ಅಸಹಿಷ್ಣುತೆ ಎನ್ನುವುದು ಕಾಂಗ್ರೆಸ್ಸಿಗೆ ರಕ್ತಗತ!

Latest News

ಶಾಸಕ ತನ್ವೀರ್​ ಸೇಠ್ ಆರೋಗ್ಯದಲ್ಲಿ ಚೇತರಿಕೆ; ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಏರ್​ಲಿಫ್ಟ್​ ಮಾಡಲು ಮುಖ್ಯಮಂತ್ರಿ ಸೂಚನೆ

ಮೈಸೂರು: ನಿನ್ನೆ ಔತಣಕೂಟದಲ್ಲಿ ಪಾಲ್ಗೊಂಡಿದ್ದಾಗ ತೀವ್ರವಾಗಿ ಹಲ್ಲೆಗೊಳಗಾಗಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್ ಸೇಠ್​ ಇಂದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು...

ಉಚ್ಚಾಟನೆ ಸ್ವಾಗತಿಸಿದ ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ

ಬೆಂಗಳೂರು: ಬಿಜೆಪಿಯಿಂದ ತಮ್ಮನ್ನು ಉಚ್ಚಾಟಿಸಿರುವ ಕ್ರಮವನ್ನು ಹೊಸಕೋಟೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಸ್ವಾಗತಿಸಿದ್ದಾರೆ. ಹೊಸಕೋಟೆ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್...

ವಿವೇಕರ ಪುತ್ಥಳಿಗೆ ಅವಮಾನಕ್ಕೆ ಖಂಡನೆ

ಎಬಿವಿಪಿಯಿಂದ ಪ್ರತಿಭಟನೆ, ಉಪತಹಸೀಲ್ದಾರ್‌ಗೆ ಮನವಿ ಗಂಗಾವತಿ: ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿನ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ಆಕ್ಷೇಪಾರ್ಹ ಪದಗಳನ್ನು ಬರೆದ ಪ್ರಕರಣ ಖಂಡಿಸಿ ಅಖಿಲ...

ಭಾರತ ಸಂವಿಧಾನ ಎಲ್ಲಕಿಂತ ಶ್ರೇಷ್ಠ

ಡಿಎಸ್‌ಎಸ್ ರಾಜ್ಯ ಪ್ರ, ಸಂಚಾಲಕ ಮಾವಳ್ಳಿ ಶಂಕರ್ ಬಣ್ಣನೆ | ಸರ್ವಜನರ ಸಂವಿಧಾನ ಸಮಾವೇಶ ಕಾರ್ಯಕ್ರಮಯಲಬುರ್ಗಾ: ವಿಶ್ವದ ಹಲವು ರಾಷ್ಟ್ರಗಳ ಸಂವಿಧಾನಕ್ಕಿಂತ ಡಾ.ಬಿ.ಆರ್.ಅಂಬೇಡ್ಕರ್...

ವಿಜೃಂಭಣೆಯ ಅಡ್ಡಪಲ್ಲಕ್ಕಿ ಉತ್ಸವ

ಹನುಮಸಾಗರ: ಪಟ್ಟಣದ ಶ್ರೀ ಅನ್ನದಾನೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಅನ್ನದಾನ ಶಿವಯೋಗಿಗಳ ಅಡ್ಡಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಸುಪ್ರಭಾತ, ಪಂಚಾಮೃತ...

| ಚಕ್ರವರ್ತಿ ಸೂಲಿಬೆಲೆ

ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಕಾಂಗ್ರೆಸ್ಸಿನ ಇತಿಹಾಸದಲ್ಲಿ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತಮಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಅವರನ್ನು ಕೆಲಸದಿಂದ ಕಿತ್ತುಹಾಕಿದವರು ಇಂದಿರಾ.

