Photos: ಹಿಮದಲ್ಲಿ ಮುಳುಗಿದ ಬೈಕರ್ಸ್​ಗಳ ಸ್ವರ್ಗ ಲಾಹುಲ್​-ಸ್ಪಿತಿ

ಲಾಹುಲ್​-ಸ್ಪಿತಿ: ಜಮ್ಮು ಮತ್ತು ಕಾಶ್ಮೀರದ ಲಡಾಕ್​ ಜಿಲ್ಲೆಗೆ ಹೊಂದಿಕೊಂಡಿರುವ ಹಿಮಾಚಲ ಪ್ರದೇಶದ ಲಾಹುಲ್​ ಮತ್ತು ಸ್ಪಿತಿ ಜಿಲ್ಲೆಯ ಚಳಿ ತೀವ್ರಗೊಂಡಿದ್ದು, ಭಾರಿ ಹಿಮವರ್ಷವಾಗಿದ್ದು, ಜಿಲ್ಲೆ ಸಂಪೂರ್ಣವಾಗಿ ಹಿಮದಿಂದ ಮುಳುಗಿದೆ.

ಜಿಲ್ಲೆಯ ಉದಯ್​ಪುರ ಪ್ರದೇಶದಲ್ಲಿ ಭಾರಿ ಹಿಮಪಾತವಾಗಿದ್ದು, ಹಲವೆಡೆ ಹಿಮಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಚಿನಾಬ್​ ನದಿಗೆ ಅಡ್ಡಲಾಗಿ ಭಾರಿ ಪ್ರಮಾಣದ ಹಿಮ ಬಿದ್ದಿರುವುದರಿಂದ ನೀರಿನ ಸಹಜ ಹರಿವಿಗೆ ತಡೆಯುಂಟಾಗಿದೆ.

ಜತೆಗೆ ಉದಯ್​ಪುರ ಪ್ರದೇಶದ ತ್ರಿಲೋಕಿನಾಥ್​ ಹಾಗೂ ಕೆಯ್​ಲೋಂಗ್​ ವ್ಯಾಲಿಯಲ್ಲಿ ಭಾರಿ ಪ್ರಮಾಣದಲ್ಲಿ ಹಿಮ ಸುರಿದಿದ್ದು ಕಣ್ಣು ಹಾಯಿಸಿದ ಕಡೆಯೆಲ್ಲಾ ಹಿಮ ಕಾಣುತ್ತಿದೆ.

One Reply to “Photos: ಹಿಮದಲ್ಲಿ ಮುಳುಗಿದ ಬೈಕರ್ಸ್​ಗಳ ಸ್ವರ್ಗ ಲಾಹುಲ್​-ಸ್ಪಿತಿ”

Comments are closed.