PHOTO: ಫೊನಿ ಚಂಡಮಾರುತದ ಹೊಡೆತದಿಂದಾಗಿ ಭುವನೇಶ್ವರದ ವಿಮಾನ ನಿಲ್ದಾಣಕ್ಕೆ ಭಾರಿ ಹಾನಿ

ಭುವನೇಶ್ವರ: ಫೊನಿ ಚಂಡಮಾರುತ ಒಡಿಶಾ ರಾಜ್ಯದಲ್ಲಿ ಭಾರಿ ಹಾನಿಯನ್ನುಂಟು ಮಾಡುತ್ತಿದೆ. ಇದರ ಹಾವಳಿಗೆ ಸಿಲುಕಿದ ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರಿ ಹಾನಿಗೊಳಗಾಗಿದೆ. ಅದರ ಚಿತ್ರಗಳು ಇಲ್ಲಿವೆ.

ಫೊನಿ ಚಂಡಮಾರುತ ಹಾವಳಿ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ಭುವನೇಶ್ವರ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಚಂಡಮಾರುತದ ತೀವ್ರತೆ ಸಂಪೂರ್ಣವಾಗಿ ಕಡಿಮೆಯಾಗುವವರೆಗೂ ವಿಮಾನ ಬಿಜು ಪಟ್ನಾಯಕ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳ ಹಾರಾಟ ಕೈಗೊಳ್ಳುವುದು ಅಥವಾ ಆಗಮನವನ್ನು ನಿರ್ಬಂಧಿಸಲಾಗಿದೆ.

ಒಡಿಶಾದಲ್ಲಿ ಭಾರಿ ಹಾನಿಯನ್ನುಂಟು ಮಾಡುತ್ತಿರುವ ಫೊನಿ ಚಂಡಮಾರುತ ಶುಕ್ರವಾರ ತಡರಾತ್ರಿ ಅಥವಾ ಶನಿವಾರ ಬೆಳಗ್ಗೆ ಪಶ್ಚಿಮ ಬಂಗಾಳವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಗಂಟೆಗೆ 90 ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. (ಏಜೆನ್ಸೀಸ್​)

 

 

Leave a Reply

Your email address will not be published. Required fields are marked *