ಟ್ಯಾಲೆಂಟ್​ಪೂಲ್ ಹೆಚ್ಚಳವಾಗಬೇಕಿದೆ

|ವೀರೇಂದ್ರ ಸೆಹ್ವಾಗ್

ಕಬಡ್ಡಿ ಕ್ರೀಡೆ ಎನ್ನುವುದು ಭಾರತದ ರಾಜಮುಕುಟದ ಆಭರಣ. ಈ ಶ್ರೇಷ್ಠ ನೆಲದಲ್ಲಿ ಹುಟ್ಟಿದ ಕ್ರೀಡೆ, ಪ್ರಸ್ತುತ ದಿನಗಳಲ್ಲಿ ಜಗತ್ತಿನ ಎಲ್ಲಡೆಯಲ್ಲೂ ಪ್ರಖ್ಯಾತಿ ಗಳಿಸಿಕೊಂಡಿದೆ. ತೀರಾ ಇತ್ತೀಚಿನವರೆಗೂ ಕಬಡ್ಡಿಯ ಅತಿಶ್ರೇಷ್ಠ ಪದಕ ಎನ್ನುವ ಏಷ್ಯನ್ ಗೇಮ್ಸ್​ನ ಕಬಡ್ಡಿ ಸ್ಪರ್ಧೆಯಲ್ಲಿದ್ದ ಸ್ವರ್ಣ ಪದಕಗಳ ಮೇಲೆ ಭಾರತ ಬಲವಾದ ಹಿಡಿತ ಹೊಂದಿತ್ತು. ಪುರುಷರ ವಿಭಾಗದಲ್ಲಿ ಸತತ ಏಳು ಬಾರಿ ಹಾಗೂ ಮಹಿಳಾ ವಿಭಾಗದಲ್ಲಿ 2 ಬಾರಿ ಸ್ವರ್ಣ ಪದಕ ಗೆದ್ದಿದ್ದ ಭಾರತ ದಾಖಲೆಗೆ ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಷ್ಯಾಡ್​ನಲ್ಲಿ ಅಡ್ಡಿ ಎದುರಾಯಿತು.

ಕ್ರೀಡೆಯನ್ನು ಇಷ್ಟಪಡುವ ಎಲ್ಲ ಭಾರತೀಯರಂತೆ ನಾನೂ ಕೂಡ, ಭಾರತೀಯ ಕಬಡ್ಡಿ ಮತ್ತೆ ಅಗ್ರಸ್ಥಾನಕ್ಕೆ ಮರಳುವಂತಾಗಲೂ ನನ್ನಿಂದ ಏನು ಸಾಧ್ಯವೋ ಅದೆಲ್ಲವನ್ನೂ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ.ಆದ ಕಾರಣದಿಂದಲೇ ಇಂಡೋ-ಇಂಟರ್​ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ (ಐಪಿಕೆಎಲ್) ಸಂಘಟಕರು ಬೆಂಬಲ ಕೋರಿ ನನ್ನನ್ನು ಸಂರ್ಪಸಿದಾಗ ನಾನು ಕೂಡಲೇ ಒಪ್ಪಿಕೊಂಡೆ. ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಶೋಧಿಸುವುದರೊಂದಿಗೆ ಅವರ ಕೌಶಲವನ್ನು ತೋರಿಸಲು ಜಾಗತಿಕ ಮಟ್ಟದ ವೇದಿಕೆ ನೀಡುವ ನಿಟ್ಟಿನಲ್ಲಿ ಇರುವ ಸರಿಯಾದ ಗುರಿ ಹಾಗೂ ಉದ್ದೇಶವನ್ನು ಸಂಘಟಕರು ಹೊಂದಿದ್ದಾರೆ ಎಂದು ನನಗನಿಸಿದೆ. ಐಪಿಕೆಎಲ್ ಇನ್ನೂ ತನ್ನ ಆರಂಭಿಕ ಪ್ರಯಾಣದ ಹಂತದಲ್ಲಿಯೇ ಅಭಿಮಾನಿಗಳು ಹಾಗೂ ಆಟಗಾರರಿಗಾಗಿ ನೀಡಲಿರುವ ಎರಡು ಅಂಶಗಳಿಗಾಗಿ ನನಗೆ ಇನ್ನೂ ಇಷ್ಟವಾಗಿದೆ.

