ಕೆರಿಬಿಯನ್ನರ ವಿರುದ್ಧ ಐತಿಹಾಸಿಕ ದಾಖಲೆ ಸನಿಹದಲ್ಲಿ ವಿರಾಟ್-ರೋಹಿತ್ ಶರ್ಮಾ ಜೋಡಿ

ಪೋರ್ಟ್​ ಆಫ್ ಸ್ಪೇನ್: ಕೆರಿಬಿಯನ್ನರ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೋಹ್ಲಿ ಹಾಗೂ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಐತಿಹಾಸಿಕ ದಾಖಲೆ ನಿರ್ಮಾಣದ ಹೊಸ್ತಿಲಲ್ಲಿದ್ದಾರೆ.

ಟ್ರಿನಿಡಾಡ್​ನ ಕ್ವೀನ್ಸ್​ ಪಾರ್ಕ್ ಓವಲ್​ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಈ ಜೋಡಿ.
27 ರನ್ ಗಳಿಸಿದರೆ 1000 ರನ್ ಪೂರೈಸಲಿದ್ದಾರೆ. ಈ ಮೂಲಕ ಕೆರಿಬಿಯನ್ನರ ವಿರುದ್ಧ ಏಕದಿನ ಕ್ರಿಕೆಟ್​​ನಲ್ಲಿ 1000 ರನ್ ಗಳಿಸಿದ ಭಾರತದ ಮೊದಲ ಜೋಡಿ ಎಂಬ ಖ್ಯಾತಿಗೆ ಪಾತ್ರವಾಗಲಿದೆ.

ಎರಡನೇ ಏಕದಿನ ಪಂದ್ಯದಲ್ಲಿ ಕೋಹ್ಲಿ ಏಕದಿನ ಕ್ರಿಕೆಟ್​ನಲ್ಲಿ 42 ನೇ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚುಶತಕ ಸಿಡಿಸಿದವರ ಪಟ್ಟಿಯಲ್ಲಿ ಸಚಿನ್ ನಂತರದ ಸ್ಥಾನಕ್ಕೇರಿದ್ದರು. ರೋಹಿತ್ ಶರ್ಮಾ ಇನ್ನೊಂದು ದಾಖಲೆ ಸನಿಹದಲ್ಲಿದ್ದು, ಪಂದ್ಯದಲ್ಲಿ 26 ರನ್​ ಗಳಿಸಿದರೆ ಭಾರತದ ಪರ ಅತಿ ಹೆಚ್ಚು ರನ್​ಗಳಿಸಿದವರ ಪೈಕಿ 8 ನೇ ಸ್ಥಾನಕ್ಕೇರಲಿದ್ದಾರೆ. ಯುವರಾಜ್​ ಸಿಂಗ್ 8,701 ರನ್​ ಗಳಿಸುವ ಮೂಲಕ 8 ನೇ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ 8,676 ರನ್ ಗಳಿಸಿದ್ದಾರೆ.(ಏಜೆನ್ಸೀಸ್​)

Leave a Reply

Your email address will not be published. Required fields are marked *