ವಿಧಾನಸಭೆ ನೂತನ ಸ್ಪೀಕರ್​ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ, ಕಾರ್ಯಾರಂಭ

ಬೆಂಗಳೂರು: ವಿಧಾನಸಭೆ ನೂತನ ಸಭಾಧ್ಯಕ್ಷರಾಗಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬುಧವಾರ ಆಯ್ಕೆಯಾಗಿದ್ದಾರೆ.

ಕಾಗೇರಿ ಅವರು ಅವಿರೋಧವಾಗಿ 22ನೇ ಸಭಾಧ್ಯಕ್ಷರಾಗಿ ಬುಧವಾರ 11 ಗಂಟೆಗೆ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸದನದ ಸದಸ್ಯರ ಸಮ್ಮುಖದಲ್ಲಿ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಕಾರ್ಯಾರಂಭ ಮಾಡಿದರು.

ಯಡಿಯೂರಪ್ಪ ಮಾಜಿ ಸ್ಪೀಕರ್​ ಕೆ.ಜಿ. ಬೋಪಯ್ಯನವರ ಹೆಸರನ್ನೇ ಅಂತಿಮಗೊಳಿಸಿದ್ದರು. ಆದರೆ, ಬೋಪಯ್ಯ ಅದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಕೊನೇ ಕ್ಷಣದವರೆಗೂ ತಮಗೆ ಸ್ಪೀಕರ್​ ಹುದ್ದೆ ಬೇಡ ಎಂದೇ ಹೇಳಿದ್ದರು ಎನ್ನಲಾಗಿದೆ. ನಂತರ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ವಿಧಾನಸಭಾ ಅಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಿಎಂ ಸೂಚಿಸಿದ್ದರು. (ದಿಗ್ವಿಜಯ ನ್ಯೂಸ್​)