ರಾಹುಲ್ ಗಾಂಧಿ ದುಬೈಗೆ ಹೋಗಿ ‘ಭಾರತ ಅಸಹಿಷ್ಣು ರಾಷ್ಟ್ರವಾಗಿದೆ’ ಎಂದು ಭಾಷಣ ಮಾಡಿದ್ದಾರೆ. ಇದು ಪಕ್ವ ರಾಜಕಾರಣಿಯ ಲಕ್ಷಣವಲ್ಲ, ಎಳಸುತನದ ಸ್ಪಷ್ಟ ಚಿತ್ರಣ. ಆಂತರಿಕವಾಗಿ ಎಷ್ಟೇ ಕಾದಾಟಗಳಿರಲಿ ಪಕ್ಷ-ಪಕ್ಷಗಳು ಜುಟ್ಟು ಹಿಡಿದುಕೊಂಡು ಬಡಿದಾಡಲಿ, ಆದರೆ ಹೊರನಾಡಿನಲ್ಲಿ ನಿಂತಾಗ ಮಾತ್ರ ರಾಷ್ಟ್ರವನ್ನು ಎಂದಿಗೂ ಬಿಟ್ಟುಕೊಡಬಾರದು ಮತ್ತು ತನ್ನ ರಾಷ್ಟ್ರದ ನಾಯಕನನ್ನು ಹೊರಗಿನ ರಾಷ್ಟ್ರಗಳ ನಾಯಕರು ಕೆಟ್ಟದಾಗಿ ಚಿತ್ರಿಸಿದಾಗ ಅದನ್ನು ಆನಂದಿಸಲೂಬಾರದು. ಈ ವಿಚಾರದಲ್ಲಿ ನರೇಂದ್ರ ಮೋದಿ ನಿಜಕ್ಕೂ ಆದರ್ಶಪ್ರಾಯರೇ. ಕಳೆದ ಚುನಾವಣೆಗೂ ಮುನ್ನ ನವಾಜ್ ಷರೀಫ್ ಅವರು, ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್​ರನ್ನು ‘ಹಳ್ಳಿ ಹೆಂಗಸು’ ಎಂದು ಭಾರತದ ಪತ್ರಕರ್ತೆ ಬರ್ಖಾದತ್​ರ ಮುಂದೆ ಜರಿದಿದ್ದರು. ಅದನ್ನು ನರೇಂದ್ರ ಮೋದಿ ಆನಂದಿಸಬಹುದಿತ್ತು. ಸ್ವತಃ ಬರ್ಖಾದತ್ ಅದನ್ನು ಬಾಯಿ ಚಪ್ಪರಿಸಿಕೊಂಡು ಭಾರತದ ಪತ್ರಕರ್ತರ ಮುಂದೆ ಹಂಚಿಕೊಂಡಿದ್ದರು. ಚುನಾವಣಾ ರ್ಯಾಲಿಯಲ್ಲಿ ನರೇಂದ್ರ ಮೋದಿ ಪಾಕಿಸ್ತಾನದ ಅಧ್ಯಕ್ಷರಿಗೆ ಸರಿಯಾದ ಛೀಮಾರಿ ಹಾಕಿ, ತಮ್ಮ ದೇಶದ ಪ್ರಧಾನಿಯನ್ನು ಹೀಗೆ ಅಗೌರವದಿಂದ ನೋಡುವುದನ್ನು ತಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು. ಇಂತಹ ವಿಶಾಲವಾದ ಮನಸ್ಥಿತಿ ಪರಿವಾರದ ಅಹಂಕಾರವನ್ನುಂಡು ಬೆಳೆದ ರಾಹುಲ್​ರಿಗೆ ಇರುವುದು ಸಾಧ್ಯವೇ ಇಲ್ಲ. ಹೀಗಾಗಿ ಅವರಿಗೆ ಇಡಿಯ ಭಾರತ ಅಸಹಿಷ್ಣುವಾಗಿದೆ ಎಂದೆನಿಸುತ್ತದೆ. ಅವರು ದುಬೈನಲ್ಲಿ ಭಾರತವನ್ನು ಹೀಗೆ ಹೀಗಳೆಯುತ್ತಿರುವಾಗಲೇ ಇಲ್ಲಿ ಅವರದ್ದೇ ಪಕ್ಷದ ಕಾರ್ಯಕರ್ತರು ಸಂಜಯ್ ಬಾರು ಕೃತಿ ಆಧಾರಿತ ‘ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಲನಚಿತ್ರದ ಪ್ರದರ್ಶನವನ್ನು ವಿರೋಧಿಸಿ ಥಿಯೇಟರ್​ನ ಪರದೆಗಳನ್ನೇ ಹರಿದು ಬಿಸಾಡಿದರು.

