ಜನಪ್ರಿಯ ಘೋಷಣೆಗಳು ವರ್ಸಸ್​ ಪ್ರಗತಿಯ ಹೆಜ್ಜೆಗಳು!

Latest News

ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಸ್ತವ್ಯ ಹೂಡಿದ ಶಾಲೆಯಲ್ಲಿ ಶಿಕ್ಷಕರಿಂದ ಮಹಾ ಪ್ರಮಾದ

ಚಾಮರಾಜನಗರ: ಸಚಿವರ ಬಳಕೆಗೆಂದು ಮೀಸಲಿಟ್ಟ ಶೌಚಗೃಹವನ್ನು ಶಾಲಾ ಮಕ್ಕಳ ಕೈಯಲ್ಲಿ ಸ್ವಚ್ಛಗೊಳಿಸುವ ಮೂಲಕ ಶಾಲಾ ಶಿಕ್ಷಕರು ಪ್ರಮಾದವೆಸಗಿರುವ ಘಟನೆ ರಾಜ್ಯದ ಗಡಿಭಾಗದ ಶಾಲೆಯೊಂದರಲ್ಲಿ...

ರಾಷ್ಟ್ರ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಡುವ ಧೀರ ಯೋಧರಿಗಾಗಿ “ಐರನ್​ ಮ್ಯಾನ್​” ಉಡುಪು ಅಭಿವೃದ್ಧಿಪಡಿಸಿದ ಯುವಕ!

ವಾರಾಣಸಿ: ಹಾಲಿವುಡ್​ ಐರನ್​ ಮ್ಯಾನ್​ ಚಿತ್ರದಿಂದ ಸ್ಪೂರ್ತಿಗೊಂಡು ವಾರಾಣಸಿಯ ಖಾಸಗಿ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು "ಐರನ್​ ಮ್ಯಾನ್​" ಉಡುಪನ್ನು ಅಭಿವೃದ್ಧಿಪಡಿಸಿ ಸುದ್ದಿಯಾಗಿದ್ದಾರೆ. ಎದುರಾಳಿಯೊಂದಿಗೆ ಸೆಣಸಾಡುವ...

ಐಟಿ-ಬಿಟಿ ಅಭಿವೃದ್ಧಿಗೆ ಸರ್ಕಾರದ ಸಹಕಾರ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ, ಬೆಂಗಳೂರು ಟೆಕ್ ಸಮಿಟ್​ಗೆ ಅದ್ದೂರಿ ಚಾಲನೆ

ಬೆಂಗಳೂರು: ಆವಿಷ್ಕಾರ, ಸೇವಾ ಕ್ಷೇತ್ರಗಳ ಜತೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ....

ಬಿಐಎಸ್ ವರದಿ ಆತಂಕಕಾರಿ: ಜಲಮಂಡಳಿಗೆ ತಜ್ಞರ ಸಲಹೆ, ಗುಣಮಟ್ಟದ ನೀರಿಗೆ ನಾಗರಿಕರ ಆಗ್ರಹ

ಬೆಂಗಳೂರು: ಬೆಂಗಳೂರು ಜಲಮಂಡಳಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಲ್ಲ ಎಂಬುದು ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ಇದು...

ವೈದ್ಯರಿಂದ ಮಾತೃಹೃದಯದ ಸೇವೆ

ಬೆಳ್ತಂಗಡಿ: ವೈದ್ಯರು ಮಾನವೀಯತೆ ಹಾಗೂ ನಗುಮುಖದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇ ದೇವರ ಸೇವೆಯಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ...

|ಚಕ್ರವರ್ತಿ ಸೂಲಿಬೆಲೆ

ಮಿಕ್ಕ ರಾಜಕಾರಣಿಗಳು ಘೋಷಣೆಗಳನ್ನು ಮಾಡಿ ವೋಟು ಪಡೆದುಕೊಂಡರೆ, ಮೋದಿ ವೋಟು ಪಡೆದ ನಂತರ ಅವಡುಗಚ್ಚಿ ಕೆಲಸ ಮಾಡಿದರು. ಹೀಗಾಗಿಯೇ ಅವರ ಮುಖದಲ್ಲಿ ಮಂದಹಾಸ ಮಾಯವಾಯ್ತೆಂದೆನಿಸಿದೊಡನೆ ಅನೇಕರಿಗೆ ಸಂಕಟವಾದಂತೆನಿಸುತ್ತದೆ. ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂಬ ತುಡಿತಕ್ಕೆ ಒಳಗಾಗುತ್ತಾರೆ. ಅದಾಗಲೇ ಅನೇಕ ಕಡೆಯಲ್ಲಿ ಹೋಮಗಳು ಆರಂಭವಾಗಿವೆ.

