ಭದ್ರಾವತಿ: ನೂತನವಾಗಿ ಅಸ್ತಿತ್ವಕ್ಕೆ ಬಂದ ಸರ್ವ ಪಕ್ಷಗಳ ಮುಖಂಡರು ಹಾಗೂ ಕಾರ್ವಿುಕ ನಾಯಕರನ್ನೊಳಗೊಂಡ ವಿಐಎಸ್ಎಲ್ ಹೋರಾಟ ಸಮಿತಿ ಸದಸ್ಯರು ಭಾನುವಾರ ಸಂಜೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ತರಳಿ ವಿಐಎಸ್ಎಲ್ ಕಾರ್ಖಾನೆ ಹಾಗೂ ಕಾರ್ವಿುಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಗುತ್ತಿಗೆ ಕಾರ್ವಿುಕರಿಗೆ ಪೂರ್ಣಾವಧಿ ಕೆಲಸ ಸಿಗುವಂತಾಗಬೇಕು. ನಿವೃತ್ತ ಕಾರ್ವಿುಕರಿಗೆ ಕಾರ್ಖಾನೆ ಮನೆಗಳನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಕಾರ್ವಿುಕ ನಾಯಕರ ಸಮಸ್ಯೆ ಆಲಿಸಿದ ಬಿ.ವೈ.ರಾಘವೇಂದ್ರ, ಖಾಸಗೀಕರಣ ಪ್ರಕ್ರಿಯೆಯಲ್ಲಿರುವ ಸೈಲ್ ವ್ಯಾಪ್ತಿಯ ಎಎಸ್ಪಿ, ಎಸ್ಎಸ್ಪಿ ಕಾರ್ಖಾನೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣದಿಂದ ಕೈಬಿಟ್ಟಿದ್ದೇ ಆದರೆ ಇಲ್ಲಿನ ವಿಐಎಸ್ಎಲ್ ಕಾರ್ಖಾನೆಯನ್ನೂ ಖಾಸಗೀಕರಣ ಪ್ರಕ್ರಿಯೆಯಿಂದ ಹೊರತಂದು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಡಲು ನಾನು ಬದ್ಧ ಎಂದರು.
ನಿವೃತ್ತ ಕಾರ್ವಿುಕರಿಗೆ ಮನೆ ಹಂಚಿಕೆ ಹಾಗೂ ಗುತ್ತಿಗೆ ಕಾರ್ವಿುಕರ ಕೆಲಸದ ಸಮಸ್ಯೆ ಕುರಿತು ರ್ಚಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಲು ಸಮಯ ನಿಗದಿಪಡಿಸಿ ತಿಳಿಸಲಾಗುವುದು. ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಿತಿ ಅಧ್ಯಕ್ಷ ಎಸ್.ಎನ್.ಬಾಲಕೃಷ್ಣ, ಶಾಸಕ ಬಿ.ಕೆ.ಸಂಗಮೇಶ್ವರ್, ಜೆಡಿಎಸ್ ಅಧ್ಯಕ್ಷ ಕರುಣಾಮೂರ್ತಿ, ಜಿಪಂ ಸದಸ್ಯ ಮಣಿಶೇಖರ್, ಅಜಿತ್, ಆಮ್ದಿ್ಮ ರವಿಕುಮಾರ್, ಬಿಜೆಪಿಯ ಮಂಗೋಟೆ ರುದ್ರೇಶ್, ಕಾರ್ವಿುಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಬಸಂತಕುಮಾರ್, ಅಮೃತ್ ಕುಮಾರ್, ಸುರೇಶ್, ನರಸಿಂಹಾಚಾರ್ ಇತರರಿದ್ದರು.