Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಅನೀತಿ ನಡೆಯ ಪರಾಕಾಷ್ಠೆ

ರ್ಮರಾಜ ಕಲಿಯ ಪ್ರಭಾವಕ್ಕೆ ಒಳಗಾಗಿ ಕೊನೆಯಲ್ಲಿ ದ್ರೌಪದಿಯನ್ನೂ ಪಣಕ್ಕಿಟ್ಟನು. ಈ ವಿಚಾರದಲ್ಲಿ ಮಹಾಭಾರತದ ಪ್ರಚಲಿತ ಪಾಠಕ್ಕೂ ಮಧ್ವಾಚಾರ್ಯರು ನೀಡಿದ ನಿರ್ಣಯಕ್ಕೂ ಸ್ವಲ್ಪ ವಿರೋಧವಿದೆ. ಮಹಾಭಾರತದ ಪ್ರಚಲಿತ ಪಾಠದಲ್ಲಿ ಧರ್ಮರಾಜ ಮೊದಲು ತನ್ನನ್ನು ಪಣಕ್ಕಿಟ್ಟು ಅನಂತರ ದ್ರೌಪದಿಯನ್ನು ಪಣಕ್ಕಿಟ್ಟನು ಎಂದಿದೆ. ಆದರೆ ಸಮಗ್ರ ಭಾರತದೇಶವನ್ನು ಸಂಚರಿಸಿ ವೇದವ್ಯಾಸರ ಮಹಾಭಾರತ ಗ್ರಂಥವನ್ನು ಸಂಶೋಧಿಸಿದ ಮಧ್ವಾಚಾರ್ಯರು ಮಹಾಭಾರತದ ಶುದ್ಧಪ್ರತಿಯ ಆಧಾರದ ಮೇಲೆ ತಮ್ಮ ಮಹಾಭಾರತ ತಾತ್ಪರ್ಯನಿರ್ಣಯ ಗ್ರಂಥವನ್ನು ರಚಿಸಿದ್ದಾರೆ. ಅದರಲ್ಲಿ ಧರ್ಮರಾಜ ಮೊದಲು ದ್ರೌಪದಿಯನ್ನು ಪಣಕ್ಕಿಟ್ಟು ಅನಂತರ ತನ್ನನ್ನು ಪಣಕ್ಕಿಟ್ಟನು ಎಂದು ಹೇಳಿದ್ದಾರೆ.

ಧರ್ಮರಾಜ ದ್ರೌಪದಿಯನ್ನು ಪಣಕ್ಕಿಡುತ್ತಿದ್ದಂತೆ ಇಡೀ ಸಭೆಯಲ್ಲಿಯೇ ಭಯದ ವಾತಾವರಣ ಉಂಟಾಯಿತು. ಕಲಿಯ ಆವೇಶಕ್ಕೆ ಒಳಗಾದವರೂ, ‘ಛೆ! ಛೆ! ಇದು ಅನ್ಯಾಯ’ ಎಂದು ಧರ್ಮರಾಜನಿಗೆ ಧಿಕ್ಕಾರ ಹಾಕಿದರು. ಇನ್ನು ಮುಂದೆ ಏನೆಲ್ಲ ಅನರ್ಥ ಉಂಟಾಗುತ್ತದೋ ಎಂದು ಭೀಷ್ಮ, ದ್ರೋಣ, ಕೃಪಾ ಮುಂತಾದವರು ಭಯದಿಂದ ಬೆವೆತುಹೋದರು. ವಿದುರ ಸತ್ವಹೀನನಾಗಿ ತಲೆಯ ಮೇಲೆ ಕೈಯಿರಿಸಿ ಅಧೋಮುಖವಾಗಿ ಕುಳಿತುಬಿಟ್ಟನು. ಅಶ್ವತ್ಥಾಮ, ಭೂರಿಶ್ರವ ಮುಂತಾದವರೆಲ್ಲರೂ ಕೈಯಿಂದ ಕೈಯನ್ನು ತಿಕ್ಕುತ್ತಾ ತಲೆ ಕೆಳಗೆ ಮಾಡಿಕೊಂಡು ಕುಳಿತುಬಿಟ್ಟರು. ಹೀಗೆ ಇಡೀ ಸಭೆಯೇ ತಲೆ ಕೆಳಗಾಗಿ ಕುಳಿತಿದ್ದರೆ ಧೃತರಾಷ್ಟ್ರ ಮಾತ್ರ ಸಂತೋಷದಿಂದ ಮತ್ತೂ ಮತ್ತೂ, ‘ನನ್ನ ಮಕ್ಕಳು ಏನನ್ನು ಗೆದ್ದರು?’ ಎಂದು ಪ್ರಶ್ನಿಸಿದನು. ತನ್ನನ್ನು ಭಾರಿ ನಿಷ್ಪಕ್ಷಪಾತಿ, ತನಗೆ ಪಾಂಡವರು ಕೌರವರು ಇಬ್ಬರೂ ಸಮಾನ ಎಂದು ಪ್ರತಿಬಿಂಬಿಸಿಕೊಳ್ಳುತ್ತಿದ್ದ ಧೃತರಾಷ್ಟ್ರನಿಗೆ ಈ ಸಂದರ್ಭದಲ್ಲಿ ಮಾತ್ರ ನಿಜರೂಪವನ್ನು ಮುಚ್ಚಿಡಲಾಗಲಿಲ್ಲ.