ಐದು ರಾಜ್ಯಗಳ ಚುನಾವಣೆ ಮತ್ತು ನಂತರದ ಬೆಳವಣಿಗೆಗಳ ಚರ್ಚೆ ಇನ್ನೂ ನಿಂತೇ ಇಲ್ಲ. ಏಕೆಂದರೆ ಅದು ಬರಲಿರುವ ಲೋಕಸಭಾ ಚುನಾವಣೆಗೆ ಬಲು ಹತ್ತಿರದ ಪೂರ್ವಭಾವಿ ಚುನಾವಣೆ. ಬಹುಶಃ ಹರಿಯಾಣಾದಲ್ಲಿ ಮುನ್ಸಿಪಾಲಿಟಿ ಚುನಾವಣೆಗಳಲ್ಲಿ ಭಾಜಪ ಎದುರಾಳಿಗಳನ್ನು ಕ್ಲೀನ್​ಸ್ವೀಪ್ ಮಾಡಿರದೆ ತಾನೇ ಪೂರಾ ಸ್ವೀಪ್ ಆಗಿಬಿಟ್ಟಿದ್ದರೆ ಕಾಂಗ್ರೆಸ್ಸು 2019ರ ಚುನಾವಣೆಯನ್ನು ಗೆದ್ದೇಬಿಟ್ಟೆ ಎಂದು ಬೀಗಿಬಿಡುತ್ತಿತ್ತೇನೋ! ಈ ಚುನಾವಣೆಗಳಲ್ಲಿ ರೈತರ ಬೆಲೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು, ಪೂರ್ಣ ಸಾಲಮನ್ನಾ ಮಾಡುವುದು, ನಿರುದ್ಯೋಗಿಗಳಿಗೆ ಭತ್ಯೆ ಕೊಡುವುದು ಈ ಬಗೆಯ ಜನಪ್ರಿಯ ಘೊಷಣೆಗಳನ್ನು ಜನರ ಮುಂದಿರಿಸಿಯೇ ಚುನಾವಣೆಯನ್ನು ಗೆದ್ದದ್ದೆಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಆದರೆ, ಚುನಾವಣೆ ಗೆಲ್ಲಲೆಂದೇ ಜನಪ್ರಿಯ ಘೊಷಣೆಗಳನ್ನು ಮಾಡಬೇಕಾದ ಪರಿಸ್ಥಿತಿಯೇ ಇನ್ನೂ ರಾಷ್ಟ್ರವನ್ನು ನಿಲ್ಲಿಸಿರುವುದು ಅದೆಷ್ಟು ಸರಿ ಎಂಬುದೇ ಪ್ರಶ್ನಾರ್ಹ ಸಂಗತಿ. ರೈತರ ಸಾಲಮನ್ನಾ ಎಂಬ ಸಂಗತಿಯೊಂದು ರಾಜ್ಯದ, ದೇಶದ ಪ್ರಗತಿಗಿಂತ ಮಹತ್ವದ ಅಂಶವಾಗಿ ಚರ್ಚೆಯಾಗುವುದು ದುರದೃಷ್ಟಕರವೇ ಸರಿ. ಇಷ್ಟಕ್ಕೂ ರೈತರ ಸಾಲಮನ್ನಾ ಎಂಬುದೇ ಮೂಗಿಗೆ ತುಪ್ಪ ಸವರುವ ಆಟ, ವ್ಯವಸ್ಥಿತವಾದ ಮೋಸ. ರೈತರ ಹೆಸರಲ್ಲಿ ಮುಂದೆ ನಿಲ್ಲುವವರೇ ಬೇರೆ, ನಿಜವಾದ ರೈತರೇ ಬೇರೆ ಎಂಬುದನ್ನು ಅರ್ಥಮಾಡಿಕೊಳ್ಳಲಾರದ ಸಾಮಾನ್ಯರ ತಾಕಲಾಟ. ಹಾಗೇ ಸುಮ್ಮನೆ ಆಲೋಚಿಸಿ ನೋಡಿ. ನಮ್ಮನ್ನೇ ನಾವು ಸಾಕಷ್ಟು ಬಾರಿ ಕೇಳಿಕೊಂಡಿರುತ್ತೇವೆ, ರೈತರಿಗಾಗಿ ನಾವೇನು ಮಾಡಿದ್ದೇವೆ ಅಂತ. ಸಾಮಾನ್ಯ ಜನರಾಗಿ ನಾವು ಅವರಿಂದ ವಸ್ತುಗಳನ್ನು ಖರೀದಿಸಿದ್ದೇವೆ. ಬೆಲೆ ದುಪ್ಪಟ್ಟಾದಾಗಲೂ ತೆಗೆದುಕೊಳ್ಳಬೇಕಾದ್ದನ್ನು ತೆಗೆದುಕೊಂಡೇ ಇದ್ದೇವೆ, ರೈತನ ಬೆಳೆ ಹಾಳಾದಾಗ ಮತ್ತೇನೂ ಮಾಡಲಾಗದಿದ್ದರೂ ಒಂದಷ್ಟು ಮರುಗಿದ್ದೇವೆ. ಅವನಿಗೆ ಬೆಳೆ ನಷ್ಟವಾದಾಗ ಸರ್ಕಾರ ಬೆಂಬಲ ಘೊಷಿಸಿರುವುದು ನಾವು ಕಟ್ಟಿದ ತೆರಿಗೆ ಹಣದಲ್ಲೇ. ಎಲ್ಲ ಸಕ್ಕರೆ ಕಾರ್ಖಾನೆಗಳೂ ಮಂತ್ರಿ ಮಾಗಧರದ್ದೇ. ಆದರೆ, ರೈತರಿಗೆ ಕುಂಟುನೆಪಗಳನ್ನು ಹೇಳಿ ಹಣಕೊಡದೆ ಸತಾಯಿಸಿ ವ್ಯವಸ್ಥಿತವಾಗಿ ಬೀದಿಗಿಳಿಯುವಂತೆ ಮಾಡಿ ಕೆಲವು ಗೂಂಡಾಗಳ ಮೂಲಕ ಸರ್ಕಾರಿ ಆಸ್ತಿ-ಪಾಸ್ತಿಗಳನ್ನು ನಾಶಗೈದು, ಅವರು ಮತ್ತೆ ಹಾಳುಮಾಡುವಂತೆ ಮಾಡಿದ್ದು ನಾನು-ನೀವು ಕಟ್ಟಿದ ತೆರಿಗೆ ಹಣದ ವಸ್ತುಗಳನ್ನೇ.

