Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಆಟಗಾರನಾಗಿ ಗೆದ್ದು, ನಾಯಕನಾಗಿ ಸೋತ ಕೊಹ್ಲಿ

Thursday, 13.09.2018, 2:05 AM       No Comments

ನವದೆಹಲಿ: ಭಾರತೀಯ ಕ್ರಿಕೆಟ್​ನಲ್ಲಿ ಕಳೆದ ಎರಡು ವರ್ಷಗಳಿಂದ ಸುದ್ದಿಯಲ್ಲಿದ್ದ ಇಂಗ್ಲೆಂಡ್ ಪ್ರವಾಸಕ್ಕೆ ತೆರೆ ಬಿದ್ದಿದೆ. ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ಛಾತಿ ಇರುವ ತಂಡ ಎಂದು ಹೊಗಳಿಸಿಕೊಂಡು ಆಂಗ್ಲರ ನಾಡಿಗೆ ತೆರಳಿದ್ದ ವಿರಾಟ್ ಕೊಹ್ಲಿ ಟೀಮ್ ಹಲವು ಸಿದ್ಧತೆಗಳ ನಡುವೆಯೂ 1-4 ರಿಂದ ಸರಣಿ ಸೋತಿದೆ. ಇಡೀ ಸರಣಿಯ ಪ್ಲಸ್ ಪಾಯಿಂಟ್ ಏನೆಂದರೆ, ವಿರಾಟ್ ಕೊಹ್ಲಿಯ ಫಾಮ್ರ್. 2014ರ ಪ್ರವಾಸದ ಕಳಪೆ ದಾಖಲೆಯನ್ನು ಮೊದಲ ಪಂದ್ಯದಲ್ಲಿಯೇ ಮರೆಮಾಚುವಂತೆ ಆಡಿದ ಕೊಹ್ಲಿ, ಆಟಗಾರನಾಗಿ ಅದ್ಭುತ ಯಶಸ್ಸು ದಾಖಲಿಸಿದರೂ, ನಾಯಕನಾಗಿ ಅಷ್ಟೇ ದೊಡ್ಡ ವೈಫಲ್ಯವನ್ನು ಈ ಸರಣಿಯಲ್ಲಿ ಎದುರಿಸಿದ್ದಾರೆ.

ಲಾರ್ಡ್ಸ್ ಟೆಸ್ಟ್ ಹೊರತಾಗಿ ಎಲ್ಲ ಪಂದ್ಯಗಳಲ್ಲೂ ತಂಡ ಉತ್ತಮವಾಗಿ ಆಡಿತು. ಆದರೆ, ಒಂದೇ ಪಂದ್ಯದಲ್ಲಿ ದೀರ್ಘ ಅವಧಿಯವರೆಗೆ ಆತಿಥೇಯ ತಂಡದ ಮೇಲೆ ಒತ್ತಡ ಹೇರಲು ವಿಫಲವಾಗಿದ್ದು ಸರಣಿ ಸೋಲಿಗೆ ಕಾರಣ ಎಂದು ಕೊಹ್ಲಿ ಹೇಳಿದ್ದರಲ್ಲಿ ನಿಜವಿದೆ. ಆದರೆ, 1-4 ರಿಂದ ಸರಣಿ ಸೋಲು ಕಾಣುವ ತಂಡ ಇದಾಗಿರಲಿಲ್ಲ.

ಸರಣಿಯಲ್ಲಿ 2 ಶತಕ, 2 ಅರ್ಧಶತಕದೊಂದಿಗೆ 593 ರನ್ ಸಿಡಿಸಿದ ಕೊಹ್ಲಿ, ದೀರ್ಘ ಕಾಲದ ಎದುರಾಳಿ ಜೇಮ್್ಸ ಆಂಡರ್​ಸನ್ ವಿರುದ್ಧ ದೊಡ್ಡ ಮಟ್ಟದ ಮೇಲುಗೈ ಸಾಧಿಸಿದರು. ಆದರೆ, ತಂಡಕ್ಕೆ ಇದರ ನೆರವಾಗಲಿಲ್ಲ. ಸರಣಿಯಲ್ಲಿ ಭಾರತದ 2ನೇ ಗರಿಷ್ಠ ರನ್ ಸ್ಕೋರರ್ ಕೆಎಲ್ ರಾಹುಲ್. 299 ರನ್ ಬಾರಿಸಿದ ರಾಹುಲ್ ಯಾವ ಒತ್ತಡವೂ ಇಲ್ಲದ ಕೊನೆಯ ಟೆಸ್ಟ್​ನಲ್ಲಿ 149 ರನ್ ಬಾರಿಸಿದ್ದರು. ಆರಂಭಿಕ ಆಟಗಾರರ ವೈಫಲ್ಯ, ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಅತಿಯಾದ ಭಾರ, ಗೆಲ್ಲಬಹುದಾಗಿದ್ದ ಎರಡು ಟೆಸ್ಟ್​ಗಳ ಸೋಲು, ವಿರಾಟ್ ಕೊಹ್ಲಿಯ ನಾಯಕತ್ವ, ಕೊನೆಗೆ ಇಂಗ್ಲೆಂಡ್​ನ ಬಾಲಂಗೋಚಿಗಳ ನಿರ್ವಹಣೆ ಭಾರತದ ಈ ಸರಣಿ ಸೋಲಿಗೆ ಕಾರಣ.