ಹಾಗೆ ನೋಡಿದರೆ, ನಿಜವಾದ ಅಸಹಿಷ್ಣುತೆ ಕಾಂಗ್ರೆಸ್ಸಿನದ್ದು. ಪತ್ರಕರ್ತ ಆನಂದ್ ರಂಗನಾಥನ್ ಈ ಪ್ರಕರಣದ ನಂತರ ಟ್ವೀಟ್​ಗಳ ಸರಮಾಲೆಯನ್ನೇ ಪ್ರಕಟಿಸಿ ಕಾಂಗ್ರೆಸ್ಸಿನ ಈ ಮನೋಭಾವನೆಯನ್ನು ಬಯಲಿಗೆಳೆದಿದ್ದಾರೆ. 2010ರ ವೇಳೆಗೆ ಅಶ್ವಿನ್ ಕುಮಾರರ ‘ಇನ್ಶಾಲ್ಲಾಹ್, ಫುಟ್​ಬಾಲ್’ ಸಿನಿಮಾವನ್ನು ಕಾರಣವಿಲ್ಲದೆ ಬ್ಯಾನ್ ಮಾಡಿಸಿದ್ದು ಕಾಂಗ್ರೆಸ್ಸು. ಈ ನಿಷೇಧವನ್ನು ಹಿಂತೆಗೆದುಕೊಂಡ ನಂತರ ಆ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬಂದಿತು. ಶ್ಯಾಂ ಬೆನಗಲ್​ರ ‘ನಿಶಾಂತ್’ ಎಂಬ ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹೆಸರಿಸಲ್ಪಟ್ಟ ನಂತರವೂ ಕಾಂಗ್ರೆಸ್ಸಿನ ಅವಕೃಪೆಗೆ ಒಳಗಾಗಿ ನಿಷೇಧಿಸಲ್ಪಟ್ಟಿತಂತೆ. ಸ್ವತಃ ನಿರ್ದೇಶಕ ಬೆನಗಲ್ ಈ ಚಿತ್ರ ನೋಡುವಂತೆ ಇಂದಿರಾ ಗಾಂಧಿಯವರ ಮನವೊಲಿಸಿದ ನಂತರವೇ ನಿಷೇಧ ತೆರವುಗೊಳಿಸಲ್ಪಟ್ಟಿದ್ದಂತೆ. ತೀರಾ ಇತ್ತೀಚೆಗೆ ಮಧ್ಯಪ್ರದೇಶದ ಕಾಂಗ್ರೆಸ್ ಕಮಿಟಿ, ಅಲ್ಲಿನ ಬಿಜೆಪಿಯ ವಕ್ತಾರರು ‘ತ್ರೀ ಈಡಿಯಟ್ಸ್’ ಚಿತ್ರದ ‘ಆಲ್ ಈಸ್ ವೆಲ್’ ಎನ್ನುವ ಹಾಡನ್ನು ‘ಪಪ್ಪು ಆಲ್ ಈಸ್ ವೆಲ್’ ಎಂದು ತಿರುಚಿ ವಿಡಿಯೋ ಮಾಡಿ ರಾಹುಲ್​ರನ್ನು ಅವಮಾನಿಸಿದ್ದಾರೆಂದು ಪೊಲೀಸ್ ಕಂಪ್ಲೆಂಟ್ ಕೊಟ್ಟಿತ್ತು. ಭೋಪಾಲಿನ ಸೈಬರ್ ಸೆಲ್​ನಲ್ಲಿ ಸೆಕ್ಷನ್ 66ರ ಅಡಿಯಲ್ಲಿ ಬಿಜೆಪಿ ವಕ್ತಾರರನ್ನು ಬಂಧಿಸಬೇಕೆಂದು ರಂಪಾಟ ಮಾಡಿತು. ಇವರ ಅಟಾಟೋಪ ಹೊಸತಾಗಿರಲಿಲ್ಲ, ನೆಹರು ಕಾಲದಿಂದಲೂ ನಡೆದುಕೊಂಡು ಬಂದಿದೆ. ಅವರ ಆಪ್ತವಲಯದ ಮಥಾಯೀಸ್ ಬರೆದಿರುವ ‘ನೆಹರು ಯುಗದ ನೆನಪುಗಳು’ ಕೃತಿಯನ್ನು ಒಪ್ಪುವುದಾದರೆ, ಇಂದಿರಾ ಸಿರಿವಂತ ವ್ಯಾಪಾರಿಯೊಬ್ಬನಿಂದ ದುಬಾರಿ ಸೀರೆಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ವರದಿ ಮಾಡಿದ್ದ ‘ಬ್ಲಿಟ್ಸ್’ ಪತ್ರಿಕೆ ಕ್ಷಮೆ ಕೇಳಲೇಬೇಕೆಂದು ಆಗ್ರಹಿಸಿದ್ದರಂತೆ. ಮುಂದೊಮ್ಮೆ ‘ಇನ್ಸಾಫ್’ ಎಂಬ ಹೆಸರಿನಿಂದ ಬರೆಯುತ್ತಿದ್ದ ಪತ್ರಕರ್ತನೊಬ್ಬ ನೆಹರು ಬಗ್ಗೆ ಟೀಕಿಸುತ್ತಿದ್ದಾನೆ ಎಂದು ಗೊತ್ತಾದೊಡನೆ ‘ಹಿಂದೂಸ್ತಾನ್ ಟೈಮ್್ಸ’ ಪತ್ರಿಕಾ ಕಚೇರಿಗೆ ಮಾತನಾಡಿದ ನೆಹರು ಕೂಗಾಡಿ ಸಂಪಾದಕರನ್ನೇ ಬದಲಾಯಿಸಿದ ಘಟನೆಗಳು ಅದೇ ಕೃತಿಯಲ್ಲಿ ಉಲ್ಲೇಖವಾಗಿವೆ. ನೆಹರು ಅವರನ್ನು ಚೀನಾ ಯುದ್ಧದ ಸಂದರ್ಭದಲ್ಲಿ ಕಠೋರವಾಗಿ ಟೀಕಿಸಿದ್ದಲ್ಲದೆ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದ ನರೇಂದ್ರದತ್ತ, ರೂಪಾ ನಾರಾಯಣ್ ಮತ್ತು ಧರ್ಮಪಾಲ್​ರನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು.