ಇನ್ನು ಕೆಲವೇ ನಿಮಿಷಗಳಲ್ಲಿ ಶಕುನಿ ದ್ರೌಪದಿಯನ್ನೂ ಗೆದ್ದುಬಿಡುತ್ತಾನೆ ಎಂದು ಕರ್ಣ ದುಶ್ಶಾಸನರು ಸಂತೋಷದಿಂದ ಕುಣಿದಾಡಿದರು. ದ್ರೌಪದಿಯನ್ನು ಪಣಕ್ಕಿಟ್ಟಾಗ ಸಭೆಯಲ್ಲಿ ನೆರೆದ ಜನರೆಲ್ಲರೂ ಕಣ್ಣೀರಿಡತೊಡಗಿದರು. ಇಂತಹ ಸಂದರ್ಭದಲ್ಲಿ ಶಕುನಿ ಒಂದೇ ಅವಕಾಶದಲ್ಲಿ, ‘ದ್ರೌಪದಿಯನ್ನು ಗೆದ್ದಿದ್ದೇವೆ’ ಎಂದು ಘೊಷಿಸಿದನು. ‘ಪಾಂಡವರ ರಾಜ್ಯ, ಕೋಶ ಎಲ್ಲವನ್ನೂ ಗೆದ್ದಿದ್ದೇವೆ. ಅಷ್ಟೇ ಅಲ್ಲದೆ ಪಾಂಡವರೇ ನಮ್ಮ ದಾಸರಾಗಿದ್ದಾರೆ. ಜೊತೆಗೆ ದ್ರೌಪದಿಯೂ ನಮ್ಮ ದಾಸಿಯಾಗಿದ್ದಾಳೆ’ ಎಂದು ದುರ್ಯೋಧನಾದಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ಬಳಿಕ ದುರ್ಯೋಧನ ಮೊದಲಿನಿಂದಲೂ ತನ್ನ ಕಾರ್ಯಗಳಿಗೆಲ್ಲ ಅಡ್ಡಗಾಲು ಹಾಕುತ್ತಾ ಬಂದ ವಿದುರನನ್ನೇ ಕರೆದು, ಅವನನ್ನು ಛೇಡಿಸಲೆಂದೇ, ‘ಈ ಕ್ಷಣದಿಂದ ನಮ್ಮ ದಾಸಿಯಾಗಿರುವ ದ್ರೌಪದಿಯನ್ನು ಹೋಗಿ ಕರೆದು ತಾ, ನಮ್ಮ ದಾಸಿಯರೊಂದಿಗೆ ಅವಳೂ ಅರಮನೆಯ ಚಾಕರಿ ಮಾಡಿಕೊಂಡಿರಲಿ’ ಎಂದನು.

