ಸವಾಲಿನ ವಿಶ್ವಕಪ್​ಗೆ ಬಲಿಷ್ಠ ಭಾರತ: ಧೋನಿ ಪಾತ್ರ ತಂಡದಲ್ಲಿ ಪ್ರಮುಖ

ಮುಂಬೈ: ವಿಶ್ವ ಚಾಂಪಿಯನ್ ಪಟ್ಟಕ್ಕೆ ಅಗ್ರ 10 ತಂಡಗಳು ಹೋರಾಡುವ ಸಮಯ ಬಂದಿದೆ. ಕ್ರಿಕೆಟ್ ಇತಿಹಾಸದ ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿರುವ ಏಕದಿನ ವಿಶ್ವಕಪ್​ಗೆ ಟೀಮ್ ಇಂಡಿಯಾ ಸರ್ವರೀತಿಯಲ್ಲೂ ಸಜ್ಜಾಗುವ ಮೂಲಕ ಇಂಗ್ಲೆಂಡ್​ಗೆ ಬುಧವಾರ ತೆರಳಲಿದೆ. ‘ಎಲ್ಲಕ್ಕಿಂತ ಮಿಗಿಲಾಗಿ ಹಾಲಿ ವಿಶ್ವಕಪ್ ಸೆಣಸಾಟ ಅತ್ಯಂತ ಸವಾಲಿನದ್ದಾಗಿರಲಿದ್ದು, ಟೂರ್ನಿಯಲ್ಲಿ ಶ್ರೇಷ್ಠ ಕ್ರಿಕೆಟ್ ಆಡುವ ವಿಶ್ವಾಸವಿದೆ’ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮೇ 30ಕ್ಕೆ ಇಂಗ್ಲೆಂಡ್​ನಲ್ಲಿ ವಿಶ್ವಕಪ್ ಮಹಾಕದನಕ್ಕೆ ಚಾಲನೆ ಸಿಗಲಿದೆ. ಮಂಗಳವಾರ ಬಿಸಿಸಿಐ ಮುಖ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹಾಗೂ ಮುಖ್ಯಕೋಚ್ ರವಿಶಾಸ್ತಿ್ರ ತಂಡದ ಸಾಮರ್ಥ್ಯ, ಯೋಜನೆ, ಗುರಿ, ನಿರೀಕ್ಷೆಗಳ ಬಗ್ಗೆ ವಿವರಿಸಿದರು. ವೈಯಕ್ತಿಕವಾಗಿ ಹೇಳಬೇಕೆಂದರೆ ನಾನು ಆಡಿದ ಹಿಂದಿನ ಎರಡೂ ವಿಶ್ವಕಪ್​ಗಿಂತ ಇದು ಸವಾಲಿನಿಂದ ಕೂಡಿರುವ ವಿಶ್ವಕಪ್. ಕಾರಣ ಟೂರ್ನಿ ಮಾದರಿ, ಕಣದಲ್ಲಿರುವ ಎಲ್ಲಾ ತಂಡಗಳು ಬಲಿಷ್ಠವಾಗಿವೆ. ಅಫ್ಘಾನಿಸ್ತಾನ ಕೂಡ ದುರ್ಬಲವಲ್ಲ. 2015ರ ತಂಡಕ್ಕೂ ಈ ಬಾರಿಯಲ್ಲಿ ಸ್ಪರ್ಧೆ ಮಾಡಲಿರುವ ತಂಡಕ್ಕೂ ಬಹಳ ವ್ಯತ್ಯಾಸವಿದೆ. ಯಾವುದೇ ತಂಡಕ್ಕೆ ಬೇಕಾದರೂ ಆಘಾತ ನೀಡಬಹುದು. ಇದು ಗುಂಪು ಹಂತದ ಟೂರ್ನಿ ಅಲ್ಲದಿರುವ ಕಾರಣ ಪ್ರತಿ ಪಂದ್ಯದಲ್ಲೂ ನಾವು ಅತ್ಯುತ್ತಮ ಕ್ರಿಕೆಟ್ ಆಡಬೇಕಿದೆ ಎಂದು ಕೊಹ್ಲಿ ಹೇಳಿದರು.