ಪರಂಪರೆ ಮುಂದುವರಿಯಲೇಬೇಕಲ್ಲ. ‘ರಾಜೀವ್ ಗಾಂಧಿ ಇನ್ಸ್​ಟಿಟ್ಯೂಟ್ ಫಾರ್ ಕಾಂಟೆಂಪರರಿ ರಿಸರ್ಚ್’ ಸಂಸ್ಥೆಯ ಮುಖ್ಯಸ್ಥರು ದೇಶದ ಸರ್ವೆ ನಡೆಸಿ ಗುಜರಾತಿಗೆ ನಂಬರ್ ಒನ್ ಪಟ್ಟ ಕೊಟ್ಟಿದ್ದರಿಂದಾಗಿ ಕುಪಿತ ಸೋನಿಯಾ ಆ ಮುಖ್ಯಸ್ಥರನ್ನೇ ಜಾಗ ಖಾಲಿ ಮಾಡಿಸಿದ್ದರು. ಅದಕ್ಕೂ ಮುನ್ನ ಈ ಸಂಸ್ಥೆಯ ಕಾರ್ಯಕ್ರಮವೊಂದಕ್ಕೆ ಆರೆಸ್ಸೆಸ್ ವಿಚಾರಧಾರೆಯ ಶೇಷಾದ್ರಿಚಾರಿಯನ್ನು ಕರೆಸಿದ್ದಾರೆಂದು ಗೊತ್ತಾದೊಡನೆ ಸೋನಿಯಾ ಕಚೇರಿಯಿಂದ ಮುಖ್ಯಸ್ಥರಿಗೆ ಕರೆ ಹೋಗಿತ್ತಂತೆ- ಆಹ್ವಾನ ಪತ್ರಿಕೆಯಿಂದ ಚಾರಿಯವರ ಹೆಸರನ್ನು ಬಿಟ್ಟುಬಿಡಬೇಕು ಅಂತ. ಆತ ನಿರಾಕರಿಸಿದಾಗ ಚಾರಿಯವರ ಭಾಷಣಕ್ಕೂ ಮುನ್ನ ಅವರು ಮಾತನಾಡಲಿರುವ ವಿಚಾರದ ಕುರಿತಂತೆ ಹಸ್ತಲಿಖಿತ ಪ್ರತಿಯನ್ನು ತಮಗೆ ತಲುಪಿಸಬೇಕೆಂದು ಸೋನಿಯಾ ಆಗ್ರಹಿಸಿದ್ದರು. ಊರಿನೆಲ್ಲ ಇತರರಿಗೆ ಬುದ್ಧಿವಾದ ಹೇಳುವ ರಾಹುಲ್ ಈ ದೇಶದ ಕಾಂಗ್ರೆಸ್ ನಂಬುವ ವಿಚಾರಧಾರೆಗಿಂತಲೂ ಭಿನ್ನವಾದ ವೈಚಾರಿಕ ಎಳೆಯನ್ನು ಹೊಂದಿರುವ ದೊಡ್ಡದೊಂದು ಬಲಪಂಥೀಯ ಗುಂಪನ್ನೇ ತಾವು ನಿರಾಕರಿಸಿದ್ದೇಕೆ ಎಂಬುದಕ್ಕೆ ಮೊದಲು ಉತ್ತರ ಕೊಡಲಿ. ಅಥವಾ ಅಧಿಕಾರದಲ್ಲಿದ್ದಾಗ ತಾವು ಮಾಡಿದ್ದೆಲ್ಲವೂ ಸರಿ ಎನ್ನುವ ದುರಹಂಕಾರದ ಭಾವನೆಯೋ ಅದು.