ಸ್ಥಳೀಯ ಪ್ರತಿಭೆಗಳನ್ನೇ ಹೆಚ್ಚಾಗಿ ತಂಡಗಳು ಆಡಿಸಬೇಕು. ಅವರೇ ತಂಡದ ಅಗ್ರ ಆಟಗಾರರಾಗಿರಬೇಕು ಎನ್ನುವ ನಿಯಮವನ್ನು ತಾವು ಹೊಂದಿರುವುದಾಗಿ ಐಪಿಕೆಎಲ್ ತಿಳಿಸಿದೆ. ಇದರಿಂದಾಗಿ ಅಭಿಮಾನಿಗಳಿಗೆ ಸ್ಥಳೀಯ ಆಟಗಾರರೊಂದಿಗೆ ಕನೆಕ್ಟ್ ಆಗಲು ಸಾಧ್ಯವಾಗುತ್ತದೆ. ಇದು ಜಾಗತಿಕವಾಗಿ ಕ್ರೀಡೆಯೊಂದು ಯಶಸ್ಸು ಕಾಣುವ ಮೂಲ ಅಂಶ. ನನ್ನ ಪ್ರಾಮಾಣಿಕ ಅಭಿಪ್ರಾಯವೇನೆಂದರೆ, ನಮ್ಮ ನಡುವೆ ಇಂದು ಇರುವ ಹೊಸ ಥರದ ಎಲ್ಲ ಕ್ರೀಡೆಯ ಲೀಗ್​ಗಳನ್ನು ಇದನ್ನು ಬಹಳ ಗೌಣವಾಗಿ ಕಾಣುತ್ತಿವೆ. ಆದರೆ, ನನಗೆ ಬಹಳ ಅಚ್ಚರಿಯೊಂದಿಗೆ ಮೆಚ್ಚುಗೆಯಾದ ಸಂಗತಿ ಏನೆಂದರೆ, ಐಪಿಕೆಎಲ್ ತನಗೆ ಬಂದ ಆದಾಯದಲ್ಲೂ ಆಟಗಾರರಿಗೆ ಪಾಲು ನೀಡುವುದಾಗಿ ಹೇಳಿರುವುದು. ಪ್ರತಿ ಆಟಗಾರರು ಮೈದಾನಕ್ಕೆ ಇಳಿದಾಗ ತನ್ನ ಶ್ರೇಷ್ಠ ನಿರ್ವಹಣೆಗೆ ಹೆಚ್ಚಿನ ಹಣ ಸಿಗುತ್ತದೆ ಎನ್ನುವ ಖುಷಿಯೂ ಇರುವ ಜತೆಗೆ ಆಟಗಾರ ಅಭಿವೃದ್ಧಿಯೇ ಲೀಗ್​ನ ಪ್ರಮುಖ ಆದ್ಯತೆ ಎನ್ನುವ ಸಂದೇಶವನ್ನು ನೀಡಿದಂತಾಗುತ್ತದೆ.

ಐಪಿಎಲ್ ಬಂದ ಬೆನ್ನಲ್ಲಿಯೇ ಹೆಚ್ಚಿನ ಆಟಗಾರರು ಭಾರತ ತಂಡದಲ್ಲಿ ಆಡುವ ಅವಕಾಶ ಪಡೆದರು. ಇಂದು ಹೆಚ್ಚಿನ ಟಿ20 ಟೂರ್ನಿಗಳು ನೇರಪ್ರಸಾರ ಕಾಣುತ್ತವೆ. ಇದು ಹಲವು ಪ್ರತಿಭೆಗಳ ಶೋಧಕ್ಕೂ ಕಾರಣವಾಗಿದೆ. ಏಷ್ಯನ್ ಕಬಡ್ಡಿಯಲ್ಲಿ ಭಾರತ ತನ್ನ ಪ್ರಭುತ್ವವನ್ನು ಮತ್ತೆ ಸಾಧಿಸಬೇಕಾದಲ್ಲಿ, ಟ್ಯಾಲೆಂಟ್ ಪೂಲ್​ನಲ್ಲಿ ಹೆಚ್ಚಳವಾಗಬೇಕಾಗಿದೆ. ಆ ಕಾರಣದಿಂದಾಗಿ ಐಪಿಕೆಎಲ್ ಇನ್ನಷ್ಟು ಸಹಾಯ ಮಾಡಲಿದೆ ಎಂದು ನಾನು ನಂಬಿದ್ದೇನೆ.

(ಲೇಖಕರು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ)