ಹೆದರಬೇಕಿಲ್ಲ, ಬಲಾಢ್ಯ ಕೈಗಳಲ್ಲಿದೆ ಭಾರತ!

Latest News

ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದಿಂದ ಪ್ರತಿಭಟನೆ

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಅಗೌರವ ತೋರಿದೆ ಎಂದು ಆರೋಪಿಸಿ ಚಂದಕವಾಡಿ ಹೋಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ...

ಪಕ್ಷಾಂತರಿಗಳ ವಿರುದ್ಧ ಆಕ್ರೋಶ

ಮೈಸೂರು: ಪಕ್ಷಾಂತರಿಗಳ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ರೈಲ್ವೆ ನಿಲ್ದಾಣದ ಬಳಿ ಭಾನುವಾರ ಪ್ರತಿಭಟನೆ ನಡೆಸಿದರು. ಪಕ್ಷಾಂತರಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು...

ನಗರದಲ್ಲಿ ಪೊರಕೆ ಹಿಡಿದು ಪ್ರತಿಭಟನೆ

Whispers and protests in the city ಚಾಮರಾಜನಗರ: ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ ಎಂದು ಶಿಕ್ಷಣ ಇಲಾಖೆಯು...

ಸುಪ್ರೀಂ ಕೋರ್ಟ್​ ನ್ಯಾಯಾಧೀಶ ಎಸ್​​. ಅಬ್ದುಲ್ ನಜೀರ್ ಅವರಿಗೆ Z ಕೆಟಗರಿ ಭದ್ರತೆ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಪೀಠದಲ್ಲಿದ್ದ ನ್ಯಾಯಾಧೀಶ ಎಸ್​​.ಅಬ್ದುಲ್ ನಜೀರ್​ ಅವರಿಗೆ "Z" ಕೆಟಗರಿ ಭದ್ರತೆ ನೀಡಲು ಕೇಂದ್ರ ಸರ್ಕಾರ...

ಸಂಘಗಳಿಗೆ ಸಾಲ ಪ್ರಮಾಣ ಕಡಿತ

ಶೃಂಗೇರಿ: ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಶೇ.22ರಷ್ಟು ರೈತರು ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದಿಕ್ಕಿನಲ್ಲಿ ಆಲೋಚಿಸಿ...

ಬಹುಶಃ ಹಿಂದೆಂದೂ ಭಾರತದ ಭದ್ರತಾ ಸಲಹೆಗಾರರು ಇಷ್ಟು ವ್ಯಾಪಕ ಚರ್ಚೆಗೆ ಒಳಗಾಗಿರಲಿಲ್ಲ. ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಮಾರಾಟದ ಮಧ್ಯವರ್ತಿ ಮಿಶೆಲ್, ತನ್ನನ್ನು ಭಾರತ ಎಳೆದುಕೊಂಡು ಹೋಗಲು ಸಾಧ್ಯವೇ ಇಲ್ಲ ಎಂಬ ಧಿಮಾಕಿನಿಂದ ಕುಳಿತಿದ್ದ; ಆದರೆ ದೋವಲ್​ರ ಚಾಣಾಕ್ಷ ನಡೆಗೆ ಮುಸಲ್ಮಾನ ರಾಷ್ಟ್ರಗಳೂ ಇಲ್ಲವೆನ್ನಲಾಗದೆ ಮಿಶೆಲ್​ನನ್ನು ಒಪ್ಪಿಸಬೇಕಾಯಿತು.

