Spirituality: ಇತ್ತೀಚಿಗೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಅಲ್ಲದೆ, ನಿವೃತ್ತಿ ಘೋಷಿಸಿದ ಒಂದು ದಿನದ ಬಳಿಕ ಪತ್ನಿ ಅನುಷ್ಕಾ ಜತೆ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಮಾರ್ಗದರ್ಶನ ಪಡೆಯಲು ವೃಂದಾವನಕ್ಕೆ ಭೇಟಿ ನೀಡಿದ್ದರು.

ಜತೆಗೆ ದಂಪತಿಗಳು ಆರ್ಶೀವಾದ ಪಡೆಯಲು ವೃಂದಾವನದಲ್ಲಿರುವ ಶ್ರೀಹಿತ್ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿದ್ದರು.ವೃಂದಾವನದಲ್ಲಿ ಪ್ರೇಮಾನಂದ ಮಹಾರಾಜ್ ಅವರೊಂದಿಗೆ ಕೊಹ್ಲಿ ಮತ್ತು ಅನುಷ್ಕಾ ಸಂವಹನ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಇದನ್ನೂ ಓದಿ:ಒಂದು ವಾರಕ್ಕೂ ಮೊದಲೇ… ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ರವಿಶಾಸ್ತ್ರಿ! Virat Kohli
ಪ್ರೇಮಾನಂದ ಮಹಾರಾಜ್ ಜತೆ ವಿರಾಟ್ ಹಾಗೂ ಅನುಷ್ಕಾ ಮಾತನಾಡುವ ಈ ವೇಳೆ ಕೊಹ್ಲಿ ಕೈಯಲ್ಲಿ ಇಲೆಕ್ಟ್ರಾನಿಕ್ ಉಂಗುರ ಇತ್ತು. ಜಪ ಮಾಡುವಾಗ ಹೇಗೆ ಮಾಲೆಯನ್ನು ಹಿಡಿದುಕೊಳ್ಳಲಾಗುತ್ತದೆಯೋ ಅದರ ಬದಲು ಈ ಉಂಗುರ ಬಳಸಲಾಗುತ್ತದೆ. ಎಷ್ಟು ಬಾರಿ ಜಪ ಮಾಡಿದರು ಎಂಬುದನ್ನು ಎಣಿಸಲು ಇದು ಸಹಕಾರಿ ಆಗಲಿದೆ. ಇದೀಗ ಇದು ಆಶ್ರಮದಲ್ಲಿ ಮಾತ್ರವಲ್ಲ. ಕೊಹ್ಲಿ ಎಣಿಕೆ ಯಂತ್ರವನ್ನು ಹಿಡಿದುಕೊಂಡು ಕಾರಿನಿಂದ ಇಳಿಯುತ್ತಿರುವುದು ಕಂಡುಬಂದಿತು. ಸಂಪೂರ್ಣ ಆಧ್ಯಾತ್ಮದ ಕಡೆ ಸಂಪೂರ್ಣ ವಾಲಿದ್ರ ಎಂಬ ಪ್ರಶ್ನೆ ಉದ್ಭವಿಸಿದೆ.
Virat holding a Jaap counting machine in his hand is the cutest thing you’ll see 💕 pic.twitter.com/o1DuhON86K
— Virat Kohli Fan Club (@Trend_VKohli) May 15, 2025
ಇದನ್ನೂ ಓದಿ:ಒಂದು ವಾರಕ್ಕೂ ಮೊದಲೇ… ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ರವಿಶಾಸ್ತ್ರಿ! Virat Kohli
ಶನಿವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2025 ಪಂದ್ಯದಲ್ಲಿ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮೈದಾನಕ್ಕಿಳಿಯಲಿದ್ದಾರೆ. ಸೋಮವಾರ, ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಇದು ದೀರ್ಘ ಸ್ವರೂಪದ ಅದ್ಭುತ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತದೆ. ಅವರು ಭಾರತಕ್ಕಾಗಿ 123 ಟೆಸ್ಟ್‌ಗಳನ್ನು ಆಡಿದ್ದಾರೆ, 30 ಶತಕಗಳು ಸೇರಿದಂತೆ 46.85 ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ.(ಏಜೆನ್ಸೀಸ್)
ಒಂದು ವಾರಕ್ಕೂ ಮೊದಲೇ… ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ರವಿಶಾಸ್ತ್ರಿ! Virat Kohli
ಭಾರಿ ಮಳೆಯಿಂದಾಗಿ ನೀರು ನಿಂತ ಮೈದಾನದಲ್ಲಿ ಮಕ್ಕಳಂತೆ ಮಿಂದೆದ್ದ ಟಿಮ್ ಡೇವಿಡ್! ವಿಡಿಯೋ ವೈರಲ್…Tim David