ಕಾಂಗ್ರೆಸ್ಸಿನ ಈ ವರ್ತನೆ ಇಷ್ಟಕ್ಕೇ ನಿಂತಿದ್ದಲ್ಲ. ರಿಲಯನ್ಸ್ ಮತ್ತು ಸರ್ಕಾರದ ನಡುವಿನ ನೈತಿಕವಲ್ಲದ ಸಂಬಂಧಗಳ ಕುರಿತಂತೆ ‘ಇಂಡಿಯನ್ ಎಕ್ಸ್​ಪ್ರೆಸ್’ ಪತ್ರಿಕೆ ಬರೆದಿತ್ತು ಎಂಬ ಕಾರಣಕ್ಕೆ ಅದರ ಮಾಲೀಕ ಗೋಯೆಂಕಾ ಅವರ ಮನೆಯ ಮೇಲೆ ದಾಳಿ ನಡೆಸಿತ್ತು ಸರ್ಕಾರ. ಒಂದಿನಿತೂ ತಲೆ ಕೆಡಿಸಿಕೊಳ್ಳದ ಪತ್ರಿಕೆ, ದಮನಕಾರಿ ನೀತಿಗಳಿಗೆಲ್ಲ ಬಗ್ಗುವ ಜಾಯಮಾನ ತಮ್ಮದಲ್ಲ ಎಂದೇ ಎಚ್ಚರಿಕೆಕೊಟ್ಟಿತ್ತು. ಬೋಲಾನಾಥ್ ಪಾಂಡೆ ಮತ್ತು ದೇವೇಂದ್ರ ಪಾಂಡೆ ಎಂಬ ಇಬ್ಬರು ತರುಣರು ಪಟನಾದತ್ತ ಹೊರಟಿದ್ದ ವಿಮಾನವನ್ನು ಅಪಹರಿಸಿ ಇಂದಿರಾ ಗಾಂಧಿಯವರ ಮೇಲಿದ್ದ ಎಲ್ಲ ಕೇಸುಗಳನ್ನು ಹಿಂಪಡೆಯಬೇಕೆಂಬ ಬೇಡಿಕೆ ಮಂಡಿಸಿದ್ದರು. ಅವರದ್ದೇನೋ ಹುಚ್ಚು ಎನ್ನೋಣ. ಆದರೆ ದೇಶದ ಅತ್ಯಂತ ಹಳೆಯ ಕಾಂಗ್ರೆಸ್ ಪಾರ್ಟಿಗೇನು ಮಂಕು ಕವಿದಿತ್ತೇ. 1980ರಲ್ಲಿ ಈ ಇಬ್ಬರೂ ಪಾಂಡೆಗಳಿಗೆ ಉತ್ತರಪ್ರದೇಶದಲ್ಲಿ ಟಿಕೆಟ್ ಕೊಟ್ಟು ಶಾಸಕರನ್ನಾಗಿ ಮಾಡಿಸಿಕೊಂಡಿತ್ತು. ‘ನ್ಯಾಷನಲ್ ಹೆರಾಲ್ಡ್’ ಕೇಸಿನಲ್ಲಿ ಕಾಂಗ್ರೆಸ್ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರು ಸಾವಿರಗಟ್ಟಲೆ ಪ್ರಿಂಟ್​ಔಟ್​ಗಳನ್ನು ನ್ಯಾಯಾಧೀಶರ ಮುಂದಿರಿಸಿ ಸುಬ್ರಮಣಿಯನ್ ಸ್ವಾಮಿಯವರು ‘ನ್ಯಾಷನಲ್ ಹೆರಾಲ್ಡ್’ನ ಕುರಿತಂತೆ ಟ್ವೀಟ್ ಮಾಡದಿರುವಂತೆ ಆದೇಶಿಸಬೇಕೆಂದು ಕೇಳಿಕೊಂಡಿದ್ದರು. ಸ್ವಾಮಿಯವರ ಟ್ವೀಟನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ಸಿಗೆ ಈ ದೇಶದೊಳಗಿನ ಸಹಿಷ್ಣುತೆಯ ಕುರಿತಂತೆ ಮಾತನಾಡುವ ಅಧಿಕಾರವಾದರೂ ಇದೆಯೇ? ಸ್ವತಃ ರಾಹುಲ್ ಈ ಹೊತ್ತಿನಲ್ಲಿ ಯಾವ ಪತ್ರಿಕೆಗಳೂ ನ್ಯಾಷನಲ್ ಹೆರಾಲ್ಡ್​ನ ಕುರಿತಂತೆ ವರದಿ ಪ್ರಕಟಿಸದಿರುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇದೇ ಪ್ರಕರಣದ ಮೇಲೆ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಹೊರಗಿದ್ದ ರಾಹುಲ್ ಈ ರೀತಿ ಕೇಳಿದ್ದು ಹಾಸ್ಯಾಸ್ಪದವೇ ಆಗಿತ್ತು. ಸತ್ಯವನ್ನು ಮರೆಮಾಚುವ, ಜಗತ್ತಿನಿಂದ ಮುಚ್ಚಿಡುವ ಮತ್ತು ಸುಳ್ಳನ್ನೇ ಪದೇಪದೆ ಹೇಳಿ ಸತ್ಯವೆಂದು ನಂಬಿಸುವ ಕಾಂಗ್ರೆಸ್ಸಿನ ಚಾಳಿ ಹೊಸತಲ್ಲ. ಅದು ಪರಂಪರಾನುಗತವಾಗಿ ರಾಹುಲ್​ಗೆ ಬಂದಿರುವಂಥದ್ದು.

ಕಾಂಗ್ರೆಸ್ಸಿನ ಇತಿಹಾಸದಲ್ಲಿ ಪುಸ್ತಕಗಳನ್ನು ನಿಷೇಧಿಸುವುದು, ಸಿನಿಮಾಗಳನ್ನು ತಡೆಯುವುದು, ತಮಗಾಗದ ವ್ಯಕ್ತಿಗಳನ್ನು ಜೈಲಿಗೆ ತಳ್ಳಿ ಅಗತ್ಯಬಿದ್ದರೆ ಅವರ ಸದ್ದನ್ನೇ ಅಡಗಿಸಿಬಿಡುವುದು ಯಾವುದೂ ಇಲ್ಲವೆನ್ನುವಂತಿಲ್ಲ. ಸುಬ್ರಮಣಿಯನ್ ಸ್ವಾಮಿಯವರ ಪುಸ್ತಕಗಳು ತಮಗೆ ಹಿಡಿಸುವುದಿಲ್ಲವೆಂಬ ಕಾರಣಕ್ಕೆ ಅವರನ್ನು ಕೆಲಸದಿಂದ ಕಿತ್ತುಹಾಕಿದವರು ಇಂದಿರಾ. 22 ವರ್ಷಗಳ ಕಾಲ ಕೋರ್ಟಿನಲ್ಲಿ ಬಡಿದಾಡಿ ಕೊನೆಗೂ ನ್ಯಾಯ ಪಡೆದುಕೊಂಡಿದ್ದರು ಸ್ವಾಮಿ. ರುತ್ವಿಕ್ ಘಾಟಕರ ಲೆನಿನ್ ಮೇಲಿನ ಸಾಕ್ಷ್ಯಚಿತ್ರ ತಾನು ನೋಡುವವರೆಗೂ ಬಿಡುಗಡೆ ಮಾಡಬಾರದೆಂದು ಇಂದಿರಾ ಆದೇಶಿಸಿದ್ದರು. ಚೀನಾದ ತಿನ್ನಾಮ್ಮೆನ್ ಚೌಕದಲ್ಲಿ ಸಾವಿರಾರು ಜನರ ಹತ್ಯೆಯಾದ ದೃಶ್ಯಗಳನ್ನು ತೋರಿಸದಿರುವಂತೆ ಸರ್ಕಾರಿ ಮಾಧ್ಯಮಗಳಿಗೆ ತಡೆಹಿಡಿದಿದ್ದು ಕಾಂಗ್ರೆಸ್ ಸರ್ಕಾರವೇ. ದೇವದೂಷಣೆಯ ಕಾನೂನನ್ನು ಜಾರಿಗೆ ತಂದು ಯಾವುದಾದರೂ ಮತದ ಕುರಿತಂತೆ ಪ್ರಶ್ನೆ ಕೇಳುವುದನ್ನು ತಪ್ಪೆಂದು ಹೇಳುವ, ಆ ಮೂಲಕ ಜೀವಾವಧಿ ಶಿಕ್ಷೆಯನ್ನು ಅದಕ್ಕೆ ಕೊಡುವ ಭಯಾನಕವಾದ ಕಾನೂನನ್ನು ಜಾರಿಗೆ ತಂದದ್ದೇ ಕಾಂಗ್ರೆಸ್ಸು. ಇದರ ಲಾಭವನ್ನು ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಪಡೆದುಕೊಂಡರೆಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ರೋಮ್ಾಜ್ಯ ಮತ್ತು ರಾಮರಾಜ್ಯ ಎಂಬ ಲೇಖನವನ್ನು ಬರೆದದ್ದಕ್ಕೆ ಪತ್ರಕರ್ತ ಕಂಚನ್ ಗುಪ್ತ ಅವರನ್ನು ಬೆದರಿಸಿದ್ದು ಸೋನಿಯಾರ ಆಪ್ತ ಕಾರ್ಯದರ್ಶಿ ವಿನ್ಸೆಂಟ್ ಜಾರ್ಜ್.

