More

  ವಿಐಟಿ ಕುಲಪತಿ ಡಾ. ಜಿ. ವಿಶ್ವನಾಥನ್‌ಗೆ ಗೌರವ ಡಾಕ್ಟರೇಟ್

  ಬೆಂಗಳೂರು:
  ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ (ವಿಐಟಿ) ಸಂಸ್ಥಾಪಕ ಮತ್ತು ಕುಲಪತಿ ಡಾ. ಜಿ. ವಿಶ್ವನಾಥನ್ ಅವರು ಇತ್ತೀಚೆಗೆ ಖಿಖಅ ನಲ್ಲಿ ನಡೆದ ಬಿಂಗ್‌ಹ್ಯಾಮ್‌ಟನ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಸ್ಟೇಟ್ ಯೂನಿವರ್ಸಿಟಿ ಆ್ ನ್ಯೂಯಾರ್ಕ (ಖಖಿಘ್ಗೆ) ಗೌರವ ಡಾಕ್ಟರ್ ಆ್ ಲಾಸ್ ಪದವಿಯನ್ನು ಸ್ವೀಕರಿಸಿದರು.
  ಬಿಂಗ್‌ಹ್ಯಾಮ್ಟನ್ ವಿಶ್ವವಿದ್ಯಾಲಯದ ಅಧ್ಯಕ್ಷ ಹಾರ್ವೆ ಸ್ಟೆಂಗರ್ ಅವರು ಡಾ. ಜಿ.ವಿಶ್ವನಾಥನ್ ಅವರಿಗೆ ಗೌರವ ಡಾಕ್ಟರೇಟದ ಪ್ರದಾನ ಮಾಡಿ ಮಾತನಾಡಿ, ಅಂತಾರಾಷ್ಟ್ರೀಯ ಉನ್ನತ ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗಾಗಿ ಡಾ. ಜಿ.ವಿಶ್ವನಾಥನ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಅವರು ಭಾರತದಲ್ಲಿ ಉನ್ನತ ಶಿಕ್ಷಣದ ಪ್ರವೇಶವನ್ನು ವಿಸ್ತರಿಸಲು ಮತ್ತು ಪ್ರಪಂಚದಾದ್ಯಂತದ ಸಂಸ್ಥೆಗಳೊಂದಿಗೆ ಪಾಲುದಾರಿಕೆಗೆ ಪ್ರವರ್ತಕರಾಗಿದ್ದಾರೆ ಎಂದರು.
  ಬಿಂಗ್‌ಹ್ಯಾಮ್‌ಟನ್ ವಿಶ್ವವಿದ್ಯಾಲಯದ ಪ್ರೊವೊಸ್ಟ್ ಡೊನಾಲ್ಡ್ ಹಾಲ್, ಡೀನ್ ಪ್ರೊ.ಶ್ರೀಹರಿ ಕೃಷ್ಣಸ್ವಾಮಿ, ವಿಧಾನಸಭೆ ಸದಸ್ಯೆ ಡೊನ್ನಾ ಎ.ಲುಪಾರ್ಡೊ, ಸೆನೆಟ್ ಸದಸ್ಯೆ ಲಿಯಾ ವೆಬ್, ವಿಐಟಿ ಉಪಾಧ್ಯಕ್ಷರಾದ ಶಂಕರ್ ವಿಶ್ವನಾಥನ್,ಡಾ.ಜಿ.ವಿ.ಸೆಲ್ವಂ, ಘಟಿಕೋತ್ಸವ ಸಮಾರಂಭದಲ್ಲಿ ಸಹಾಯಕ ಉಪಾಧ್ಯಕ್ಷೆ ಕಾದಂಬರಿ ಎಸ್.ವಿಶ್ವನಾಥನ್ ಮತ್ತು ವಿಐಟಿಯ ಅಂತಾರಾಷ್ಟ್ರೀಯ ಸಂಬಂಧಗಳ ನಿರ್ದೇಶಕ ಡಾ.ಆರ್.ಶ್ರೀನಿವಾಸನ್ ಉಪಸ್ಥಿತರಿದ್ದರು.
  ನಂತರ ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಡಾ. ಜಿ. ವಿಶ್ವನಾಥನ್ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts