ವಿಷ್ಣುದಾದಾ ಅಭಿಮಾನಿಗಳ ಸಂಭ್ರಮ

ಬಾಗಲಕೋಟೆ: ಸಾಹಸಸಿಂಹ ದಿ. ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಮರು ಬಿಡುಗಡೆಯಾದ ಹಿನ್ನೆಲೆ ಬಾಗಲಕೋಟೆ ನಗರದ ವಿಷ್ಣುವರ್ಧನ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ವಿಷ್ಣು ಸೇನಾ ಸಮಿತಿ ಸದಸ್ಯರು ಮತ್ತು ವಿಷ್ಣುವರ್ಧನ ಅಭಿಮಾನಿಗಳು ವಿಷ್ಣುವರ್ಧನ ಅವರ ಬೃಹತ್ ಕಟೌಟ್​ಗೆ ಹಾಲಿನ ಅಭಿಷೇಕ, ಹೂವಿನ ಅಭಿಷೇಕ ನೆರವೇರಿಸಿ, ಕುಂಬಳಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿದರು.

ಚಿತ್ರ ಆರಂಭಕ್ಕೂ ಮುನ್ನ ಅಭಿಮಾನಿಗಳು ಕೇಕ್ ಕತ್ತರಿಸಿ ನೆರೆದವರಿಗೆಲ್ಲ ಹಂಚಿ ಸಂಭ್ರಮಿ ಸಿದರು. ನಾಗರ ಹಾವು ಚಿತ್ರದ ಹಾವಿನ ದ್ವೇಷ ಹನ್ನೆರಡು ವರ್ಷ ಹಾಡು ಹೇಳುತ್ತ ಚಿತ್ರಕ್ಕೆ ಶುಭಕೋರಿದರು. ಹೊಸ ಮಾದರಿಯಲ್ಲಿ ನಾಗರಹಾವು ಚಿತ್ರ ಬಿಡುಗಡೆಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಷ್ಣುವರ್ಧನ ಅವರು ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಎಂದು ಬಣ್ಣಿಸಿದರು.