ದೆಹಲಿ, ಆಗ್ರಾಗಳಲ್ಲಿ ಐಸಿಸ್​ನ ಸ್ಲೀಪರ್ ಸೆಲ್​ಗಳನ್ನು ಗುರುತಿಸಿ ತರುಣರೊಂದಷ್ಟು ಜನರನ್ನು ಒಳಗಿಂದ ಎಳೆದೆಳೆದು ಬಿಸಾಡುತ್ತಿದ್ದಂತೆ ದೇಶದಲ್ಲಿ ಅಲ್ಲೋಲ-ಕಲ್ಲೋಲವೆದ್ದಿದೆ. ನರೇಂದ್ರ ಮೋದಿಯವರಾದಿಯಾಗಿ ರಾಷ್ಟ್ರದ ಪ್ರಮುಖ ನಾಯಕರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಿದ್ಧರಾಗಿದ್ದ ಮಾನವ ಬಾಂಬರ್​ಗಳು ದೇಶದೆಲ್ಲರ ಎದೆ ನಡುಗುವಂತೆ ಮಾಡಿಬಿಟ್ಟಿದ್ದಾರೆ. ಒಂದೆಡೆ ಗೂಢಮಾಹಿತಿಯನ್ನೆಲ್ಲ ಕಲೆಹಾಕಿ ದುಷ್ಟರನ್ನು ಬಂಧಿಸುವ ಪ್ರಯಾಸದಲ್ಲಿ ಯಶಸ್ವಿಯಾದ ಎನ್​ಐಎಯನ್ನು ದೇಶಭಕ್ತರೆಲ್ಲ ಅಭಿನಂದಿಸುತ್ತಿದ್ದರೆ, ಎಂದಿನಂತೆ ದೇಶದ್ರೋಹಿಗಳ ಗುಂಪೊಂದು ತನಿಖಾ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಏನೇ ಆಗಲಿ, ‘ಮುಸಲ್ಮಾನರು ಭಾರತದಲ್ಲಿ ಹೆದರಿಕೊಂಡಿದ್ದಾರೆ’ ಎಂದು ನಾಸಿರುದ್ದೀನ್ ಶಾ ನಾಲ್ಕು ದಿನಗಳ ಹಿಂದೆಯಷ್ಟೇ ಹೇಳಿದ್ದಕ್ಕೂ ಮೀಸೆ ಬಲಿಯದ ತರುಣರು ಭಾರತವನ್ನೇ ಉಡಾಯಿಸಲು ಸಂಚು ರೂಪಿಸುತ್ತಿದ್ದುದಕ್ಕೂ ತಾಳೆಯಾಗಿದೆ ಅಷ್ಟೇ. ಹೆದರಿರುವುದು ಈ ಬಗೆಯ ಮುಸಲ್ಮಾನ ತರುಣರಲ್ಲ; ಬದಲಿಗೆ ಇವರಿಂದ ಇಡಿಯ ದೇಶವೇ ಹೆದರಿ ಕೈ-ಕಾಲು ಬಿಟ್ಟಿದೆ.

