ನವದೆಹಲಿ: ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸುವ ಬಗ್ಗೆ ನನ್ನ ವೈಯಕ್ತಿಕ ಟಿಪ್ಸ್‌ಗಳನ್ನು ನೀಡಲಿದ್ದೇನೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ನೆಟ್ಟಿಗರಿಂದ ಭರ್ಜರಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಕಳೆದ ವರ್ಷ ಪಟಾಕಿ ವಿರುದ್ಧ ಮಾತನಾಡಿ ಕೈಸುಟ್ಟುಕೊಂಡಿದ್ದ ಕೊಹ್ಲಿ, ಈ ಸಲವೂ ತಮ್ಮ ಹೇಳಿಕೆಯಿಂದ ಕಟು ಟೀಕೆಗಳನ್ನು ಎದುರಿಸಿದ್ದಾರೆ. ದೀಪಾವಳಿ ಬಗ್ಗೆ ಉಪದೇಶ ನೀಡುವ ಬದಲಾಗಿ ಟಿ20 ವಿಶ್ವಕಪ್‌ನತ್ತ ನಿಮ್ಮ ಗಮನವಿರಲಿ ಎಂದು ನೆಟ್ಟಿಗರು ಕೊಹ್ಲಿಗೆ ತಿರುಗೇಟು ನೀಡಿದ್ದಾರೆ.
‘ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಬೇಕೆಂಬುದನ್ನು ಜನರ ವಿವೇಚನೆಗೆ ಬಿಟ್ಟುಬಿಡಿ. ನೀವು ಟಿ20 ವಿಶ್ವಕಪ್‌ನತ್ತ ಗಮನಹರಿಸಿದರೆ ಸಾಕು’ ಎಂದು ಕ್ರಿಕೆಟ್ ಪ್ರೇಮಿಯೊಬ್ಬರು ಟ್ವೀಟಿಸಿದ್ದಾರೆ. ನೀವು ಮೊದಲು ಐಸಿಸಿ ಟ್ರೋಫಿ ಮತ್ತು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದು ತೋರಿಸಿ. ದೀಪಾವಳಿ ಹಬ್ಬ ಹೇಗೆ ಆಚರಿಸಬೇಕೆಂದು ನಮಗೆ ಗೊತ್ತಿದೆ ಎಂದು ಇನ್ನು ಕೆಲವರು ಕಟು ಮಾತಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ದೀಪಾವಳಿ ಹಬ್ಬ ಆಚರಿಸುವ ಬಗ್ಗೆ ನಮಗೆ ನಿಮ್ಮ ಟಿಪ್ಸ್ ಬೇಕಾಗಿಲ್ಲ. ನಿಮಗೆ ಬೇಕಿದ್ದರೆ, ನಾಯಕತ್ವವನ್ನು ಹೇಗೆ ನಿರ್ವಹಿಸುವುದು ಮತ್ತು ಐಪಿಎಲ್ ಪ್ರಶಸ್ತಿಯನ್ನು ಹೇಗೆ ಗೆಲ್ಲುವುದು ಎಂಬ ಬಗ್ಗೆ ನಾವು ಟಿಪ್ಸ್ ನೀಡಬಲ್ಲೆವು’ ಮತ್ತು ‘ಮೊದಲು ಟ್ರೋಫಿಗಳನ್ನು ಗೆದ್ದು ತೋರಿಸಿ, ನಂತರ ಬೇರೆಯವರಿಗೆ ಉಪದೇಶಗಳನ್ನು ನೀಡಿರಿ’ ಎಂದು ಇನ್ನು ಕೆಲವರು ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಡುವತ್ತ ಗಮನಹರಿಸದೆ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ಅಭಿಯಾನಗಳತ್ತ ಗಮನಹರಿಸಿರುವ ಕೊಹ್ಲಿ ನಡೆಯೂ ಹಲವು ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
CAPTAIN you should be concentrating on #T20WorldCup . Leave Diwali Celebrations to the wisdom of people. https://t.co/7MnNLh1uDg
— Pramod Kumar Singh (@SinghPramod2784) October 17, 2021
ಕೊಹ್ಲಿ ಜತೆಗೆ ಇತರ ಕೆಲ ಸೆಲೆಬ್ರಿಟಿಗಳೂ ದೀಪಾವಳಿ ಹಬ್ಬದ ಆಚರಣೆ ಬಗ್ಗೆ ಉಪದೇಶ ನೀಡುತ್ತಿರುವ ಬಗ್ಗೆಯೂ ಕೆಲವರು ಕಿಡಿ ಕಾರಿದ್ದು, ‘ಹಿಂದುಗಳು ಸಾವಿರಾರು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತ ಬರುತ್ತಿದ್ದಾರೆ. ಅವರಿಗೆ ಯಾವುದೇ ದುರಾಸೆಯ ಕ್ರಿಕೆಟಿಗನಿಂದ ಸಲಹೆಗಳು ಬೇಕಿಲ್ಲ’ ಎಂದಿದ್ದಾರೆ.
Can cricket buffs share a series of personal tips to @imVkohli on how to win in IPL!!!
Dont teach us Diwali! https://t.co/QAYKkYVWp6
— Major Madhan Kumar 🇮🇳 (@major_madhan) October 17, 2021
First win the cup for us! Make IPL meaningful for RCB fans… https://t.co/fPy0t3RaJT
— ರಂಗನ ಮಗಳು (@jagal_ganti) October 17, 2021
Hindus are celebrating Diwali for thousands of years. They don't need tips from a woke cricketer. https://t.co/pbbA8CL7rS
— 🚛 (@DriverRamudu) October 17, 2021
ಐಪಿಎಲ್ ಪ್ರಶಸ್ತಿ ಗೆಲುವಿನ ಬೆನ್ನಲ್ಲೇ ಮತ್ತೊಂದು ಗುಡ್ನ್ಯೂಸ್ ನೀಡಿದ ಧೋನಿ!