ಕಾಂಗ್ರೆಸ್ಸಿನ ಈ ರೋಗ ಪರಿವಾರದ ಜನರಿಗೆ ಮಾತ್ರ ಎಂದುಕೊಳ್ಳಬೇಡಿ. ಅದು ಪಕ್ಷಕ್ಕೆ ರಕ್ತಗತವಾಗಿರುವಂಥದ್ದು. ಮನಮೋಹನ್ ಸಿಂಗರು ಪ್ರಧಾನಿಯಾಗಿದ್ದಾಗ ಎನ್​ಡಿಟಿವಿಯಲ್ಲಿ ಯುಪಿಎ ಸರ್ಕಾರದ ಕುರಿತಂತೆ ಟೀಕಾತ್ಮಕ ವರದಿ ಬರುವುದನ್ನು ಕಂಡು ಪ್ರಧಾನ ಸಂಪಾದಕ ಪ್ರಣಯ್ ರಾಯ್ಗೆ ಚೆನ್ನಾಗಿ ಝಾಡಿಸಿದ್ದರು. ಕೊನೆಗೆ ಇಡಿಯ ವರದಿಯನ್ನು ಬದಲಾಯಿಸಿ ಟೀಕೆಯನ್ನು ಹೃಸ್ವಗೊಳಿಸಿ ಅದನ್ನು ಪ್ರಕಟಪಡಿಸಬೇಕಾಯ್ತು. ಕಾನೂನು ಮಂತ್ರಿ ವೀರಪ್ಪಮೊಯ್ಲಿ ಜೋಸೆಫ್ ಲೆಲಿವೆಲ್ಡ್​ನ ಪುಸ್ತಕವನ್ನು ನಿಷೇಧಿಸುವ ಆತುರದಲ್ಲಿದ್ದಾಗ ಲೇಖಕ ಮತ್ತು ಗಾಂಧೀಜಿಯವರ ಮೊಮ್ಮಗ ಬೇಡಿಕೊಳ್ಳುವ ಪರಿಸ್ಥಿತಿ ಬಂದಿತ್ತು. ಯುಪಿಎಯ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ‘ದ ಡಿಸೆಂಟ್ ಆಫ್ ಏರ್ ಇಂಡಿಯಾ’ ಎಂಬ ಕೃತಿಯಲ್ಲಿ ತನ್ನ ನಿರ್ಧಾರಗಳನ್ನು ಸಾಧಾರವಾಗಿ ಪ್ರಶ್ನಿಸಲಾಗಿದೆ ಎಂಬ ಒಂದೇ ಕಾರಣಕ್ಕೆ ಪ್ರಕಾಶಕರ ಮೂಲಕ ಪುಸ್ತಕವನ್ನು ಹಿಂಪಡೆಯುವಂತೆ ಮಾಡಿಬಿಟ್ಟಿದ್ದರು.

ಕರ್ನಾಟಕದ ಕತೆ ಕೇಳುವುದೇ ಬೇಡ. ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಪ್ರಶ್ನಿಸಲೇಬಾರದೆಂಬ ದುರಹಂಕಾರಕ್ಕೆ ಒಳಗಾಗಿತ್ತು ಸಿದ್ಧರಾಮಯ್ಯ ಸರ್ಕಾರ. ಅದೆಷ್ಟೋ ಬಲಪಂಥೀಯ ಪತ್ರಕರ್ತರು ತಮ್ಮ ದನಿಯನ್ನೇ ಕಳೆದುಕೊಳ್ಳವಂತೆ ಪ್ರಹಾರ ನಡೆಸಿದ್ದರು ಅವರು. ತೀರಾ ಇತ್ತೀಚೆಗೆ ಪತ್ರಕರ್ತ ಸಂತೋಷ್ ತಮ್ಮಯ್ಯ ಟಿಪ್ಪು ಜಯಂತಿಯ ಹೊತ್ತಿನಲ್ಲಿ ಮಾಡಿದ ಭಾಷಣಕ್ಕೆ ಪ್ರತಿಯಾಗಿ ಅರ್ಧರಾತ್ರಿ ಮಾವನ ಮನೆಗೆ ನುಗ್ಗಿ ಅವರನ್ನು ಬಂಧಿಸಿಕೊಂಡು ತರಲಾಗಿತ್ತು. ಚರ್ಚೆಯ ವೇಳೆ ಪತ್ರಕರ್ತರೊಬ್ಬರು ಒಂದಷ್ಟು ಪ್ರಶ್ನೆಗಳನ್ನು ಕೇಳಿದರೆಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ಸಿನ ಮಂತ್ರಿಗಳೇ ಮುಂದೆ ನಿಂತು ಅವರ ಮೇಲೆ ಎಫ್​ಐಆರ್ ದಾಖಲಾಗುವಂತೆ ನೋಡಿಕೊಂಡಿದ್ದರು.