ಇಂತಹ ದೊಡ್ಡ ಸಾಹಸದ ಹಿಂದಿನ ಸೂತ್ರಧಾರ ಯಾರು ಗೊತ್ತೇ?! ಅಜಿತ್ ದೋವಲ್! ಪಾಕಿಸ್ತಾನದ ಮಾಧ್ಯಮಗಳಿಂದ ‘ಭಾರತದ ಜೇಮ್ಸ್​ಬಾಂಡ್’ ಎಂದು ಹೊಗಳಿಸಿಕೊಳ್ಳಲ್ಪಡುವ ಅಜಿತ್, ಮೋದಿಯವರ ಅತ್ಯಂತ ಶ್ರೇಷ್ಠ ಆಯ್ಕೆ. ಅಧಿಕಾರ ಪಡೆದಾಕ್ಷಣ ಮೋದಿ ಈ ವಿಚಾರದಲ್ಲಿ ಸ್ಪಷ್ಟತೆಯನ್ನು ತೋರಿದ್ದರು. ಅದಕ್ಕೆ ಕಾರಣವೂ ಇತ್ತು. ದೋವಲ್ ತಮ್ಮ ವ್ಯಕ್ತಿತ್ವ ಮತ್ತು ಕಾರ್ಯಶೈಲಿಯ ಮೂಲಕ ನಾಡಿನ ಗಮನ ಸೆಳೆದಿದ್ದರು. ದೇಶಭಕ್ತಿ ಅವರ ರಕ್ತದೊಳಗೆ ಹರಿದಿದ್ದುದು ವಿಶೇಷವೇನಲ್ಲ. ಏಕೆಂದರೆ ಅವರ ತಂದೆಯೂ ಸೈನ್ಯದಲ್ಲೇ ಇದ್ದವರು. ಅಜ್ಮೇರ್​ನ ಸೈನಿಕ ಶಾಲೆಯಲ್ಲೇ ಅಧ್ಯಯನ ಮುಗಿಸಿದ ದೋವಲ್ ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದ ಪದವಿ ಪಡೆದರು. ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದರೆಂಬುದು ಹೆಗ್ಗಳಿಕೆಯೇ. 1968ರಲ್ಲಿ ಐಪಿಎಸ್ ಮುಗಿಸಿದ ದೋವಲ್ ಕೇರಳ ಕೇಡರ್​ನ ಅಧಿಕಾರಿಯಾಗಿ ಸೇರ್ಪಡೆಗೊಂಡರು. ಬೌದ್ಧಿಕ ಕ್ಷಮತೆಯಿಂದಾಗಿಯೇ ನಾಲ್ಕು ವರ್ಷಗಳಲ್ಲಿ ಇಂಟೆಲಿಜೆನ್ಸ್ ಬ್ಯೂರೋ ಅವರನ್ನು ಕೈಬೀಸಿ ಕರೆಯಿತು. ಅಲ್ಲಿಂದಾಚೆಗೆ ಅನೇಕ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಲ್ಲದೆ ಕ್ಷೇತ್ರಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಈಶಾನ್ಯ ರಾಜ್ಯಗಳಲ್ಲಿ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರಗಳಲ್ಲಿ, ಒಟ್ಟಿನಲ್ಲಿ ಭಾರತಕ್ಕೆ ಸಮಸ್ಯೆ ಎನಿಸಿದ ಜಾಗದಲ್ಲೆಲ್ಲ ದೋವಲ್ ಅಡ್ಡಾಡಿದರು. ಮಿಜೋರಾಂನಲ್ಲಿ ಉಗ್ರರ ಉಪಟಳ ನಿಲ್ಲುವಂತೆ ಮಾಡುವುದರಲ್ಲಿನ, ಸಿಕ್ಕಿಂ ಅನ್ನು ಮರುರೂಪಿಸುವಲ್ಲಿನ ಅವರ ಪ್ರಯತ್ನ ವಿಶೇಷವಾದುದು. ಆರೇಳು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಮುಸಲ್ಮಾನನಂತೆಯೇ ಬದುಕಿ ಆ ದೇಶದ ಒಳ-ಹೊರಗನ್ನು ಅರಿತುಕೊಂಡು ಅವರ ಎಲ್ಲ ಯೋಜನೆಗಳು ತಲೆಕೆಳಗಾಗುವಂತೆ ಮಾಡುವುದರಲ್ಲಿ ದೋವಲ್ ಯಶಸ್ವಿಯಾಗಿದ್ದರು. ಆ ಹೊತ್ತಿನಲ್ಲಿಯೇ ನಮಾಜ್ ಮುಗಿಸಿ ಹೊರಗೆ ಬಂದಿದ್ದ ಅವರನ್ನು ವೃದ್ಧರೊಬ್ಬರು ಗುರುತಿಸಿ ‘ನೀನು ಹಿಂದೂವಲ್ಲವೇ?’ ಎಂದುಬಿಟ್ಟರಂತೆ. ಒಂದು ಕ್ಷಣ ತಡಬಡಾಯಿಸಿದ ದೋವಲ್ ಮುಂದೇನೂ ಮಾತನಾಡದೆ ಸಂಜೆ ಆತನ ಮನೆಗೇ ಹೋಗಿಬಿಟ್ಟರು. ಮುಸಲ್ಮಾನರಲ್ಲಿ ಕಿವಿ ಚುಚ್ಚಿಕೊಳ್ಳುವ ಪದ್ಧತಿ ಇಲ್ಲವೆಂಬುದನ್ನು ಆತ ವಿವರಿಸಿ ತಾನೂ ಹಿಂದೂವೇ ಆಗಿದ್ದೇನೆ ಎಂದು ದಿನನಿತ್ಯ ಪಾರಾಯಣ ಮಾಡುವ ಹನುಮಾನ್ ಚಾಲೀಸಾವನ್ನು ತೋರಿಸಿದ್ದಲ್ಲದೆ ಹನುಮಂತನ ವಿಗ್ರಹವನ್ನು ದೋವಲ್​ರ ಎದುರಿಗೆ ತೆರೆದಿಟ್ಟಿದ್ದರಂತೆ. ಪಾಕಿಸ್ತಾನದಂತಹ ಶತ್ರುರಾಷ್ಟ್ರವೊಂದರಲ್ಲಿ ಇಂಥವೆಲ್ಲ ಘಟನೆಗಳು ಎಂತಹ ಚುರುಕು ಮುಟ್ಟಿಸಬಲ್ಲ ಸಂಗತಿಗಳೆಂಬುದನ್ನು ಆಲೋಚಿಸಿ ನೋಡಿ. ದೋವಲ್ ಕೆಲವು ಕಾಲ ಲಂಡನ್ನಿನ ಭಾರತೀಯ ದೂತಾವಾಸ ಕಚೇರಿಯಲ್ಲಿ ಕೆಲಸ ನಿರ್ವಹಿಸಿದ್ದರು. ಅವರೇ ‘ಮಲ್ಟಿ ಏಜೆನ್ಸಿ ಸೆಂಟರ್’ ಮತ್ತು ‘ಜಾಯಿಂಟ್ ಟಾಸ್ಕ್ ಫೋರ್ಸ್ ಆನ್ ಇಂಟೆಲಿಜೆನ್ಸ್’ ಅನ್ನು ಸ್ಥಾಪಿಸಿ ಅವನ್ನು ಮುನ್ನಡೆಸಿದರು. 2005ರಲ್ಲಿ ಅವರು ನಿವೃತ್ತರಾಗುವಾಗ ದೇಶದ ರಕ್ಷಣೆಯ ವಿಚಾರದಲ್ಲಿ ಅವರ ಮಾತಿಗೆ ವಿಶೇಷವಾದ ಮೌಲ್ಯವಿತ್ತು.

ಸೇವೆಗೆ ಸೇರಿಕೊಂಡ ಆರೇ ವರ್ಷಗಳಲ್ಲಿ ತಮ್ಮ ಕಾರ್ಯಶೈಲಿಯಿಂದ ಎಲ್ಲರ ಮನಸೂರೆಗೊಂಡು ಪ್ರತಿಷ್ಠಿತ ‘ಇಂಡಿಯನ್ ಪೊಲೀಸ್ ಮೆಡಲ್’ ಪಡೆದವರು ದೋವಲ್. ವಾಸ್ತವವಾಗಿ 17 ವರ್ಷಗಳ ಸೇವೆಯ ನಂತರ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ! 1989ರಲ್ಲಿ ದೋವಲ್​ರಿಗೆ ಸೇನಾ ಚಟುವಟಿಕೆಗೆ ಮೀಸಲಾಗಿರುವ ಕೀರ್ತಿಚಕ್ರವನ್ನೂ ಕೊಟ್ಟು ಗೌರವಿಸಲಾಯ್ತು! ನಿವೃತ್ತರಾಗುವ ಒಂದು ವರ್ಷದ ಮುನ್ನ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶಗಳ ಪೊಲೀಸ್ ಮುಖ್ಯಸ್ಥರ ಸಂಘಕ್ಕೆ ದೋವಲ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ನಿವೃತ್ತರಾದ ನಂತರ ತಮ್ಮ ‘ವಿವೇಕಾನಂದ ಇಂಟರ್​ನ್ಯಾಷನಲ್ ಫೌಂಡೇಷನ್’ ಮೂಲಕ ರಾಷ್ಟ್ರೀಯ ಸುರಕ್ಷತೆಯ ವಿಚಾರವಾಗಿ ತರುಣರ ನಡುವೆ ಜಾಗೃತಿ ಮೂಡಿಸುತ್ತ, ಭಾಷಣಗಳನ್ನು ಮಾಡುತ್ತ, ಕಾರ್ಯಾಗಾರಗಳನ್ನು ಆಯೋಜಿಸುತ್ತ ಕಾಲ ತಳ್ಳುತ್ತಿದ್ದರು. ಮೋದಿ ಅಧಿಕಾರಕ್ಕೆ ಬಂದೊಡನೆ ಮಾಡಿದ ಮೊದಲ ಕೆಲಸ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಆಯ್ದುಕೊಂಡಿದ್ದು.

ದೋವಲ್ ಬುದ್ಧಿವಂತರು ಎಂಬುದು ಎಷ್ಟು ನಿಜವೋ, ಇಂಥ ಬುದ್ಧಿವಂತರನ್ನು ಜತೆಗೆ ಸೇರಿಸಿಕೊಂಡು ರಾಷ್ಟ್ರವನ್ನು ಬಲಿಷ್ಠವಾಗಿ ಕಟ್ಟುವ ಸಾಮರ್ಥ್ಯವುಳ್ಳ ಚಾಣಾಕ್ಷರು ಮೋದಿ ಎಂಬುದೂ ಅಷ್ಟೇ ನಿಜ. ಹೀಗಾಗಿಯೇ ಅಜಿತ್ ದೋವಲ್​ರನ್ನು ರಕ್ಷಣೆಗಷ್ಟೇ ಬಳಸಿಕೊಳ್ಳದೆ ಅಂತಾರಾಷ್ಟ್ರೀಯ ಸಂಬಂಧ ಸುಧಾರಣೆಗಳಲ್ಲೆಲ್ಲ ಅವರ ಸಲಹೆಗಳನ್ನು ಪಡೆದುಕೊಳ್ಳುತ್ತ ರಾಷ್ಟ್ರೋನ್ನತಿಗೆ ಭದ್ರವಾದ ಅಡಿಪಾಯ ಹಾಕಲಾರಂಭಿಸಿದರು. ಮೇಲ್ನೋಟಕ್ಕೆ, ಮೋದಿಯವರು ಲೆಕ್ಕಕ್ಕೆ ಮೀರಿದ ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ ಎಂದು ಅನೇಕರು ಭಾವಿಸುತ್ತಾರಾದರೂ ಪ್ರತಿಯೊಂದು ಪ್ರವಾಸವೂ ರಾಷ್ಟ್ರೀಯ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದುದೇ ಎಂಬುದು ಕಾಲಕ್ರಮದಲ್ಲಿ ಅರಿವಿಗೆ ಬಂದಿವೆ. ನಮ್ಮ ಅನೇಕ ನಾಯಕರು ಗಲ್ಪ್ ರಾಷ್ಟ್ರಗಳಿಗೆ ರಜಾ ದಿನಗಳ ಮೋಜಿಗಾಗಿ ಹೋಗುತ್ತಾರೆ. ಆದರೆ ಮೋದಿ-ದೋವಲ್ ಜೋಡಿ ಈ ಎಲ್ಲ ಮುಸ್ಲಿಂ ರಾಷ್ಟ್ರಗಳನ್ನು ಭಾರತದ ಉನ್ನತಿಗೆ ಬಳಸಿಕೊಳ್ಳುವ ಸ್ಪಷ್ಟಯೋಜನೆಯನ್ನು ಆರಂಭದಿಂದಲೂ ರೂಪಿಸಿತ್ತು. ಮೋದಿ ಅಧಿಕಾರಕ್ಕೆ ಬಂದ ಆರಂಭದಲ್ಲೇ ಐಸಿಸ್ 46 ನರ್ಸ್ ಗಳನ್ನು ಮೊಸೂಲ್​ನಲ್ಲಿ ಅಪಹರಿಸಿ ಬಂಧನದಲ್ಲಿಟ್ಟಿದ್ದನ್ನು ನೆನಪಿಸಿಕೊಳ್ಳಿ. ಉಗ್ರಗಾಮಿಗಳ ವಶದಲ್ಲಿದ್ದ ಈ ನಗರಗಳಿಂದ ಭಾರತೀಯರನ್ನು ಬಿಡಿಸಿಕೊಂಡು ಬರುವುದು ಸವಾಲೇ ಆಗಿತ್ತು. ವಿಪಕ್ಷಗಳು ಕೂಡ ಮೋದಿಯ ಮೇಲೆ ಕಿಡಿಕಾರಲಾರಂಭಿಸಿದವು. ಆಗ ದೋವಲ್ ತಾವೇ ಇರಾಕಿಗೆ ಹೋದರು. ಅದೇನಾಯ್ತೋ ದೇವರೇ ಬಲ್ಲ. ಕೆಲವು ಗಂಟೆಗಳಲ್ಲೇ ತನಿಖಾ ಸಂಸ್ಥೆಯ ನಿರ್ದೇಶಕ ಆಸಿಫ್ ಇಬ್ರಾಹಿಂ ಸೌದಿಗೆ ಹೋದರು. ಅದಾದ ಒಂದು ವಾರದೊಳಗೆ ಕೇರಳದ ಎಲ್ಲ ನರ್ಸ್​ಗಳು ಭಾರತಕ್ಕೆ ಬಂದಿಳಿದಾಗಿತ್ತು! ಐಸಿಸ್ ಉಗ್ರಗಾಮಿಗಳ ಜುಟ್ಟು ಸೌದಿ ಅರೇಬಿಯಾದ ದೊರೆಗಳ ಕೈಲಿದೆ ಎಂಬುದನ್ನು ದೋವಲ್ ಸ್ಪಷ್ಟವಾಗಿ ಅರಿತಿದ್ದರು. ಸ್ವಲ್ಪ ಸೌದಿ ದೊರೆಗಳ ಕೈ ತಿರುಗಿಸಿದ್ದಷ್ಟೇ ಇತ್ತ ಐಸಿಸ್ ಉಗ್ರಗಾಮಿಗಳು ಭಾರತೀಯರನ್ನು ಅತ್ಯಂತ ಗೌರವಯುತವಾಗಿ ಕಂಡು ವಿಮಾನ ಹತ್ತಿಸಿ ಬೀಳ್ಕೊಟ್ಟರು. ಈ ನರ್ಸ್​ಗಳು ಮರಳಿ ಬಂದಮೇಲೆ ‘ಉಗ್ರಗಾಮಿಗಳು ದೇವರಂಥವರು. ನಮ್ಮನ್ನು ಬಲು ಚೆನ್ನಾಗಿ ನೋಡಿಕೊಂಡರು’ ಎಂದೆಲ್ಲ ಕತೆ ಹೊಡೆದರಲ್ಲ…. ಹಾಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಅನಿವಾರ್ಯತೆಗೆ ತಳ್ಳಿದ್ದು ದೋವಲ್​ರ ಮಾಸ್ಟರ್ ಪ್ಲಾನೇ ಎನ್ನುವುದನ್ನು ಮರೆತರೆ ಹೇಗೆ? ಹೀಗೆ ವಿದೇಶಕ್ಕೆ ನುಗ್ಗಿ ತಮಗೆ ಬೇಕಾದ ಕೆಲಸ ಮಾಡಿಕೊಳ್ಳುವುದು ದೋವಲ್​ರಿಗೆ ಹೊಸತೇನಲ್ಲ. ದಾವೂದ್​ನ ಮಗಳ ಮದುವೆಯ ಆರತಕ್ಷತೆ ದುಬೈನ ಗ್ರಾ್ಯಂಡ್ ಹಯಾತ್​ನಲ್ಲಿ ನಡೆಯುವಾಗ ಚೋಟಾ ರಾಜನ್​ನ ತಂಡದವರನ್ನು ತಯಾರುಮಾಡಿ ಮುಂಬೈನಿಂದ ಪೊಲೀಸ್ ಪಡೆಯೊಂದನ್ನು ಹೊತ್ತೊಯ್ದ ದೋವಲ್ ಇನ್ನೇನು ದಾವೂದ್​ನನ್ನು ಮುಗಿಸಿಬಿಡುವ ಹಂತದಲ್ಲಿದ್ದರು. ಮುಂಬೈ ಪೊಲೀಸರಲ್ಲೇ ಇದ್ದ ಕೆಲವೊಂದಿಷ್ಟು ಅಯೋಗ್ಯರು ಸುಳಿವು ಬಿಟ್ಟುಕೊಟ್ಟಿದ್ದರಿಂದಾಗಿ ದಾವೂದ್ ಉಳಿದುಬಿಟ್ಟ. ಆದರೆ ಅವನೊಂದಿಗಿನ ಆ ಜಿದ್ದು ದೋವಲ್​ರ ಕಂಗಳಲ್ಲಿ ಇನ್ನೂ ಆರಿಲ್ಲ!