ದುರ್ಯೋಧನನ ಅತ್ಯಂತ ನಿಕೃಷ್ಟವಾದ ಈ ಮಾತುಗಳನ್ನು ಕೇಳಿ ವಿದುರನಿಗೆ ಸಹಿಸಲಾಗಲಿಲ್ಲ. ‘ಮಹಾರಾಣಿಯಾದ ದ್ರೌಪದಿಯು ಯಾರ ದಾಸಿಯಾಗಲೂ ಅರ್ಹಳಲ್ಲ. ಅಂತಹ ಪತಿವ್ರತೆಯಾದ ದ್ರೌಪದಿಯನ್ನು ನೀನು ದಾಸಿ ಎಂದು ಕರೆಯುತ್ತಿರುವೆಯಲ್ಲ! ಯಾರನ್ನು ಬೇಕಾದರೂ ಬುದ್ಧಿವಾದ ಹೇಳಿ ಸರಿಪಡಿಸಬಹುದು ಆದರೆ ನಿನ್ನನ್ನು ಮಾತ್ರ ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ನೀರಿನಲ್ಲಿ ತೇಲುವ ಮರದ ತುಂಡು ಮುಳುಗಬಹುದು; ಮುಳುಗುವ ಕಲ್ಲು ನೀರಿನ ಮೇಲೆ ತೇಲಬಹುದು. ಆದರೆ ನಿನ್ನ ಬುದ್ಧಿ ಮಾತ್ರ ಬದಲಾಗಲು ಸಾಧ್ಯವಿಲ್ಲ’ – ಹೀಗೆ ವಿದುರ ಹೇಳಿದಾಗ ದುರ್ಯೋಧನ ವಿದುರನನ್ನು ಧಿಕ್ಕರಿಸಿ, ‘ನಾನು ಇಡುವ ಪ್ರತಿಯೊಂದು ಹೆಜ್ಜೆಗೂ ಅಡ್ಡಗಾಲು ಹಾಕುತ್ತಾ ಬೇಡದ್ದನ್ನು ಮಾತನಾಡುವ ಈತನ ಮಾತಿಗೆ ಬೆಲೆ ನೀಡುವವರಾರು?’ ಎಂದು ದ್ರೌಪದಿಯನ್ನು ಕರೆತರಲು ಪ್ರತಿಗಾಮಿಯನ್ನು ಕಳುಹಿಸಿದನು.

ಪ್ರತಿಗಾಮಿಯು ಸಭೆಯಲ್ಲಿ ನಡೆದ ಸಂಗತಿಯನ್ನೆಲ್ಲ ದ್ರೌಪದಿಯ ಬಳಿ ವಿವರಿಸಿದನು. ಪ್ರತಿಗಾಮಿಯ ಮಾತುಗಳನ್ನು ಕೇಳಿದ ದ್ರೌಪದಿ, ‘ಜೂಜಿನಿಂದ ಒಬ್ಬರ ಸೊತ್ತನ್ನು ಮತ್ತೊಬ್ಬರು ಪಡೆಯುವುದು ನ್ಯಾಯವೇ? ಅದರಲ್ಲಿಯೂ ಪತಿ ಇರುವಾಗಲೇ ಪತ್ನಿಯಾದವಳು ಮತ್ತೊಬ್ಬರ ದಾಸಿಯಾಗಲು ಸಾಧ್ಯವೇ?’ ಎಂದು ಕೇಳಿದಳು. ಪ್ರತಿಗಾಮಿಯು ಸಭೆಗೆ ಹಿಂತಿರುಗಿ ದ್ರೌಪದಿಯು ಕೇಳಿದ ಪ್ರಶ್ನೆಗಳನ್ನು ಅರುಹಿದನು. ‘ನಿನ್ನ ಮುಖಾಂತರ ಪ್ರಶ್ನೆ ಕೇಳುವಷ್ಟು ಅಹಂಕಾರ ಅವಳಿಗೆ ಬೇಡ. ಅವಳೇ ಇಲ್ಲಿಗೆ ಬಂದು ಪ್ರಶ್ನೆ ಕೇಳಲಿ. ನಾವು ಉತ್ತರಿಸುತ್ತೇವೆ’ ಎಂದನು ದುರ್ಯೋಧನ. ಪ್ರತಿಗಾಮಿಯು ದ್ರೌಪದಿಯ ಬಳಿಗೆ ತೆರಳಿ ದುರ್ಯೋಧನನ ಮಾತನ್ನು ಅನುವಾದಿಸಿದನು. ದ್ರೌಪದಿ ನುಡಿದಳು, ‘ನನ್ನ ಪ್ರಶ್ನೆ ಸಭೆಯಲ್ಲಿ ನೆರೆದಿರುವ ಧರ್ಮಜ್ಞರಾದ ಭೀಷ್ಮ ದ್ರೋಣಾದಿಗಳಿಗೇ ಹೊರತು ದುರ್ಯೋಧನನಿಗಲ್ಲ. ರಜಸ್ವಲೆಯಾಗಿ ಏಕವಸ್ತ್ರಧಾರಿಣಿಯಾಗಿರುವ ನಾನು ಸಭೆಗೆ ಬರುವುದು ಧರ್ಮ ಸಮ್ಮತವೇ?’

