ಈ ಕುರಿತು ದಿಗ್ವಿಜಯ ರಿಯಾಲಿಟಿ ಚೆಕ್‌ನಲ್ಲಿ ಸತ್ಯ ಅರಿವಾಗಿದೆ.

ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿ ರಜನಿ ನಾಗೇಶ್​ರಾವ್​ ಸ್ಪಷ್ಟನೆ ನೀಡಿದ್ದು, ರಾಜ್ಯದಲ್ಲಿ ವಿಟಮಿನ್​ ಎ ಕೊರತೆ ಇರುವುದು ಸತ್ಯ. ಕೇಂದ್ರ ಸರ್ಕಾರ ಜಾರಿಗೆ ತರಲಾಗಿರುವ ರೇಟ್​ ಕ್ಯಾಪ್​ನಿಂದ ಸಮಸ್ಯೆ ಸೃಷ್ಠಿಯಾಗಿದೆ. ಕೇಂದ್ರ ಕೋಟ್​ ಮಾಡಿರುವ ದರಕ್ಕೆ ತಯಾರಕರು ಒಪ್ಪುತ್ತಿಲ್ಲ. 47 ರೂ. ನಿಂದ 49 ರೂ. ಗೆ ದರ ನಿಗಧಿಪಡಿಸಿದ್ದು, ಕೇಂದ್ರ ಹಾಗೂ ತಯಾರಕರ ಹಗ್ಗಜಗ್ಗಾಟದಿಂದ ವಿಟಮಿನ್​ ಎ ಕರತೆ ಉಲ್ಬಣಿಸಿದೆ ಎಂದು ಹೇಳಿದ್ದಾರೆ.

ಕೇವಲ ಕರ್ನಾಟಕ ಮಾತ್ರವಲ್ಲ ಇತರೆ ರಾಜ್ಯಗಳಲ್ಲೂ ವಿಟಮಿನ್​ ಎ ಕೊರತೆ ಕಾಡುತ್ತಿದೆ. ಕಳೆದ ಎರಡು ವರ್ಷಗಳಿಂದ ಲಸಿಕೆ ಸರಬರಾಜು ಸ್ಥಗಿತಗೊಂಡಿದೆ. ವಾಸ್ತವ ಸ್ಥಿತಿ ಅರಿತ ಕೇಂದ್ರ ಸರ್ಕಾರ ಕೊನೆಗೂ ರೇಟ್​ ಕ್ಯಾಪ್​ ತೆಗೆದಿದೆ ಎಂದು ತಿಳಿಸಿದ್ದಾರೆ.

2017-18ರಲ್ಲಿ ರಾಜ್ಯದಲ್ಲಿ 67,69,484 ಮಕ್ಕಳಿಗೆ ವಿಟಮಿನ್​ ಎ ಲಸಿಕೆ ಅಗತ್ಯವಿದೆ. ಇದಕ್ಕಾಗಿ 2,66,900 ಬಾಟೆಲ್ ಗಳು ಬೇಕಾಗಿದ್ದು, 160.14 ಲಕ್ಷ ರೂ.ಗಳಾಗುತ್ತದೆ.

2018-19ರಲ್ಲಿ ರಾಜ್ಯದಲ್ಲಿ 65,49,855 ಮಕ್ಕಳಿಗೆ ವಿಟಮಿನ್​ ಎ ಲಸಿಕೆ ಅಗತ್ಯವಿದೆ. ಇದಕ್ಕಾಗಿ 2,66,000 ಬಾಟಲ್‌ ಬೇಕಿದ್ದು, 159.60 ಲಕ್ಷ ರೂ. ಹಣ ಬೇಕಾಗುತ್ತದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *