ಕೊಹ್ಲಿ, ಸ್ಮೃತಿ ಮಂದನಾ ವರ್ಷದ ಕ್ರಿಕೆಟರ್ ಗೌರವ

ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹಿಳಾ ತಂಡದ ಸ್ಮೃತಿ ಮಂದನಾ, 2019ರ ಸಿಯೆಟ್ ವಾರ್ಷಿಕ ಕ್ರಿಕೆಟ್ ಪ್ರಶಸ್ತಿಯಲ್ಲಿ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟರ್ ಎನ್ನುವ ಗೌರವಕ್ಕೆ ಭಾಜನರಾಗಿದ್ದಾರೆ.

ಕೊಹ್ಲಿ ವರ್ಷದ ಶ್ರೇಷ್ಠ ಬ್ಯಾಟ್ಸ್​ಮನ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರೆ, ಜಸ್​ಪ್ರೀತ್ ಬುಮ್ರಾ ವರ್ಷದ ಶ್ರೇಷ್ಠ ಬೌಲರ್ ಪ್ರಶಸ್ತಿ ಜಯಿಸಿದ್ದಾರೆ. ಚೇತೇಶ್ವರ ಪೂಜಾರ ವರ್ಷದ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗ ಹಾಗೂ ರೋಹಿತ್ ಶರ್ಮ ವರ್ಷದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟಿಗ ಗೌರವ ಪಡೆದಿದ್ದರೆ, ಆಸ್ಟ್ರೇಲಿಯಾದ ಆರನ್ ಫಿಂಚ್ ವರ್ಷದ ಟಿ20 ಆಟಗಾರ ಹಾಗೂ ರಶೀದ್ ಖಾನ್ ವರ್ಷದ ಶ್ರೇಷ್ಠ ಟಿ20 ಬೌಲರ್ ಪ್ರಶಸ್ತಿ ಗೆದ್ದಿದ್ದಾರೆ.

1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್ರೌಂಡರ್ ಮೊಹಿಂದರ್ ಅಮರನಾಥ್ ಜೀವಮಾನ ಸಾಧನೆ ಗೌರವಕ್ಕೆ ಭಾಜನರಾಗಿದ್ದಾರೆ.-ಏಜೆನ್ಸೀಸ್

Leave a Reply

Your email address will not be published. Required fields are marked *