ಗುಂಡ್ಲುಪೇಟೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಿರುವ ಡಾ. ಭಾನುಪ್ರಕಾಶ್‌ಶರ್ಮ ಶುಕ್ರವಾರ ಪಟ್ಟಣದ ಕೋಟೆ ವಿಜಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳನ್ನು ಭೇಟಿ ಮಾಡಿ ಬೆಂಬಲ ಕೋರಿದರು.

ಮಹಾಸಭಾದ ತಾಲೂಕು ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ರಘುರಾಮ್ ವಾಜಪೇಯಿ, ಕಡಕೊಳ ಜಗದೀಶ್, ಹೊಮ್ಮ ಮಂಜುನಾಥ್, ಜ್ಯೋತಿ, ಸಂಘದ ಸಿಇಒ ರಮೇಶ್ ಇತರರು ಇದ್ದರು.