ಫುಟ್​ಬಾಲ್​ನಂತೆ ಆಡಬೇಕು: 3-4 ತಿಂಗಳ ಕಾಲ ನಡೆಯಲಿರುವ ಪ್ರೀಮಿಯರ್ ಲೀಗ್, ಲಾ ಲೀಗಾದಂಥ ಪ್ರತಿಷ್ಠಿತ ಫುಟ್​ಬಾಲ್ ಟೂರ್ನಿಗಳಲ್ಲಿ ಎಲ್ಲಾ ಕ್ಲಬ್​ಗಳು ಸತತವಾಗಿ ಆಡುತ್ತವೆ. ಹೀಗಿರುವಾಗ ಇದು ನಮಗೇಕೆ ಸಾಧ್ಯವಿಲ್ಲ? ಟೂರ್ನಿಯಲ್ಲಿ ಸ್ಥಿರ ಆಟವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ವಿವರಿಸಿದರು.

ವೇಗಿಗಳಿಗೆ ನೆರವಾದ ಐಪಿಎಲ್: ಐಪಿಎಲ್-12 ವೇಗದ ಬೌಲರ್​ಗಳಿಗೆ ಸ್ಥಿರ ಫಾಮ್ರ್ ಮತ್ತು ಚೈತನ್ಯ ತುಂಬಲು ನೆರವಾಗಿದೆ. ಏಕದಿನ ಮಾದರಿಗೆ ಅವರು ಸಜ್ಜಾಗಿದ್ದಾರೆ. 4 ಓವರ್ ಪೂರ್ತಿಗೊಳಿಸಿದೊಡನೆ ಯಾರೂ ಸುಸ್ತಾದಂತೆ ಕಂಡುಬಂದಿಲ್ಲ. ಇದೇ ಫಿಟ್ನೆಸ್ ವಿಶ್ವಕಪ್ ಟೂರ್ನಿಗೂ ಕಾಯ್ದುಕೊಳ್ಳುವಂತೆ ಐಪಿಎಲ್ ಮುಂಚಿತವಾಗಿಯೇ ಎಲ್ಲಾ ಆಟಗಾರರಿಗೂ ಸೂಚಿಸಲಾಗಿದೆ ಎಂದು ಕೊಹ್ಲಿ ವಿವರಿಸಿದರು.-ಪಿಟಿಐ

ನಾವು ಪಾಕಿಸ್ತಾನ ಅಥವಾ ಯಾವುದೇ ತಂಡವೆಂದು ಯೋಚಿಸಿ ಆಡಲು ಸಾಧ್ಯವಿಲ್ಲ. ಯಾವುದೇ ಎದುರಾಳಿ ತಂಡಗಳ ಆಟವನ್ನು ಮೀರಿಸುವಂಥ ನಿರ್ವಹಣೆ ತೋರಬೇಕು. ಪಾಕ್ ವಿರುದ್ಧದ ಪಂದ್ಯದ ವಿಚಾರದಲ್ಲೂ ನಮ್ಮ ಸಿದ್ಧತೆ ಭಿನ್ನವಿಲ್ಲ ಗುಣಮಟ್ಟದ ಆಟ ನಮ್ಮ ಗುರಿ. ಟೂರ್ನಿಯ ವೇಳಾಪಟ್ಟಿ ಕೂಡ ಅತ್ಯುತ್ತಮವಾಗಿ ಸಿದ್ಧವಾಗಿದೆ.

| ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ

ಧೋನಿ ಸಲಹೆಯೇ ತಂಡಕ್ಕೆ ಪ್ಲಸ್ ಪಾಯಿಂಟ್

ವಿಶ್ವಕಪ್​ನಲ್ಲಿ ಧೋನಿ ತಂಡದ ಪ್ರಮುಖ ಆಟಗಾರನಾಗಿರಲಿದ್ದಾರೆ ಎಂದು ರವಿಶಾಸ್ತಿ್ರ ಹೇಳಿದರು. ತಂಡದಲ್ಲಿ ಧೋನಿ ವಿಶೇಷ ಆಟಗಾರ. ಮೈದಾನದಲ್ಲಿ ವಿರಾಟ್ ಜತೆ ಅವರ ಮಾತುಕತೆ ಅಮೂಲ್ಯವಾಗಿದ್ದು. ಐಪಿಎಲ್​ನಲ್ಲಿ ಧೋನಿ ತೋರಿದ ನಿರ್ವಹಣೆ ಟೀಮ್ ಇಂಡಿಯಾ ದೃಷ್ಟಿಯಿಂದಲೂ ಪ್ರಮುಖವಾಗಿದ್ದು, ಕೇವಲ ಕೀಪರ್ ಆಗಿರದೆ, ರನೌಟ್,ಸ್ಟಪಿಂಗ್, ಕ್ಯಾಚ್ ಹೀಗೆ ಹಲವು ಸಂದರ್ಭಗಳಲ್ಲಿ ಫಲಿತಾಂಶದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬಲ್ಲ ಆಟಗಾರ. ಖಂಡಿತಾ ವಿಶ್ವಕಪ್​ನಲ್ಲಿ ಅವರ ಪಾತ್ರ ಮಹತ್ವದ್ದಾಗಿರಲಿದೆ ಎಂದರು. ಬೌಲಿಂಗ್ ವಿಭಾಗದಲ್ಲಿ ಎಲ್ಲರೂ 4-5 ವರ್ಷಗಳಿಂದ ಜತೆಯಾಗಿ ಆಡಿದ ಅನುಭವಿಗಳು.ಇಂಗ್ಲೆಂಡ್ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಫೇವರಿಟ್. ಆದರೆ ಅಲ್ಲಿನ ಹವಾಮಾನ ಸ್ವಲ್ಪ ಬದಲಾದರೂ ಅದಕ್ಕೆ ಆಟಗಾರರು ಒಗ್ಗಿಕೊಳ್ಳಬೇಕು. ಲಂಡನ್ ಬ್ಯಾಟಿಂಗ್ ಫೇವರಿಟ್. ಆದರೆ ಅಲ್ಲಿನ ಉತ್ತರ ಭಾಗದ ವಾತಾವರಣ ವಿಭಿನ್ನ. ಅದೇನಿದ್ದರೂ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಈ ಬಾರಿ ವಿಶ್ವಕಪ್ ನಮ್ಮದಾಗುವುದರಲ್ಲಿ ಅನುಮಾನವಿಲ್ಲ ಎಂದರು.

260-270 ಮೊತ್ತವೂ ಸವಾಲಿನದ್ದು

ಪಾಕಿಸ್ತಾನ-ಇಂಗ್ಲೆಂಡ್ ನಡುವಿನ 4 ಏಕದಿನ ಪಂದ್ಯಗಳಲ್ಲೂ ಉಭಯ ತಂಡಗಳಿಂದ ಸೇರಿ ಒಟ್ಟು 7 ಬಾರಿ 340ಕ್ಕೂ ಅಧಿಕ ಮೊತ್ತ ದಾಖಲಾದರೂ, ವಿಶ್ವಕಪ್​ನಲ್ಲಿ ಸ್ಪರ್ಧಾತ್ಮಕ ಮೊತ್ತವೂ ವಿಭಿನ್ನ ಪಾತ್ರವಹಿಸಬಹುದು ಅನ್ನುವುದು ಕೊಹ್ಲಿ ಅಭಿಪ್ರಾಯ. ಟೂರ್ನಿಯಲ್ಲಿ ಬೃಹತ್ ಮೊತ್ತದ ನಿರೀಕ್ಷೆ ನಮಗೂ ಇದೆ. ಆದರೆ ದ್ವಿಪಕ್ಷೀಯ ಸರಣಿ ಮತ್ತು ವಿಶ್ವಕಪ್ ಟೂರ್ನಿ ವಿಭಿನ್ನವಾಗಿರುತ್ತದೆ. ಇಲ್ಲಿ ಒತ್ತಡ ಹೆಚ್ಚಿರುವುದರಿಂದ 260-270ರ ಮೊತ್ತದಲ್ಲೂ ಫಲಿತಾಂಶ ಭಿನ್ನವಾಗಿರಬಹುದು. ಎಲ್ಲಾ ರೀತಿಯ ಸನ್ನಿವೇಶಗಳನ್ನೂ ನಿರೀಕ್ಷಿಸಿದ್ದೇವೆ ಎಂದರು.