ಮೂವರು ಆರಂಭಿಕರೊಂದಿಗೆ ಇಂಗ್ಲೆಂಡ್​ಗೆ ಬಂದಿದ್ದ ಭಾರತಕ್ಕೆ, ಯಾರೊಬ್ಬರೂ ವಿಶ್ವಾಸದ ಆಟವಾಡಲಿಲ್ಲ. ಕೊನೆಯ ಟೆಸ್ಟ್​ನಲ್ಲಿ ರಾಹುಲ್ ಶತಕ ಬಾರಿಸಿದ್ದು, ಬಿಟ್ಟರೆ ಇಡೀ ಸರಣಿಯಲ್ಲಿ ಅವರ ವೈಫಲ್ಯವೇ ಹೆಚ್ಚಾಗಿ ಕಂಡಿದೆ. ಇನ್ನು ಧವನ್ ಕೊನೆಯವರೆಗೂ ಇಂಗ್ಲೆಂಡ್ ಬೌಲಿಂಗ್ ಬಗ್ಗೆ ಅಚ್ಚರಿಯನ್ನೇ ಹೊಂದಿದ್ದರು. ಮುರಳಿ ವಿಜಯ್ರನ್ನು ಸರಣಿಯ ನಡುವೆಯೇ ತಂಡದಿಂದ ಕೈಬಿಟ್ಟರೆ, ರಾಹುಲ್ ಹಾಗೂ ಧವನ್​ರನ್ನು ವಿಧಿಯಿಲ್ಲದೆ ಆರಂಭಿಕರನ್ನಾಗಿ ಆಡಿಸಲಾಯಿತು. ಇವರ ವೈಫಲ್ಯ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಅತಿಯಾದ ಭಾರ ಬಿದ್ದಿತು. ಕೊಹ್ಲಿ, ಪೂಜಾರ ಹಾಗೂ ರಹಾನೆ ಪೈಕಿ ಇಬ್ಬರು ಮಾತ್ರವೇ ಸರಣಿಯಲ್ಲಿ ಶತಕ ಬಾರಿಸಲು ಯಶ ಕಂಡರು. ಸರಣಿಯ ಬಹುಪಾಲು ಅವಧಿಯಲ್ಲಿ ಭಾರತ ತಂಡದ ಅಗ್ರ ಬ್ಯಾಟ್ಸ್​ಮನ್​ಗಳಾಗಿ ಕಂಡಿದ್ದು ಈ ಮೂವರು ಮಾತ್ರ. ಅಜಿಂಕ್ಯ ರಹಾನೆ ಕೂಡ ಹೇಳಿಕೊಳ್ಳುವಂತ ಆಟವಾಡದೇ ಹೋಗಿದ್ದು ಸೋಲುಗಳಿಗೆ ಕಾರಣವೆನಿಸಿತು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಿರ್ವಹಣೆಗಿಂತ ಹೆಚ್ಚಾಗಿ ತಂಡದ ಆಯ್ಕೆಯೇ ಹೆಚ್ಚಾಗಿ ಸದ್ದು ಮಾಡಿತು. ಬರ್ವಿುಂಗ್​ಹ್ಯಾಂ ಟೆಸ್ಟ್​ನಲ್ಲಿ 31 ರನ್ ಅಂತರದ ಸೋಲಿಗೆ ಕಾರಣವಾಗಿದ್ದು ತಂಡದ ಆಯ್ಕೆ. ಆ ಪಂದ್ಯದಲ್ಲಿ ಚೇತೇಶ್ವರ ಪೂಜಾರಗೆ ಸ್ಥಾನ ನೀಡಿದ್ದರೆ, ಬಹುಶಃ ಗೆಲ್ಲುವ ಅವಕಾಶ ಇರುತ್ತಿತ್ತೇನೋ. ಆದರೆ, ಕೌಂಟಿ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡ ಕೊಹ್ಲಿ, ಪೂಜಾರರನ್ನು ಕೈಬಿಟ್ಟಿದ್ದರು. ಆದರೆ, ಟ್ರೆಂಟ್​ಬ್ರಿಜ್ ಟೆಸ್ಟ್ ನಲ್ಲಿ ಪೂಜಾರ ಶತಕದ ನಿರ್ವಹಣೆಯಿಂದ ಭಾರತ ಜಯ ಸಾಧಿಸಿತ್ತು. ಇಡೀ ಸರಣಿಯಲ್ಲಿ ಪೂಜಾರ 278 ರನ್ ಬಾರಿಸಿದ್ದರು. ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ತಂಡದ ಆಯ್ಕೆಯೇ ತಪ್ಪಾಗಿತ್ತು ಎನ್ನುವುದನ್ನು ಸ್ವತಃ ಕೊಹ್ಲಿಯೇ ಒಪ್ಪಿಕೊಂಡರು. ಇನ್ನು ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಸಾಮರ್ಥ್ಯದ ಬಗ್ಗೆ ಕೊಹ್ಲಿಯ ನಿರೀಕ್ಷೆ ಅತಿಯಾಗಿತ್ತು. ಇನ್ನೊಂದೆಡೆ, ಹಾರ್ದಿಕ್ ಪಾಂಡ್ಯರ ಪಾತ್ರವನ್ನು ಇಂಗ್ಲೆಂಡ್ ತಂಡದಲ್ಲಿ ನಿಭಾಯಿಸಿದ ಸ್ಯಾಮ್ ಕರ›ನ್, ಎಜ್​ಬಾಸ್ಟನ್ ಹಾಗೂ ಸೌಥಾಂಪ್ಟನ್ ಟೆಸ್ಟ್ ವಿಜಯಕ್ಕೆ ನೆರವಾಗಿದ್ದರು.

