ಮೂಡಿಗೆರೆ: ಗೋಣಿಬೀಡು ಗ್ರಾಮ ಪಂಚಾಯಿತಿ ಜಿ.ಅಗ್ರಹಾರ ಗ್ರಾಮದಲ್ಲಿ 40 ಕುಟುಂಬಗಳು ನಿವೇಶನವಿಲ್ಲದೆ ಕಂಗಾಲಾಗಿವೆ. ಕಂದಾಯ ಇಲಾಖೆ ಜಾಗದಲ್ಲಿ ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದಾರೆ. ಎರಡು ಕೆರೆಯ ಜಾಗ ಒತ್ತುವರಿಯಾಗಿದ್ದು ಖುಲ್ಲಾಗೊಳಿಸಿ ಕೊಡಿ ಎಂದು ತಹಸೀಲ್ದಾರ್ ರಾಜಶೇಖರಮೂರ್ತಿ ಅವರಿಗೆ ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ಹಾಗೂ ಸದಸ್ಯರು ಒತ್ತಾಯಿಸಿದರು.
ಶನಿವಾರ ಗೋಣಿಬೀಡು ಗ್ರಾಪಂ ಕಚೇರಿಗೆ ತಹಸೀಲ್ದಾರ್ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಹಲವು ಸಮಸ್ಯೆಗಳನ್ನು ವಿವರಿಸಿದರು. ನ್ಯಾಯಾಲಯ ತೀರ್ಪಿನಲ್ಲಿ ಪ್ರಕಟಿಸಿದ 3 ಎಕರೆ ಜಾಗವನ್ನು ತಹಸೀಲ್ದಾರ್ ಕಚೇರಿಯಿಂದ ಗ್ರಾಪಂಗೆ ಹಸ್ತಂತರಿಸಿಲ್ಲ. ಮಳೆ ಹೆಚ್ಚಾಗಿ ಮನೆ, ಜಮೀನು, ರಸ್ತೆಗಳಿಗೆ ಹಾನಿಯಾಗಿದೆ. ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿ.ಅಗ್ರಹಾರ ಗ್ರಾಮದ ಸರ್ವೇ ನಂ.67ರಲ್ಲಿ 4.50 ಎಕರೆ ಕಂದಾಯ ಇಲಾಖೆಗೆ ಸೇರಿದೆ. ಅದರಲ್ಲಿ 40 ಕುಟುಂಬಗಳು ನಿವೇಶನ ಕೊಡಿ ಎಂದು ಕೇಳಿದ್ದಾರೆ. ಅವರಿಗೆ ನಿವೇಶನ ಕೊಡದಿದ್ದಕ್ಕೆ ಟೆಂಟ್ ಕಟ್ಟಿಕೊಂಡು ಅದೇ ಜಾಗದಲ್ಲಿ ವಾಸವಾಗಿದ್ದಾರೆ. ಆ ಜಾಗವನ್ನು ಗ್ರಾಪಂಗೆ ಹಸ್ತಾಂತರಿಸಿದರೆ ಆ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು, ಸಾಲುಮರ ಗ್ರಾಮದಲ್ಲಿರುವ 2.50 ಎಕರೆ ಸರ್ಕಾರಿ ಕೆರೆಯ ಜಾಗದ ಒತ್ತುವರಿಯಾಗಿದೆ. ಚರ್ಚ್ ಹಿಂಭಾಗದ ಕೆರೆಯ ಜಾಗವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿಯಾಗಿರುವ ಎರಡೂ ಕೆರೆಯ ಜಾಗ ಖುಲ್ಲಾಗೊಳಿಸಬೇಕು ಎಂದು ತಿಳಿಸಿದರು. ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಆಡಳಿತಾಧಿಕಾರಿ ನಯಾಜ್ ಅಹಮದ್, ಪಿಡಿಒ ಸಿಂಚನಾ, ಗ್ರಾಪಂ 22 ಸದಸ್ಯರು ಇದ್ದರು.
ಅರ್ಹರಿಗೆ ನಿವೇಶನ ಒದಗಿಸಿ
You Might Also Like
ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್!
ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…
ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ
ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…
ಈ ದಿನಾಂಕದಂದು ಜನಿಸಿದವರ ಮೇಲೆ ಲಕ್ಷ್ಮೀ ಕೃಪೆ ಹೆಚ್ಚು! ಹಣದ ಕೊರತೆ ಕಾಡುವುದಿಲ್ಲ, ನೀವೂ ಹುಟ್ಟಿದ್ದು ಇದೇ ದಿನಾನಾ?
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…