ಪ್ರತಿಗಾಮಿಯು ಪುನಃ ಸಭೆಗೆ ತೆರಳಿ ದ್ರೌಪದಿಯು ಹೇಳಿದ ಮಾತುಗಳನ್ನು ಹೇಳಲಾರಂಭಿಸಿದನು. ದುರ್ಯೋಧನನನ್ನು ಎದುರುಹಾಕಿಕೊಳ್ಳುವ ಧೈರ್ಯವಿಲ್ಲದೆ ದ್ರೌಪದಿಯ ಪ್ರಶ್ನೆಗೆ ಉತ್ತರಿಸದೆ ಇಡೀ ಸಭೆಯೇ ತಲೆ ತಗ್ಗಿಸಿತು. ಇಡೀ ಸಭೆ ಸ್ತಬ್ಧವಾದಾಗ ಪ್ರತಿಗಾಮಿಯು , ‘ಏಕೆ ಒಬ್ಬರೂ ದ್ರೌಪದಿಯ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ? ನಾನು ದ್ರೌಪದಿಯ ಬಳಿಗೆ ಹೋಗಿ ಏನು ಹೇಳಲಿ?’ ಎಂದು ಕೇಳಿದನು. ಪ್ರತಿಗಾಮಿಯ ಮಾತುಗಳನ್ನು ಕೇಳಿದ ದುರ್ಯೋಧನ, ‘ಈ ಪ್ರತಿಗಾಮಿಗೆ ದ್ರೌಪದಿಯನ್ನು ಕರೆದು ತರುವ ಧೈರ್ಯವಿಲ್ಲ. ಒಮ್ಮೆ ಅವಳ ಬಳಿಗೆ ತೆರಳುತ್ತಾನೆ, ಮತ್ತೊಮ್ಮೆ ಇಲ್ಲಿಗೆ ಬರುತ್ತಾನೆ. ಇವನಿಂದ ನಮಗೆ ಯಾವ ಪ್ರಯೋಜವೂ ಇಲ್ಲ. ದುಶ್ಶಾಸನ! ನೀನು ಹೋಗಿ ದ್ರೌಪದಿಯನ್ನು ಸೆಳೆದು ತಾ. ಅವಳು ನಿನ್ನ ಮಾತನ್ನೂ ಕೇಳದಿದ್ದರೆ ಆಕೆಯ ತಲೆ ಕೂದಲನ್ನು ಹಿಡಿದು ಎಳೆದು ತಾ’ ಎಂದನು. ಇಂತಹ ನೀಚಕೃತ್ಯಕ್ಕೇ ಕಾಯುತ್ತಿದ್ದ ದುಶ್ಶಾಸನ ಯಾವುದೇ ಹಿಂಜರಿಕೆಯಿಲ್ಲದೆ ನೇರವಾಗಿ ದ್ರೌಪದಿಯ ಬಳಿಗೆ ತೆರಳಿದನು. ದ್ರೌಪದಿಯನ್ನು ಕುರಿತು, ‘ಇನ್ನುಮುಂದೆ ಪಾಂಡವರ ಸಂಪರ್ಕ ನಿನಗಿಲ್ಲ; ನಿನ್ನ ಒಡೆಯನಾದ ದುರ್ಯೋಧನ ಹೇಳಿದಂತೆ ಕೇಳಿಕೊಂಡು ಅವನ ಜೊತೆಯಲ್ಲಿಯೇ ನೀನು ಇರಬೇಕು’ ಎಂದು ಅತ್ಯಂತ ನಿಕೃಷ್ಟವಾದ ಮಾತುಗಳನ್ನಾಡಿದನು.

Leave a Reply

Your email address will not be published. Required fields are marked *

Back To Top