ಭಾರತದ ಬೌಲಿಂಗ್ ಟಾಪ್​ಕ್ಲಾಸ್

ಎಜ್​ಬಾಸ್ಟನ್ ಟೆಸ್ಟ್​ನ 2ನೇ ಇನಿಂಗ್ಸ್, ಸೌಥಾಂಪ್ಟನ್ ಹಾಗೂ ಓವಲ್ ಟೆಸ್ಟ್​ನಲ್ಲಿ ಇಂಗ್ಲೆಂಡ್​ನ ಬಾಲಂಗೋಚಿಗಳು ಭಾರತಕ್ಕೆ ಸವಾಲಾದರು. ಆದರೆ, ಇಡೀ ಸರಣಿಯಲ್ಲಿ ಭಾರತದ ಬೌಲಿಂಗ್ ಶ್ರೇಷ್ಠ ಮಟ್ಟದಿಂದ ಕೂಡಿತ್ತು. ಇಶಾಂತ್ ಶರ್ಮ (18 ವಿಕೆಟ್), ಬುಮ್ರಾ(16) ಹಾಗೂ ಶಮಿ (14) ಸರಣಿ ಗೆಲ್ಲುವ ನಿಟ್ಟಿನಲ್ಲಿ ತಕ್ಕುದಾದ ನಿರ್ವಹಣೆ ತೋರಿದ್ದರು. ಸೌಥಾಂಪ್ಟನ್​ನಲ್ಲಿ ಸ್ಪಿನ್ ಸ್ನೇಹಿ ಪಿಚ್ ಇದ್ದರೂ, ಅಶ್ವಿನ್ ಅದರ ಲಾಭ ಎತ್ತುವಲ್ಲಿ ವಿಫಲವಾದರು.

