ಬಾಳೆಹೊನ್ನೂರು: ಮೊಬೈಲ್ ಬಳಕೆಯಿಂದ ಇಂದು ವಿದ್ಯಾರ್ಥಿಗಳು ಅತಿಯಾಗಿ ದೃಷ್ಟಿದೋಷದ ಸಮಸ್ಯೆ ಎದುರಿಸುತ್ತಿದ್ದು, ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ತಿಳಿಸಿದರು.
ಪಟ್ಟಣದ ರೋಟರಿ ಕ್ಲಬ್‌ನಿಂದ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯ 15 ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳು ಅತಿಯಾದ ಮೊಬೈಲ್, ಟಿವಿ ವೀಕ್ಷಣೆಯಿಂದ ಕಣ್ಣಿನ ವಿವಿಧ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಇದು ಭವಿಷ್ಯದಲ್ಲಿ ಆತಂಕಕಾರಿಯಾಗಲಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಗೆ ಅಗತ್ಯವಿದ್ದರೆ ಮಾತ್ರ ಮೊಬೈಲ್‌ಗಳನ್ನು ಉಪಯೋಗಿಸಬೇಕು. ಮೊಬೈಲ್ ಬಳಕೆಗೆ ತಾವುಗಳೇ ಸ್ವಯಂ ಪ್ರೇರಿತವಾಗಿ ಕಡಿವಾಣ ಹಾಕಿಕೊಳ್ಳಬೇಕು ಎಂದರು.
ರೋಟರಿ ಸಂಸ್ಥೆ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ 150 ವಿದ್ಯಾರ್ಥಿಗಳಿಗೆ ಕಂಪ್ಯೂಟರೀಕೃತ ಕಣ್ಣು ತಪಾಸಣೆ ನಡೆಸಿದ್ದು, ಇದರಲ್ಲಿ 15 ವಿದ್ಯಾರ್ಥಿಗಳಿಗೆ ದೃಷ್ಟಿ ಸಮಸ್ಯೆಯಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಕ್ಲಬ್‌ನಿಂದ ಉಚಿತವಾಗಿ ಕನ್ನಡಗಳನ್ನು ವಿತರಿಸಲಾಗುತ್ತಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಕೆ.ಟಿ.ಸುದೇಶ್ ಮಾತನಾಡಿ, ರೋಟರಿ ಸಂಸ್ಥೆಯವರು ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಕನ್ನಡಕ ಪಡೆದುಕೊಂಡ ಮಕ್ಕಳು ತಮ್ಮ ಶಿಕ್ಷಣದಲ್ಲಿ ಇನ್ನೂ ಉತ್ತಮ ಪ್ರಗತಿ ಸಾಧಿಸಲು ಫಲಕಾರಿಯಾಗಲಿದೆ ಎಂದರು.
ರೋಟರಿ ಕಾರ್ಯದರ್ಶಿ ಬಿ.ಎಸ್.ಸಾಗರ್, ಖಜಾಂಚಿ ಎಚ್.ಕೆ.ವೆಂಕಟೇಶ್‌ಭಟ್, ಕನ್ನಡಕವನ್ನು ನೀಡಿದ ದಾನಿಗಳಾದ ಸುದೇಶ್ ಕೆಸವಿನಮನೆ, ಎಂ.ಎಲ್.ಮಂಜೇಶ್, ಅಭಿಷೇಕ್ ಸಮೃದ್ಧ್, ಎಚ್.ಡಿ.ಅಭಿನಂದನ್, ಎಚ್.ಡಿ.ಅರವಿಂದ್, ಮುಖ್ಯಶಿಕ್ಷಕ ರಮೇಶ್ ನಾಯಕ್ ಮತ್ತಿತರರು ಹಾಜರಿದ್ದರು
ಮೊಬೈಲ್ ಬಳಕೆಯಿಂದ ದೃಷ್ಟಿ ದೋಷ
You Might Also Like
World Arthritis Day: ಸಂಧಿವಾತ ಕಾಯಿಲೆಗೆ ಚಿಕಿತ್ಸೆಯೇ ಮದ್ದು! ತಜ್ಞವೈದ್ಯೆ ಡಾ. ಅರ್ಚನಾ ಎಂ. ಉಪ್ಪಿನ ಅಭಿಮತ
ಪ್ರಸ್ತುತ ದಿನಗಳಲ್ಲಿ ಬಿಪಿ-ಶುಗರ್ ಸಮಸ್ಯೆಯಂತೆ ಅರ್ಥರೈಟಿಸ್ ( Arthritis ) , ರುಮಾಟಾಲಜಿ (ಸಂಧಿವಾತ/ ಕೀಲುವಾಯು)…
Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..
ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…
Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ
ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…