ಇಷ್ಟೆಲ್ಲ ರಾದಾಟಛಿಂತದ ನಂತರ ಸರ್ಕಾರ ಕೃತಕ ಒತ್ತಡವನ್ನು ಸೃಷ್ಟಿಸಿಕೊಂಡು ಸಾವಿರಾರು ಕೋಟಿ ರೂಪಾಯಿಯ ಬೆಂಬಲಬೆಲೆಯನ್ನು ಕಬ್ಬು ಬೆಳೆಗಾರರಿಗೆ ಘೊಷಿಸಿತ್ತಲ್ಲ, ಅದರಲ್ಲಿ ಎಷ್ಟು ಕಾರ್ಖಾನೆ ಮಾಲೀಕರಿಗೆ ಸೇರುತ್ತದೋ ಎಷ್ಟು ಬೆಳೆಗಾರರಿಗೆ ಸೇರುವುದೋ ದೇವರೇ ಬಲ್ಲ! ಆದರೆ, ನಾವು ಕಟ್ಟಿದ ತೆರಿಗೆಯ ಹಣವಂತೂ ರೈತರ ಹೆಸರಲ್ಲಿ ಹೇಗೆ ಬಳಕೆಯಾಯ್ತೆಂಬುದೂ ಗೊತ್ತಾಗಲಿಲ್ಲ. ಸಾಲಮನ್ನಾದ್ದೂ ಅದೇ ಕತೆ. ಸರ್ಕಾರಿ ಬ್ಯಾಂಕುಗಳಿಗೆ ಬರದ ರೈತ ಖಾಸಗಿಯವರ ಬಳಿ ಸಾಲ ತೆಗೆದುಕೊಳ್ಳುತ್ತಾನೆ. ಏಕೆಂದರೆ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಲು ರೈತರಿಗೆ ತೀರಿಸುವ ಸಾಮರ್ಥ್ಯವಿದೆಯೋ ಇಲ್ಲವೋ ನೋಡುತ್ತಾರೆ. ತೀರಿಸುವ ಸಾಮರ್ಥ್ಯ ಇದ್ದವ ಸಾಲವನ್ನು ಆಲೋಚಿಸಿ ಪಡೆದುಕೊಳ್ಳುತ್ತಾನೆ. ಅತ್ತ ಖಾಸಗಿಯವರ ಬಳಿ ಸಾಲ ತೆಗೆದುಕೊಂಡ ರೈತ ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನಲ್ಲ, ಅವನ ಶವವನ್ನು ಮುಂದಿಟ್ಟುಕೊಂಡು ಕಣ್ಣೀರ್ಗರೆಯುವ, ಬೀದಿಗಿಳಿಯುವ ಈ ಸಿರಿವಂತರು ಸಾಲಮನ್ನಾಕ್ಕಾಗಿ ಕೂಗಾಡಲಾರಂಭಿಸುತ್ತಾರೆ. ಪಕ್ಷಗಳು ಚುನಾವಣೆಗೆ ಆ ಸಾಲಮನ್ನಾದ ಭರವಸೆ ಕೊಟ್ಟೇ ಮುಂದಡಿಯಿಡುತ್ತವೆ. ಕರ್ನಾಟಕದ ಚುನಾವಣೆ ನೆನಪಿರಬೇಕಲ್ಲ. ‘ಪೂರ್ಣ ಸಾಲಮನ್ನಾ’ ಎಂದು ಅವೈಜ್ಞಾನಿಕವಾಗಿ ಭರವಸೆ ಕೊಟ್ಟ ಕುಮಾರಸ್ವಾಮಿಯವರಿಗೆ ತಾವು ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎಂಬ ಸ್ಪಷ್ಟ ಪರಿಕಲ್ಪನೆ ಇತ್ತು. ಹೇಗೋ ಅಧಿಕಾರಕ್ಕೆ ಬಂದೊಡನೆ ಮುಂದೇನು ಮಾಡಬೇಕೆಂದು ತೋಚದೆ, ‘ಹೋರಾಟ ಮಾಡುತ್ತಿರುವ ರೈತರು ರೈತರೇ ಅಲ್ಲ’ ಎಂದುಬಿಟ್ಟರು.

