ಕೆಆರ್‌ಎಸ್‌ಗೆ ಪ್ರವಾಸಿಗರ ಲಗ್ಗೆ

ಕೆ.ಆರ್.ಸಾಗರ: ಲೋಕಸಭಾ ಚುನಾವಣೆ ಪ್ರತಿಕ್ರಿಯೆಯ ನಡುವೆಯೂ ಏ.10 ರಿಂದ 19 ರವರೆಗೆ ಕೆ.ಆರ್.ಸಾಗರ ಬೃಂದಾವನಕ್ಕೆ ಸುಮಾರು 89 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಏಪ್ರಿಲ್ 14 ಮತ್ತು 19 ರಂದು ಎರಡು ದಿನ ಸುಮಾರು 15 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚುನಾವಣೆ ಬಿಜಿಯಲ್ಲೂ ಬಿಸಿಲ ಬೇಗೆ ನಡುವೆಯೂ ವಿಶ್ವ ಪ್ರಖ್ಯಾತ ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಸಂಭ್ರಮಿಸಿದ್ದಾರೆ. ಪ್ರವಾಸಿಗರ ಶುಲ್ಕ 16,50,000 ರೂ. ಹಾಗೂ ವಾಹನಗಳ ಪ್ರವೇಶ ಶುಲ್ಕ 3.4 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ 2018ರ ಇದೇ ಸಮಯದಲ್ಲಿ ಸುಮಾರು 88,600 ಪ್ರವಾಸಿಗರು ಭೇಟಿ ನೀಡಿದ್ದರು.

ಶಾಲಾ ಮಕ್ಕಳಿಗೆ ರಜೆ ಹಿನ್ನೆಲೆೆಯಲ್ಲಿ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿರುವ ಪಾಲಕರು ಹೊರರಾಜ್ಯ ಸೇರಿ ವಿವಿಧೆಡೆಯಿಂದ ಆಗಮಿಸುವ ಪ್ರವಾಸಿಗರನ್ನು ಸಂಗೀತ ಕಾರಂಜಿ ಆಕರ್ಷಿಸುತ್ತಿದೆ. ಬೃಂದಾವನದ ರಸ್ತೆ ಬದಿ ಇರುವ ಸಣ್ಣಪುಟ್ಟ ವ್ಯಾಪಾರಿಗಳಿಗೂ ಸಹ ಭರ್ಜರಿ ವ್ಯಾಪಾರವಾಗುತ್ತಿದೆ.

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ. ಇದರಿಂದ ಬೇಸರವಾಗಿದೆ. ಕೆಆರ್‌ಎಸ್ ಅನ್ನು ಮೂಲಶೈಲಿಯನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕಿದೆ. ಸಂಗೀತ ಕಾರಂಜಿ ಮತ್ತು ಶಬ್ಧಬೆಳಕು ವ್ಯವಸ್ಥೆಯನ್ನು ಶೀಘ್ರವೇ ರಿಪೇರಿ ಮಾಡಬೇಕಿದೆ. ಡಿಸ್ನಿ ಲ್ಯಾಂಡ್ ಮಾದರಿ ಅಭಿವೃದ್ಧಿ ವಿಚಾರ ಕೈಬಿಡಬೇಕು.
ರವಿಕುಮಾರ್ ಪ್ರವಾಸಿಗ ಬೆಂಗಳೂರು.

Leave a Reply

Your email address will not be published. Required fields are marked *