ಇದು ಉದ್ದಕ್ಕೂ ಹರಡಿಕೊಂಡಿರುವ ಒಂದಷ್ಟು ಪ್ರಕರಣಗಳಷ್ಟೇ. ಪ್ರತಿ ರಾಜ್ಯದ ಇತಿಹಾಸಗಳನ್ನು ಕೆದಕಿದಾಗಲೂ ಕಾಂಗ್ರೆಸ್ಸಿನ ಕರ್ಮಕಾಂಡಗಳು ಇನ್ನಷ್ಟು ಬಯಲಿಗೆ ಬರುತ್ತವೆ. ಅವರ ಅಸಹಿಷ್ಣುತೆ ದೃಗ್ಗೋಚರವಾಗುತ್ತದೆ. ಅಧಿಕಾರದಲ್ಲಿರಲಿಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಜನ ಇವರು. ಸಿದ್ಧರಾಮಯ್ಯರ ಕಾಲಕ್ಕೆ ವಿಶ್ವ ಹಿಂದೂ ಪರಿಷತ್​ನ ಮುಖ್ಯಸ್ಥರಾದ ಡಾ.ಪ್ರವೀಣ್ ಭಾಯಿ ತೊಗಾಡಿಯಾ ಅವರ ಭಾಷಣಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿಷೇಧ ಹಾಕಲಾಗಿತ್ತು. ಆದರೆ, ಅದೇ ತೊಗಾಡಿಯಾರನ್ನು ಗುಜರಾತಿನ ಚುನಾವಣೆಯಲ್ಲಿ ರಾಹುಲ್ ಮತಕ್ಕಾಗಿ ಭೇಟಿಮಾಡಲು ಹೋಗಿದ್ದನ್ನು ಯಾರು ವಿರೋಧಿಸಲೇ ಇಲ್ಲ. ಅಂದರೆ ತಮಗೆ ಬೇಕಾದಾಗ ಎಲ್ಲರನ್ನೂ ಉಪಯೋಗಿಸಿಕೊಳ್ಳುವ, ತಮ್ಮ ವಿರೋಧಕ್ಕೆ ನಿಂತವರನ್ನು ನಾಶಮಾಡಿಬಿಡುವ ಚಾಳಿ ಕಾಂಗ್ರೆಸ್ಸಿಗೆ ರಕ್ತಗತ. 12 ವರ್ಷಗಳ ಕಾಲ ನರೇಂದ್ರ ಮೋದಿಯವರ ವಿರುದ್ಧ ಸಿಬಿಐ ಅನ್ನು ಛೂಬಿಟ್ಟು ಅವರನ್ನು ಕೊಲೆಗಡುಕರೆಂದು ಬಿಂಬಿಸಲು ಪ್ರಯತ್ನಿಸಿದ ನಂತರವೂ ಮೋದಿ ಸಿಬಿಐ ಅನ್ನು ಧಿಕ್ಕರಿಸಿರಲಿಲ್ಲ. ಆದರಿಂದು ಪುರಾವೆಗಳ ಸಹಿತ ಒಬ್ಬೊಬ್ಬರನ್ನು ಒಳತಳ್ಳುವ ತಯಾರಿ ನಡೆಸುತ್ತಿದ್ದಂತೆ ಕಾಂಗ್ರೆಸ್ಸು ಸಿಬಿಐನ ವಿರುದ್ಧ ರಂಪಾಟ ನಡೆಸುತ್ತಿದೆ. ಇದು ನಿಜವಾದ ಅಸಹಿಷ್ಣುತೆ. ಇವೆಲ್ಲದರ ಕುರಿತಂತೆ ರಾಹುಲ್ ಮಾತನಾಡಬಲ್ಲವರಾದರೆ ನಿಜಕ್ಕೂ ಚೆನ್ನಾಗಿರುತ್ತಿತ್ತು. ಅದೂ ಸರಿ ಬಿಡಿ. ರಾಹುಲ್​ರಿಂದ ನಾವು ಬಹಳಷ್ಟನ್ನು ನಿರೀಕ್ಷಿಸುವಂತೆಯೂ ಇಲ್ಲ, ಪಾಪ!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

- Advertisement -

Stay connected

278,583FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...