ಮತ್ತೆ ವಿಷಯಕ್ಕೆ ಬನ್ನಿ. ಕೊನೆಗೂ ಸರ್ಕಾರಗಳು ಅಧಿಕಾರಕ್ಕೆ ಬಂದು ರೈತರ ಸಾಲಮನ್ನಾ ಮಾಡುತ್ತವಲ್ಲ, ಮತ್ತದು ನಾವು-ನೀವು ಕಟ್ಟಿದ ತೆರಿಗೆ ಹಣವೇ. ದೇಶದ, ನಾಡಿನ ಅಭಿವೃದಿಟಛಿಗೆಂದು ಕಟ್ಟಿದ ತೆರಿಗೆಯನ್ನು ಹೀಗೆ ರೈತರ ಸಾಲಮನ್ನಾ, ವಾಣಿಜ್ಯೋದ್ಯಮಿಗಳ ಸಾಲಮನ್ನಾ ಎನ್ನುತ್ತ ಹಣಕೊಟ್ಟು ಕೈ ತೊಳೆದುಕೊಳ್ಳುತ್ತ ಕುಳಿತರೆ ಇದು ವ್ಯವಸ್ಥಿತವಾದ ಸಮಸ್ಯೆಯೊಂದನ್ನು ಹುಟ್ಟುಹಾಕಿದಂತಾಗಲಾರದೇ? ಅಷ್ಟೆ ಅಲ್ಲದೆ, ಕಷ್ಟಪಟ್ಟು ದುಡಿದು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನತೆ ಒಟ್ಟಾರೆ ಅಭಿವೃದಿಟಛಿ ಮತ್ತು ಪ್ರಗತಿಯನ್ನು ಕಾಣುವುದೇ ಬೇಡವಾ?!

ಹಾಗಂತ ಈ ಸಮಸ್ಯೆ ಇಲ್ಲಿ ಮಾತ್ರವಲ್ಲ. ಇಂಗ್ಲೆಂಡು ಕೂಡ ಇಂಥದ್ದೇ ಜ್ವಾಲಾಮುಖಿಯೊಂದರ ಮೇಲೆ ಕುಳಿತಿದೆ. ಅಲ್ಲಿ ಬಹಳ ಹಿಂದಿನಿಂದಲೂ ರಾಷ್ಟ್ರೀಯ ಆರೋಗ್ಯ ಯೋಜನೆಯೊಂದು ಜಾರಿಯಲ್ಲಿದೆ. ಇಂಗ್ಲೆಂಡಿನ ನಾಗರಿಕರಾದವರಿಗೆ ಆರೋಗ್ಯದ ನಿರ್ವಹಣಾ ವೆಚ್ಚ ಅಲ್ಲಿ ಸಂಪೂರ್ಣ ಉಚಿತ. ಅದು ಐದು ರೂಪಾಯಿ ಆಗಬಹುದು, 50 ಲಕ್ಷವೇ ಆಗಬಹುದು. ಹಾಗಂತ ಅದು ಅಲ್ಲಿ ಕಾಟಾಚಾರದ ವ್ಯವಸ್ಥೆ ಅಲ್ಲ. ಸರ್ಕಾರ ಇದಕ್ಕಾಗಿ ತೆರಿಗೆದಾರರ ಸಾವಿರಾರು ಕೋಟಿ ರೂಪಾಯಿ ಹಣವನ್ನು ಸುರಿ-ಸುರಿದು ಪಾತ್ರೆ ಬರಿದುಮಾಡುತ್ತಿದೆ. ಪ್ರತಿ ಚುನಾವಣೆಯಲ್ಲೂ ಅವರ ಚರ್ಚೆಯ ಕೇಂದ್ರಬಿಂದು ಈ ಆರೋಗ್ಯ ಯೋಜನೆಯೇ. ಇದಕ್ಕೆ ಹೆಚ್ಚು ಹಣ ಕೊಡುತ್ತೇನೆನ್ನುವವರು ಗೆದ್ದು ಬರುತ್ತಾರೆ. ವ್ಯವಸ್ಥೆಯನ್ನು ಸರಿಪಡಿಸುತ್ತೇನೆನ್ನುವವರು ಮನೆಗೆ ಹೋಗುತ್ತಾರೆ. ಇಂಗ್ಲೆಂಡಿನಲ್ಲಿ ಅದಾಗಲೇ ತುಂಬಿಕೊಳ್ಳುತ್ತಿರುವ ನಿರಾಶ್ರಿತರೂ ಇದರ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ತೆರಿಗೆದಾರ ಈಗ ಬಾಯಿ-ಬಾಯಿ ಬಿಡುತ್ತಿದ್ದಾನೆ. ಬ್ರೆಕ್ಸಿಟ್​ನ ಹಿಂದಿರುವ ಒಂದು ಪ್ರಮುಖವಾದ ಚರ್ಚೆಯೂ ಇದೇ ಆಗಿತ್ತು. ಇಂಗ್ಲೆಂಡ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಜಗತ್ತಿನ ರಾಷ್ಟ್ರಗಳ ಮುಂದೆ ದಯನೀಯ ಸ್ಥಿತಿಗೆ ಬಂದಿರುವುದೇ ಈ ಕಾರಣದಿಂದ ಎಂದೂ ಮಾತನಾಡಿಕೊಳ್ಳಲಾಗುತ್ತದೆ.

