ಡಿಕೆಶಿ ಬಂಧನ ಖಂಡಿಸಿ ಇಂದು ರಾಜಭವನ ಚಲೋ: ಈ ರಸ್ತೆಗಳಲ್ಲಿ ಟ್ರಾಫಿಕ್​ ಜಾಮ್​ ಸಾಧ್ಯತೆ

ಬೆಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ವಿಶ್ವ ಒಕ್ಕಲಿಗರ ಒಕ್ಕೂಟ ಇಂದು ರಾಜಭವನ ಚಲೋ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗುವ ಸಾಧ್ಯತೆ ಇದೆ.

ರ‍್ಯಾಲಿ ಬೆಳಗ್ಗೆ 11.30ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಿಂದ ಹೊರಟು ಫ್ರೀಡಂ ಪಾರ್ಕ್ ತಲುಪಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಮತ್ತು ಸಮುದಾಯದ ಸ್ವಾಮೀಜಿಗಳು, ನಾಯಕರು ಪಾಲ್ಗೊಳ್ಳಲಿದ್ದಾರೆ. ಕನಕಪುರ, ರಾಮನಗರ ಸೇರಿದಂತೆ ಹಲವೆಡೆಗಳಿಂದ ಒಕ್ಕಲಿಗರು ಆಗಮಿಸುತ್ತಿದ್ದು, ಪ್ರತಿಭಟನೆಯಲ್ಲಿ ಸುಮಾರು 35 ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ.

ರ‍್ಯಾಲಿ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಿಂದ ಆರಂಭವಾಗಿ ಒಟ್ಟು 5.2 ಕಿ.ಮೀ. ಸಂಚರಿಸಿ ಫ್ರೀಂಡಂ ಪಾರ್ಕ ತಲುಪಲಿದೆ. ಪ್ರತಿಭಟನಾಕಾರರು ನ್ಯಾಷನಲ್ ಕಾಲೇಜು ಮೈದಾನ, ವಾಣಿವಿಲಾಸ ರಸ್ತೆ, ಸಜ್ಜನ್ ರಾವ್ ಸರ್ಕಲ್, ಮಿನರ್ವ ಸರ್ಕಲ್, ಜೆಸಿ ರಸ್ತೆ, ಶಿವಾಜಿ ಜಂಕ್ಷನ್, ಟೌನ್‌ ಹಾಲ್, ಕಾರ್ಪೋರೇಷನ್, ಮೈಸೂರು ಬ್ಯಾಂಕ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ತಲುಪಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಈ ರಸ್ತೆಗಳಲ್ಲಿ ಟ್ರಾಫಿಕ್​ ಜಾಮ್​ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 25 ರಸ್ತೆಗಳಲ್ಲಿ ಪಾರ್ಕಿಂಗ್​ ನಿಷೇಧಿಸಲಾಗಿದೆ. ವಾಹನ ಸವಾರರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ಡಿಕೆಶಿ ಸೆರೆ ಖಂಡಿಸಿ ಇಂದು ರಾಜಭವನ ಚಲೋ: ವಿಶ್ವ ಒಕ್ಕಲಿಗರ ಒಕ್ಕೂಟದಿಂದ ಆಯೋಜನೆ, ನ್ಯಾಷನಲ್ ಕಾಲೇಜು ಮೈದಾನದಿಂದ ಮೆರವಣಿಗೆ

One Reply to “ಡಿಕೆಶಿ ಬಂಧನ ಖಂಡಿಸಿ ಇಂದು ರಾಜಭವನ ಚಲೋ: ಈ ರಸ್ತೆಗಳಲ್ಲಿ ಟ್ರಾಫಿಕ್​ ಜಾಮ್​ ಸಾಧ್ಯತೆ”

  1. ಇದೊಂದು ಕಾನೂನು ಬಾಹಿರ ಕಾರ್ಯಕ್ರಮ,… ಇದಕ್ಕೆ ನಾನೊಬ್ಬ ಒಕ್ಕಲಿಗನಾಗಿ ನನ್ನ ಬೆಂಬಲವಿಲ್ಲ.

Leave a Reply

Your email address will not be published. Required fields are marked *