ಶ್ರೀಲಂಕಾದ ಮಹಿಂದಾ ರಾಜಪಕ್ಸ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವಂಥ ಒಂದಷ್ಟು ಕೆಲಸವನ್ನು ಮಾಡುವಾಗ ಸಹಜವಾಗಿಯೇ ದೋವಲ್ ಕೆಂಡವಾಗಿದ್ದರು. ತಾವೇ ರಾಜಪಕ್ಸರನ್ನು ಭೇಟಿಮಾಡುವ ನೆಪದಿಂದ ಶ್ರೀಲಂಕಾಕ್ಕೆ ಹೋಗಿ ನಂತರ ಅವರ ವಿರೋಧಿಯಾಗಿದ್ದ ಸಿರಿಸೇನಾರನ್ನು ಭೇಟಿಯಾಗಿ ಚಂದ್ರಿಕಾ ಕುಮಾರತುಂಗ ಮತ್ತು ರನಿಲ್ ವಿಕ್ರಮಸಿಂಘ ಅವರನ್ನು ಮಾತನಾಡಿಸಿ ಅವರೆಲ್ಲರನ್ನೂ ಒಪ್ಪಿಸಿ ಚುನಾವಣೆಯಲ್ಲಿ ರಾಜಪಕ್ಸ ಭರ್ಜರಿಯಾಗಿ ಸೋಲುವಂತೆ ಮಾಡಿದವರು ದೋವಲ್ ಸಾಹೇಬ್ರೇ. ಭಾರತದ ನೆರೆರಾಷ್ಟ್ರವೊಂದು ಚೀನಾದ ತೆಕ್ಕೆಯಿಂದ ಹೀಗೆ ಭಾರತದತ್ತ ವಾಲುವಲ್ಲಿ ದೋವಲ್​ರ ಈ ಸಾಹಸವನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ.

ನರೇಂದ್ರ ಮೋದಿ ದಿನದಲ್ಲಿ 18 ತಾಸು ಕೆಲಸ ಮಾಡುತ್ತಾರಲ್ಲಾ, ಬಹುಶಃ ದೋವಲ್​ರೂ ಅಷ್ಟೇ ಇರಬೇಕು. ಇಲ್ಲವಾದರೆ ಕಾಂಗ್ರೆಸ್ಸು ಗಬ್ಬೆಬ್ಬಿಸಿ ಹೋಗಿದ್ದ ಅಂತಾರಾಷ್ಟ್ರೀಯ ಸಂಬಂಧವನ್ನು ಮತ್ತೆ ಹಸನುಗೊಳಿಸಿ ಭಾರತದ ಗೂಢಚರ್ಯು ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ನಿಲ್ಲುವಂತೆ ಮಾಡುವುದು ಅಸಾಧ್ಯವೇ ಆಗಿತ್ತು. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್್ಸ ಮ್ಯಾಟೀಸ್ ಮತ್ತು ಅದೇ ಇಲಾಖೆಗೆ ಸಂಬಂಧಪಟ್ಟ ಜಾನ್ ಕೆಲಿ, ಮ್ಯಾಕ್ ಮಾಸ್ಟರ್ ಇವರೆಲ್ಲರನ್ನೂ ಅಜಿತ್ ದೋವಲ್ ಭೇಟಿಯಾಗಿ ತತ್​ಕ್ಷಣದ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರ ಫಲವಾಗಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆಸಲು ಸಾಧ್ಯವಾಗಿಲ್ಲವೆಂಬುದು ದೋವಲ್ ಕುರಿತಂತೆ ಜಾಗತಿಕವಾಗಿ ಚಾಲ್ತಿಯಲ್ಲಿರುವ ಮಾತು. ಮೋದಿ ವಿದೇಶದ ನೆಲದಲ್ಲಿ ಭಾಷಣ ಮಾಡಿ ಕೈಬೀಸಿಯಷ್ಟೇ ಖ್ಯಾತಿಯಾಗುತ್ತಿದ್ದಾರೆಂದು ಭಾವಿಸಿಬಿಡಬೇಡಿ. ತಮ್ಮ ಸಮರ್ಥ ಸೇನಾನಿಗಳ ಮೂಲಕ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಗೌಪ್ಯವಾದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಅನಿವಾರ್ಯವೂ ಆಗುತ್ತಿದ್ದಾರೆ. ಆಯಾ ರಾಷ್ಟ್ರಗಳಲ್ಲಿ ನಡೆಯಬಹುದಾದ ಅನೇಕ ದುರಂತಗಳನ್ನು ಮೋದಿ-ದೋವಲ್ ತಂಡ ತಪ್ಪಿಸಿದೆ ಎಂದು ಹೇಳಲಾಗುತ್ತದೆ. ಇಲ್ಲವಾದಲ್ಲಿ ಯೆಮನ್​ನಲ್ಲಿ ಕಿತ್ತಾಟ ನಡೆಸುತ್ತಿದ್ದ ಎರಡೂ ರಾಷ್ಟ್ರಗಳು ನಾವು ನಮ್ಮವರನ್ನು ಏರ್​ಲಿಫ್ಟ್ ಮಾಡುವಷ್ಟೂ ಹೊತ್ತು ಶಾಂತವಾಗಿರಲು ಹೇಗೆ ಸಾಧ್ಯವಾಯ್ತು?! ಸೌದಿಯಂತಹ ರಾಷ್ಟ್ರಗಳು ಭಾರತದ ಒಳಿತಿಗಾಗಿ ಕೆಲಸಮಾಡುವ ಮಟ್ಟಕ್ಕೆ ಹೇಗೆ ಬಂದವು?! ಅನೇಕ ಉತ್ತರಗಳು ದೋವಲ್​ರ ಕಿಸೆಯಲ್ಲಿವೆ.

ಈ ಆಸಾಮಿಯನ್ನು ಕಡಿಮೆಯವರೆಂದು ಭಾವಿಸಬೇಡಿ. ಅಮೃತಸರದ ಸ್ವರ್ಣಮಂದಿರದಲ್ಲಿ ಖಲಿಸ್ತಾನ್ ಉಗ್ರಗಾಮಿಗಳು ನುಗ್ಗಿ ಕುಳಿತಿದ್ದರಲ್ಲಾ, ಆಗ ದೋವಲ್ ಐಎಸ್​ಐ ಏಜೆಂಟರ ವೇಷದಲ್ಲಿ ಒಳನುಸುಳಿ ಸಂಧಾನ ಮಾಡುವ ನೆಪದಲ್ಲಿ ಮಾತುಕತೆ ನಡೆಸಿ ಅವರ ಸಾಮರ್ಥ್ಯ, ಅವರ ಬಳಿಯಿರುವ ಶಸ್ತ್ರಾಸ್ತ್ರಗಳು ಎಲ್ಲವನ್ನೂ ಕಣ್ಣಂಚಿನಲ್ಲೇ ಲೆಕ್ಕ ಹಾಕಿಕೊಂಡು ಬಂದು ಅವರನ್ನು ಮುಗಿಸಲು ಬೇಕಾದ ತಂತ್ರಗಾರಿಕೆ ಹೂಡಿದ್ದರಂತೆ. ದೋವಲ್ ಈಗ ಭಾರತದಲ್ಲಿ ಐಸಿಸ್​ನತ್ತ ತಮ್ಮ ದೃಷ್ಟಿ ತಿರುಗಿಸಿದ್ದಾರೆ. ಒಮ್ಮೆ ದೋವಲ್ ಅತ್ತ ಕಣ್ಣು ಹಾಯಿಸಿದರೆಂದರೆ ಅವರುಗಳ ಕತೆ ಮುಗಿಯಿತೆಂದೇ ಅರ್ಥ. ಈಗ ದಾಳಿಯಲ್ಲಿ ಸಿಕ್ಕಿಹಾಕಿಕೊಂಡವರು ಇನ್ನೊಂದಷ್ಟು ಗುಟ್ಟು ಬಾಯ್ಬಿಡುತ್ತಾರಲ್ಲ, ಇದು ಹೀಗೇ ಸಾಗಲಾರಂಭಿಸಿದರೆ ಅವರ ಸಂತಾನಗಳೇ ಬಯಲಿಗೆ ಬಂದು ಬೀಳುವ ಕಾಲ ದೂರವಿಲ್ಲ!!