ನರೇಂದ್ರ ಮೋದಿಯವರ ಆಗಮನದ ನಂತರ ಈ ಥರದ ಎಲ್ಲ ಕುರುಡು ಯೋಜನೆಗಳಿಗೆ ನಿಸ್ಸಂಶಯವಾಗಿ ಬ್ರೇಕ್ ಬಿದ್ದಿತ್ತು. ಆರ್ಥಿಕ ಸೌಲಭ್ಯವನ್ನು ನೇರವಾಗಿ ಆಯಾ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಸೇರುವಂತೆ ಮಾಡುವ ಮೊದಲ ಪ್ರಯಾಸದಿಂದಲೇ ಅನೇಕ ಬಗೆಯ ಭ್ರಷ್ಟಾಚಾರಗಳು ನಿಂತಿದ್ದವು. ರೈತರ ವಿಚಾರದಲ್ಲಿ ಮೋದಿ ವ್ಯವಸ್ಥೆಯನ್ನೇ ಮರುರೂಪಿಸುವ ಪ್ರಯತ್ನದಲ್ಲಿ ತೊಡಗಿದ್ದರು. ಪ್ರತಿಯೊಬ್ಬ ರೈತನಿಗೂ ಮಣ್ಣಿನ ಆರೋಗ್ಯದ ಕಾರ್ಡ್ ವಿತರಿಸುವ ಅವರ ಪ್ರಯತ್ನದ ಹಿಂದಿನ ಉದ್ದೇಶ, ರೈತನನ್ನು ಸ್ಥಳೀಯ ಕೃಷಿ ಕಾಲೇಜುಗಳೊಂದಿಗೆ ಜೋಡಿಸುವುದಾಗಿತ್ತು. ಅದರರ್ಥ ರೈತ ಮತ್ತು ಆಧುನಿಕ ವಿಜ್ಞಾನವನ್ನು ಬೆಸೆಯುವುದು. ಹಾಗಂತ ಎಲ್ಲವನ್ನೂ ಆಧುನಿಕಗೊಳಿಸಿಬಿಡುವ ಹುಚ್ಚೇನೂ ಅವರಿಗಿರಲಿಲ್ಲ. ವಿಜ್ಞಾನಿಯೂ ರೈತನ ಮಾತು ಕೇಳುವಂತಾಗಲೆಂದು ‘ಪರಂಪರಾಗತ ಕೃಷಿವಿಕಾಸ ಯೋಜನೆ’ಯನ್ನು ಜಾರಿಗೆ ತಂದರು. ಅದು ರೈತನ ಪರಂಪರಾನುಗತ ಕೃಷಿಪದಟಛಿತಿಗೆ ವಿಜ್ಞಾನದ ಮುದ್ರೆಯೊತ್ತುವ ಪರಿ. ರೈತ ಕೃಷಿಯಲ್ಲಷ್ಟೆ ಅಲ್ಲದೆ ಅದಕ್ಕೆ ಪೂರಕವಾದ ಕೆಲಸಗಳಲ್ಲೂ ತೊಡಗಲೆಂದೇ ಹೈನುಗಾರಿಕೆಗೆ ಸಂಬಂಧಪಟ್ಟ ಮೂಲಸೌಕರ್ಯದ ಅಭಿವೃದಿಟಛಿಗೆ ಹಣವನ್ನು ಮೀಸಲಿಟ್ಟಿದ್ದೂ ಮೋದಿ ಸರ್ಕಾರವೇ. ಕೃಷಿ ಮಾರುಕಟ್ಟೆಯನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಅಭಿವೃದಿಟಛಿಗೊಳಿಸಿ ಅದನ್ನು ಬಲು ಸುಂದರ ರೂಪದಲ್ಲಿ ರೈತರ ಮುಂದಿರಿಸುವ ಪ್ರಯತ್ನ ಮಾಡಿದ್ದು ಇದೇ ಸರ್ಕಾರ. ಕೃಷಿಯಲ್ಲಿ ಆವಿಷ್ಕಾರವನ್ನು ಬೆಂಬಲಿಸುವ ‘ಅಗ್ರಿ-ಉಡಾನ್’ ಯೋಜನೆಯನ್ನು ತಂದು ಕೃಷಿಕರಿಗೆ ನೂತನ ಸಂಶೋಧನೆಗೆ ಪ್ರೇರಣೆ ನೀಡಿದ್ದೂ ಮೋದಿಯವರೇ. ಎಲ್ಲ ಬಿಟ್ಟರೂ ಬೆಳೆಗಳಿಗೆ ಮುನ್ನವೇ ವಿಮೆ ಮಾಡಿಸಿ ಬೆಳೆ ನಷ್ಟಗೊಂಡರೆ ಅದಕ್ಕೆ ಸೂಕ್ತವಾದ ವಿಮೆಹಣ ದೊರಕುವಂತೆ ವೈಜ್ಞಾನಿಕವಾಗಿ ಆಲೋಚನೆ ನಡೆಸಿದ್ದೂ ನರೇಂದ್ರ ಮೋದಿಯವರೇ. ಅವರ ‘ಫಸಲ್ ಬಿಮಾ’ ಯೋಜನೆ ಆರಂಭದ ತೊಡಕುಗಳ ನಡುವೆಯೂ ಅನೇಕರಿಗೆ ಸಾಕಷ್ಟು ನಷ್ಟವನ್ನು ಸರಿದೂಗಿಸಿಕೊಟ್ಟಿದೆ ಎಂಬುದನ್ನಂತೂ ಅಲ್ಲಗಳೆಯಲಾಗದು. ಮತ್ತು ಈ ಯೋಜನೆಯಲ್ಲಿ ಮಧ್ಯವರ್ತಿಗಳ ಬದುಕು ನಡೆಯದಿರುವುದರಿಂದ ಅವರೆಲ್ಲರೂ ಇದರಲ್ಲಿ ತಪ್ಪುಗಳನ್ನು ಹುಡುಕುತ್ತ ಕೂತಿದ್ದಾರೆ, ಸಂತೋಷವೇ. ನರೇಂದ್ರ ಮೋದಿಯವರು ಈಗ ಇದ್ದಕ್ಕಿದ್ದಂತೆ ಮಧ್ಯಮವರ್ಗದವರ, ಮುಸಲ್ಮಾನರ, ದಲಿತರ, ಬ್ರಾಹ್ಮಣರ ವಿರೋಧಿಯಾಗಿದ್ದಾರೆ. ಒಟ್ಟಾರೆ ಅವರು ದೇಶದ ಪರವಾಗಿ ಮಾತ್ರ ಇರೋದು. ದುರಂತವೆಂದರೆ, ಅವರನ್ನು ಬೆಂಬಲಿಸಿಕೊಂಡು ಬಂದಿದ್ದವರೆಲ್ಲ ಅವರ ಸೋಲಿಗೆ ಕಾರಣವನ್ನು ವಿಶ್ಲೇಷಿಸುವ ಭರದಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಸ್ವತಃ ಕಾಂಗ್ರೆಸ್ಸಿಗರೇ ನಾಚುವಷ್ಟರ ಮಟ್ಟಿಗೆ ಭಾಜಪದ ಬೆಂಬಲಿಗರೇ ಮೋದಿಯವರನ್ನು ಆಡಿಕೊಳ್ಳುತ್ತಿದ್ದಾರಷ್ಟೇ ಅಲ್ಲದೆ, ಮೋದಿಯವರೂ ಒಂದಷ್ಟು ಜನಪ್ರಿಯ ಘೊಷಣೆಗಳನ್ನು ಮಂಡಿಸಿಬಿಡಬೇಕೆಂದು ಬಯಸುತ್ತಿದ್ದಾರೆ. ಸ್ವಾತಂತ್ರ್ಯದ 70 ವರ್ಷಗಳ ನಂತರ ಮೊದಲ ಬಾರಿಗೆ ಭಾರತ ಹೊಸಬಗೆಯ ರಾಜನೀತಿಯತ್ತ ಕಾಲಿಡುತ್ತಿದೆ. ಈ ರಾಜನೀತಿಯಲ್ಲಿ ರಾಷ್ಟ್ರಹಿತವೇ ಮುಖ್ಯವಾಗಿದೆಯೇ ಹೊರತು, ವ್ಯಕ್ತಿಯ, ಕುಟುಂಬದ, ಜಾತಿಯ ಹಿತವಲ್ಲ. ಇಂತಹ ಹೊತ್ತಿನಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡದೇ ಹೋದರೆ, ಅದು ಬಲುದೊಡ್ಡ ಅಪಾಯಕ್ಕೆ ಮುನ್ನುಡಿಯಾಗುತ್ತದೆ. ನರೇಂದ್ರ ಮೋದಿಯವರನ್ನು ಬಿಟ್ಟು ನಾವು ಆಯ್ಕೆ ಮಾಡಿಕೊಳ್ಳಲು ಹೊರಟಿರುವ ಮತ್ತೊಂದು ಮುಖ ರಾಹುಲ್​ರದ್ದು ಎಂದು ಕೇಳಲಿಕ್ಕೆ ನನಗೆ ಮುಜುಗರವೆನಿಸುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಮುನ್ನ ಗುಲಾಮ್ ನಬಿ ಆಜಾದ್​ರ, ಅಹ್ಮದ್ ಪಟೇಲರ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾರ ಮಾತನ್ನು ಕೇಳಿ ಉತ್ತರಿಸುವ ರಾಹುಲ್ ಭಾರತವನ್ನು ಪ್ರತಿನಿಧಿಸಿದರೆ, ನಮ್ಮ ಅಂತಾರಾಷ್ಟ್ರೀಯ ಗೌರವದ ಬೆಲೆ ಎಲ್ಲಿಗೆ ಬಂದು ನಿಲ್ಲಬಹುದೆಂದು ಊಹಿಸಲೂ ಕಷ್ಟವೆನಿಸುತ್ತದೆ. ಹಾಗೇನಾದರೂ ಈ ಚುನಾವಣೆಯಲ್ಲಿ ಭಾರತದ ಆಯ್ಕೆ ಮಹಾಘಟಬಂಧನದ ಈ ಮುಖಗಳೇ ಎನ್ನುವುದಾದರೆ ಖಂಡಿತವಾಗಿಯೂ ಸೋಲು ನರೇಂದ್ರ ಮೋದಿಯವರದ್ದಾಗಿರುವುದಿಲ್ಲ, ಸಮಗ್ರ ಭಾರತದ್ದೇ ಆಗಿರುತ್ತದೆ. ಹೀಗಾಗಿಯೇ ಈ ಬಾರಿ ಗೆಲ್ಲಬೇಕಿರುವುದು ಮೋದಿಯಲ್ಲ, ಭಾರತ! ಕಳೆದ 4 ವರ್ಷಗಳಲ್ಲಿ ಮೋದಿ ಅಪಾರವಾದ ಸಾಧನೆಯನ್ನು ನಮಗಾಗಿ ಮಾಡಿಟ್ಟಿದ್ದಾರೆ. ಎಲ್ಲ ಪಕ್ಷಗಳು ಹೆಣಗಾಡುತ್ತಿದ್ದ ಜಿಎಸ್​ಟಿಯನ್ನು ಜಾರಿಗೆ ತಂದು ನಮ್ಮ ಬದುಕನ್ನು ಸರಳಗೊಳಿಸಿದ್ದಾರೆ. ನೋಟ್ ರದ್ದತಿಯ ಮೂಲಕ ಸಾವಿರಾರು ಜನ ತೆರಿಗೆಕಳ್ಳರನ್ನು ಮುಖ್ಯವಾಹಿನಿಗೆ ತಂದುಬಿಟಿದ್ದಾರೆ. ‘ಜನಧನ’ ಯೋಜನೆಯ ಮೂಲಕ ಹಳ್ಳಿಯ ಅಜ್ಜಿಯನ್ನು ಆರ್ಥಿಕ ಅಪ್ಪುಗೆಯಿಂದ ಬಂಧಿಸಿದ್ದಾರೆ. ಕುಸಿಯಬಹುದಾಗಿದ್ದ ಆರ್ಥಿಕತೆಯ ಪಟ್ಟಿಯಲಿದ್ದ ಭಾರತವನ್ನು ಜಗತ್ತಿನ ಶ್ರೇಷ್ಠ 5 ಸ್ಥಿತಿವಂತ ರಾಷ್ಟ್ರಗಳ ಸಾಲಿಗೆ ಸೇರಿಸಿದ್ದಾರೆ. ವ್ಯಾಪಾರ ವಲಯಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ರ್ಯಾಂಕಿಂಗ್​ನಲ್ಲಿ ನಾವು ಸಾಕಷ್ಟು ಮೇಲಕ್ಕೇರಿಯಾಗಿದೆ. ಮನಸೋಇಚ್ಛೆ ಲೂಟಿಗೈಯುತ್ತಿದ್ದ ರಿಯಲ್ ಎಸ್ಟೇಟ್ ದಂಧೆಕೋರರು ಈಗ ತಹಬಂದಿಗೆ ಬಂದಿದ್ದಾರೆ. ಪಾಸ್​ಪೋರ್ಟ್​ಗೆ ತಿಂಗಳುಗಟ್ಟಲೆ ಅಲೆದಾಡಬೇಕಾಗುತ್ತಿತ್ತು. ಈಗ 3 ವಾರಗಳೊಳಗೆ ಪಾಸ್​ಪೋರ್ಟ್ ನಿಮ್ಮ ಕೈ ಸೇರುತ್ತದೆ. ಹೆದ್ದಾರಿಗಳು ಅತ್ಯಂತ ವೇಗವಾಗಿ ನಿರ್ವಣಗೊಳ್ಳುತ್ತಿವೆ. ಗ್ರಾಮೀಣ ರಸ್ತೆಗಳು, ಗಡಿರಸ್ತೆಗಳು ಹಿಂದೆಂದೂ ಊಹಿಸದಷ್ಟು ವೇಗವಾಗಿ ನಿರ್ವಣಗೊಳ್ಳುತ್ತಿವೆ. ಕರ್ನಾಟಕದಲ್ಲಿರಲಿ, ದೇಶದಲ್ಲಿರಲಿ ಪರಿವಾರದ ನಾಯಕರುಗಳನ್ನು ಮಾತನಾಡಿಸಿದರೆ, ಆ ಪರಿವಾರದ ಗುಲಾಮರು ಕಚ್ಚಲು ಕಾಯುತ್ತಿರುತ್ತಾರೆ. ಆದರೆ, ಮೋದಿತಂಡದ ಪ್ರತಿಯೊಬ್ಬ ಮಂತ್ರಿಯೂ ಒಂದು ಟ್ವೀಟ್​ಗೂ ಉತ್ತರಿಸುತ್ತಾರೆ. ಮೋದಿ ಬರುವ ಮುನ್ನ ಮೆಡಿಕಲ್ ಉಖಿಖ?ಯಾ ನಡೆಯುತ್ತಿತ್ತು. ಆ ಜಾಗದಲ್ಲಿ ಕೈಗೆಟಕುವ ಜನರಿಕ್ ಅಂಗಡಿಗಳು ಬಂದಿವೆ. ಹವಾನಿಯಂತ್ರಿತ ಟ್ರೇನುಗಳಲ್ಲಿ ಹೋಗುವುದನ್ನೇ ಸಿರಿವಂತಿಕೆ ಎಂದು ಭಾವಿಸುತ್ತಿದ್ದ ಮಧ್ಯಮವರ್ಗದ ಜನ ‘ಉಡಾನ್’ ಯೋಜನೆಯಿಂದಾಗಿ ವಿಮಾನದಲ್ಲಿ ಸಲೀಸಾಗಿ ಪ್ರಯಾಣಿಸುತ್ತಿದ್ದಾರೆ. ‘