ಕುಲ್ಚಾ ಜೋಡಿ ಬೌಲಿಂಗ್ ಬಲ

ರಿಸ್ಟ್ ಸ್ಪಿನ್ನರ್​ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ವಿಶ್ವಕಪ್​ಗೆ ತಂಡದ ಪ್ರಮುಖ ಆಧಾರಸ್ತಂಭವಾಗಿರಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ. ಐಪಿಎಲ್-12ರಲ್ಲಿ ಕುಲದೀಪ್ ನಿರೀಕ್ಷಿತ ನಿರ್ವಹಣೆ ತೋರಲು ವಿಫಲಗೊಂಡಿದ್ದರು. ಆದರೆ ಕುಲದೀಪ್​ಗೆ ಹಿಂದಿನ ತಪು್ಪಗಳನ್ನು ಸರಿಪಡಿಸಿ ಪರಿಣಾಮಕಾರಿಯಾಗಿ ಮರಳಲು ಸಮಯವಿದೆ. ಕೇದಾರ್ ಜಾಧವ್ ಅವರ ಬಗ್ಗೆ ಚಿಂತೆಯಿಲ್ಲ. ಒಂದು ತಂಡವಾಗಿ ಎಲ್ಲರೂ ಒಗ್ಗಟ್ಟಿನಿಂದ ಆಡಿದಾಗ ಒತ್ತಡವನ್ನು ನಿಭಾಯಿಸಲು ಸಾಧ್ಯ ಎಂದಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ಜೋಫ್ರಾ ಆರ್ಚರ್

ಲಂಡನ್: ಇಂಗ್ಲೆಂಡ್ ತಂಡ ಮುಂದಿನ ಏಕದಿನ ವಿಶ್ವಕಪ್​ಗೆ ತಂಡದಲ್ಲಿ ಮೂರು ಅಚ್ಚರಿಯ ಬದಲಾವಣೆ ಮಾಡಿದೆ. ತಂಡದಲ್ಲಿದ್ದ ಏಕೈಕ ಎಡಗೈ ವೇಗದ ಬೌಲರ್ ಡೇವಿಡ್ ವಿಲ್ಲಿ ಅವರನ್ನು 15ರ ಬಳಗದಿಂದ ಕೈ ಬಿಡುವ ಮೂಲಕ ಅನಿರೀಕ್ಷಿತ ಬದಲಾವಣೆ ಮಾಡಿದೆ. ಅವರೊಂದಿಗೆ ಇನ್ನಿಬ್ಬರು ಆಟಗಾರರು ಸೇರಿದಂತೆ ಒಟ್ಟು ಮೂವರನ್ನು ತಂಡದಿಂದ ಕೈ ಬಿಟ್ಟಿದೆ. ವಿಲ್ಲಿ ಅವರ ಬದಲು ವೇಗದ ಬೌಲಿಂಗ್ ಆಲ್ರೌಂಡರ್ ಜೋಫ್ರಾ ಆರ್ಚರ್​ರನ್ನು ಸೇರ್ಪಡೆಗೊಳಿಸಿದೆ. ಉದ್ದೀಪನ ಕಳಂಕ ಎದುರಿಸಿರುವ ಸ್ಪೋಟಕ ಬ್ಯಾಟ್ಸ್​ಮನ್ ಅಲೆಕ್ಸ್ ಹ್ಯಾಲ್ಸ್ ಬದಲಿಗೆ ಬ್ಯಾಟ್ಸ್​ಮನ್ ಜೇಮ್್ಸ ವಿನ್ಸ್ ಹಾಗೂ ಜೋಯ್ ಡೆನ್ಲಿ ಬದಲಿಗೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಲಿಯಾಮ್ ಡಾಸನ್​ರನ್ನು ಸೇರಿಸಿದೆ.

Leave a Reply

Your email address will not be published. Required fields are marked *