ದೋವಲ್​ರನ್ನು ಸುಮ್ಮಸುಮ್ಮನೆ ಜೇಮ್ಸ್​ಬಾಂಡ್ ಅನ್ನೋದಲ್ಲ. ಬಹುಶಃ ಹಿಂದೆಂದೂ ಭಾರತದ ಭದ್ರತಾ ಸಲಹೆಗಾರರು ಇಷ್ಟು ವ್ಯಾಪಕವಾದ ಚರ್ಚೆಗೆ ಒಳಗಾಗಿರಲಿಲ್ಲ. ಇಂದು ಜಾಗತಿಕ ಮಟ್ಟದಲ್ಲಿ ದೋವಲ್​ರ ಚಾಣಾಕ್ಷತನದ ಕುರಿತಂತೆ ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಮಾರಾಟದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ತನ್ನನ್ನು ಭಾರತ ಎಳೆದುಕೊಂಡು ಹೋಗಲು ಸಾಧ್ಯವೇ ಇಲ್ಲ ಎಂಬ ಧಿಮಾಕಿನಿಂದ ಕುಳಿತಿದ್ದನಲ್ಲ. ಮುಸಲ್ಮಾನ ರಾಷ್ಟ್ರಗಳೂ ದೋವಲ್​ರ ಚಾಣಾಕ್ಷ ನಡೆಗೆ ಇಲ್ಲವೆನ್ನಲಾಗದೆ ಮಿಶೆಲ್​ನನ್ನು ಒಪ್ಪಿಸಿ ಕೈತೊಳೆದುಕೊಂಡಿದ್ದು ಸಾಮಾನ್ಯವಾದ ಸಂಗತಿಯಲ್ಲ. ಇಂಗ್ಲೆಂಡಿನಂತಹ ಇಂಗ್ಲೆಂಡೂ ಮರುಮಾತನಾಡದೆ ಮಲ್ಯನನ್ನು ಭಾರತಕ್ಕೆ ಒಪ್ಪಿಸಲು ತಯಾರಾದುದರ ಹಿಂದೆಯೂ ಸಾಕಷ್ಟು ಪ್ರಯೋಗಗಳಾಗಿವೆ. ಈಗ ಬ್ರಿಟಿಷ್ ಏಜೆನ್ಸಿಯನ್ನು ಬಳಸಿಕೊಂಡೇ ನೀರವ್​ವೋದಿ ಅಡಗಿ ಕುಳಿತಿರುವ ಗುಹೆಯನ್ನು ಹುಡುಕಿ ತೆಗೆಯಲಾಗಿದೆ. ಚುನಾವಣೆಗೆ ಮುನ್ನವೇ ಅವನನ್ನು ಎಳೆದುಕೊಂಡು ಬಂದರೆ ಅಚ್ಚರಿಪಡಬೇಕಿಲ್ಲ. ಹಾಗಂತ ಇದು ಅಜಿತ್ ದೋವಲ್​ರ ಒಬ್ಬರದ್ದೇ ಸಾಹಸವೆಂದು ಭಾವಿಸಬೇಡಿ. ಅವರ ಇಚ್ಛೆಯ ಸೂಕ್ಷ್ಮವನ್ನರಿತು ನಡೆಯುವ ಸಮರ್ಥವಾದ ತಂಡವೊಂದು ಅವರ ಸುತ್ತಲೂ ಇದೆ. ಇಡಿಯ ವಿದೇಶಾಂಗ ಸಚಿವಾಲಯ ಸಮರ್ಥವಾಗಿ ಜತೆಗೂಡಿ ಕೆಲಸ ಮಾಡುತ್ತಿದೆ. ಅತ್ತ ಮಹಾರಾಷ್ಟ್ರದಲ್ಲಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿದೇಶಿ ಮಾಫಿಯಾದ ಎಂಜಲುಕಾಸಿಗೆ ಬಲಿಯಾಗಿದ್ದ ಮಹಾರಾಷ್ಟ್ರದ ಪೊಲೀಸು ಇಲಾಖೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ದೋವಲ್​ರ ಸಾಹಸಕ್ಕೆ ಬೆಂಬಲವಾಗಿ ನಿಂತು ಅದಕ್ಕೆ ಪೂರಕ ವಾಗಿ ದೇಶದ ಒಳಗೂ ಹೊರಗೂ ಕೆಲಸಮಾಡುತ್ತ ರಾಷ್ಟ್ರವನ್ನು ಮರುರಚಿಸಲು ಕಟಿಬದ್ಧರಾಗಿ ನಿಂತುಬಿಟ್ಟಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಒಂದಿಡೀ ತಂಡವಾಗಿ ಭಾರತ ಕೆಲಸ ಮಾಡುತ್ತಿರುವುದು ಈಗಲೇ. ಹೀಗಾಗಿಯೇ ಭಾರತ ದುರ್ಭೆದ್ಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎನ್ನುವುದನ್ನು ಜಗತ್ತು ಅರಿತಿದೆ.

ಸತ್ಯ ಹೇಳಿ. ಭಾರತ ಬಲಿಷ್ಠ ಕೈಗಳಲ್ಲಿದೆ ಎಂದು ಅನಿಸುತ್ತಿಲ್ಲವೇ?!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

- Advertisement -

Stay connected

278,541FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....