ಇವೆಲ್ಲವೂ ಜನಪ್ರಿಯ ಘೊಷಣೆಗಳಲ್ಲ. ರಾಷ್ಟ್ರದ ಅಭಿವೃದಿಟಛಿಗೆ ಬೇಕಾಗಿರುವಂತಹ ಪಥದರ್ಶಕಗಳು. ಉಳಿದವರೆಲ್ಲ ಘೊಷಣೆಗಳನ್ನು ಮಾಡಿ ವೋಟು ಪಡೆದುಕೊಂಡರೆ, ಮೋದಿ ವೋಟು ಪಡೆದ ನಂತರ ಅವಡುಗಚ್ಚಿ ಕೆಲಸ ಮಾಡಿದರು. ಹೀಗಾಗಿಯೇ ಮೋದಿಯವರ ಮುಖದಲ್ಲಿ ಮಂದಹಾಸ ಮಾಯವಾಯ್ತೆಂದೆನಿಸಿದೊಡನೆ ಅನೇಕರಿಗೆ ಸಂಕಟವಾದಂತೆನಿಸುತ್ತದೆ. ಅವರನ್ನು ಗೆಲ್ಲಿಸಿಕೊಳ್ಳಲೇಬೇಕೆಂಬ ತುಡಿತಕ್ಕೆ ಒಳಗಾಗುತ್ತಾರೆ. ಅದಾಗಲೇ ಅನೇಕ ತಾಯಂದಿರು ಮನೆಯಲ್ಲಿ ಉಪವಾಸ ವ್ರತವನ್ನು ಆರಂಭಿಸಿಯಾಗಿದೆ. ಅನೇಕ ಕಡೆಯಲ್ಲಿ ಹೋಮಗಳು ಆರಂಭವಾಗಿವೆ. ಅನೇಕ ಸಂತರು ಜಪ-ತಪಾನುಷ್ಠಾನಕ್ಕೆ ತೊಡಗಿಬಿಟ್ಟಿದ್ದಾರೆ. ಓಹ್! ಇಂತಹ ನಾಯಕ ಬಹುಶಃ ಹಿಂದೆಂದೂ ರಾಷ್ಟ್ರಕ್ಕೆ ದಕ್ಕಿರಲಿಲ್ಲವೆನಿಸುತ್ತದೆ. ಮತ್ತೊಮ್ಮೆ ಮೋದಿ ಜಯಭೇರಿ ಬಾರಿಸಲಿ. ಮೂರು ಚುನಾವಣೆಗಳ ಸೋಲಿನ ಚರ್ಚೆ ಸಮರ್ಥಕರಲ್ಲಿ ಆತಂಕವನ್ನು ಹೆಚ್ಚಿಸಿ ಅದನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲಿ.

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

- Advertisement -

Stay connected

278,592FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...