ಮುಂದೆ ಆಸೀಸ್ ಪ್ರವಾಸ

ಈ ಸರಣಿಯ ಮೊದಲ ನಾಲ್ಕು ಟೆಸ್ಟ್​ಗಳನ್ನು ಆಧರಿಸಿ, ಆಟಗಾರರ ನಿರ್ವಹಣೆಯನ್ನು ಪರಿಶೀಲನೆ ಮಾಡಬೇಕಿದೆ. ರಾಹುಲ್ ಹಾಗೂ ರಿಷಭ್ ಬಾರಿಸಿದ ಶತಕಗಳು ವೈಯಕ್ತಿಕ ದಾಖಲೆಗಳಿಗಷ್ಟೇ ಸೀಮಿತ. ತಂಡದ ಮುಂದಿನ ಪ್ರವಾಸ ಸರಣಿ ಡಿಸೆಂಬರ್​ನಲ್ಲಿ ನಿಗದಿಯಾಗಿದೆ. ವಾರ್ನರ್, ಸ್ಟೀವನ್ ಸ್ಮಿತ್ ಇಲ್ಲದ ಆಸ್ಟ್ರೇಲಿಯಾವನ್ನು ಎದುರಿಸಲಿರುವ ಭಾರತ, ಈಗಿನಿಂದಲೇ ತಯಾರಿ ಆರಂಭಿಸಬೇಕಿದೆ.

ಬ್ಯಾನರ್​ವುನ್ ಆಗ್ತಿದ್ರು ರಾಹುಲ್

5ನೇ ಟೆಸ್ಟ್ 2ನೇ ಇನಿಂಗ್ಸ್​ನಲ್ಲಿ ಐವರು ಬ್ಯಾಟ್ಸ್ ಮನ್​ಗಳು ಶೂನ್ಯ ಸುತ್ತಿದರೂ ಭಾರತ 345 ರನ್ ಬಾರಿಸಲು ಯಶ ಕಂಡಿತು. ಅದರಲ್ಲೂ ಇನಿಂಗ್ಸ್​ನ ಆರಂಭದಲ್ಲಿ ರಾಹುಲ್, ಆಸ್ಟ್ರೇಲಿಯಾದ ಮಾಜಿ ಆರಂಭಿಕ ಚಾರ್ಲಸ್ ಬ್ಯಾನರ್​ವ್ಯಾನ್ ರೀತಿಯಲ್ಲಿ ಆಟವಾಡುತ್ತಿದ್ದರು ಎಂದು ಟ್ವಿಟರ್​ನಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಟೆಸ್ಟ್ ಇತಿಹಾಸದ ಮೊಟ್ಟಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಬಾರಿಸಿದ 245 ರನ್​ಗಳ ಪೈಕಿ ಬ್ಯಾನರ್​ವುನ್ ಒಬ್ಬರೇ 165 ರನ್ ಬಾರಿಸಿದ್ದರು. ಅಂದರೆ ತಂಡದ ಮೊತ್ತದ 67.43%ರಷ್ಟು. ರಾಹುಲ್ ಕೂಡ ಅಂತಿಮ ದಿನದ ಭೋಜನ ವಿರಾಮದ ವೇಳೆಗೆ ತಂಡದ 167 ರನ್​ಗಳ ಪೈಕಿ 108 ರನ್ ಬಾರಿಸಿದ್ದರು. ಅಂದರೆ, ತಂಡದ 64.7%ರಷ್ಟು. 2000ದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬಾರಿಸಿದ 261 ರನ್​ಗಳ ಪೈಕಿ 167 ರನ್​ಗಳನ್ನು ವಿವಿಎಸ್ ಲಕ್ಷ್ಮಣ್ (63.98%) ಬಾರಿಸಿದ್ದರು. ಇದು ಈವರೆಗಿನ ಭಾರತೀಯ ದಾಖಲೆಯಾಗಿದೆ.

ಅಗ್ರಸ್ಥಾನ ಕಾಯ್ದುಕೊಂಡ ಭಾರತ, ಕೊಹ್ಲಿ

ಲಂಡನ್: ಟೆಸ್ಟ್ ರ್ಯಾಂಕಿಂಗ್​ನಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಸರಣಿ ಆರಂಭಕ್ಕೂ ಮುನ್ನ 125 ಅಂಕ ಹೊಂದಿದ್ದ ಭಾರತ, 115 ಅಂಕಗಳಿಗೆ ಕುಸಿದಿದೆ. ಸರಣಿ ಆರಂಭದಲ್ಲಿ 97 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್, 4ನೇ ಸ್ಥಾನಕ್ಕೇರಿದೆ. ಬ್ಯಾಟಿಂಗ್​ನಲ್ಲಿ ಕೊಹ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top