ವಿರಾಟ್ ಕೊಹ್ಲಿ ಶ್ರೀಮಂತ ಕ್ರಿಕೆಟಿಗ

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೀಮಂತ ಕ್ರಿಕೆಟಿಗ ಮತ್ತು ಭಾರತದ ಶ್ರೀಮಂತ ಕ್ರೀಡಾಪಟು ಎನಿಸಿದ್ದಾರೆ. ಫೋರ್ಬ್ಸ್ ಪ್ರಕಟಿಸಿರುವ 2019ರ ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಏಕೈಕ ಕ್ರಿಕೆಟಿಗ ಮತ್ತು ಭಾರತೀಯರೆನಿಸಿದ್ದಾರೆ. ಅತಿ ಹೆಚ್ಚು ಆದಾಯ ಗಳಿಸುವ ವಿಶ್ವದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ 100ನೇ ಸ್ಥಾನ ಪಡೆದಿದ್ದಾರೆ.

ಹಾಲಿ ವರ್ಷ ವಾರ್ಷಿಕ 173.41 ಕೋಟಿ ರೂಪಾಯಿ (25 ದಶಲಕ್ಷ ಯುಎಸ್ ಡಾಲರ್) ಆದಾಯ ಹೊಂದಿದ್ದರೂ ವಿರಾಟ್ ಕೊಹ್ಲಿ ಕಳೆದ ವರ್ಷಕ್ಕಿಂತ 17 ಸ್ಥಾನ ಕುಸಿತ ಕಂಡಿದ್ದಾರೆ. ಬಾರ್ಸಿಲೋನಾ ಹಾಗೂ ಅರ್ಜೆಂಟೀನಾ ಫುಟ್​ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಮೆಸ್ಸಿ ಹೂಡಿಕೆ ಹಾಗೂ ಸಂಭಾವನೆಯಿಂದ 880 ಕೋಟಿ ರೂ. (127 ದಶಲಕ್ಷ ಯುಎಸ್ ಡಾಲರ್) ಆದಾಯ ಹೊಂದಿದ್ದಾರೆ. ಕಳೆದ ವರ್ಷ ಅಗ್ರಸ್ಥಾನದಲ್ಲಿದ್ದ ಅಮೆರಿಕದ ಬಾಕ್ಸರ್ ಫ್ಲಾಯ್್ಡ ಮೇವೆದರ್ ನಿವೃತ್ತಿಯಿಂದ ಮೆಸ್ಸಿಗೆ ವಿಶ್ವದ ಶ್ರೀಮಂತ ಕ್ರೀಡಾಪಟು ಎಂಬ ಪಟ್ಟ ಒಲಿದಿದೆ. ಪೋರ್ಚುಗಲ್-ಜುವೆಂಟಸ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ (756 ಕೋಟಿ ರೂ.) ಮತ್ತು ಬ್ರೆಜಿಲ್ ತಾರೆ ನೇಮರ್ (728 ಕೋಟಿ ರೂ.) ಕ್ರಮವಾಗಿ 2-3ನೇ ಸ್ಥಾನದಲ್ಲಿದ್ದಾರೆ. ಟೆನಿಸ್ ತಾರೆ ರೋಜರ್ ಫೆಡರರ್ (648 ಕೋಟಿ ರೂ.) 5ನೇ ಸ್ಥಾನದಲ್ಲಿದ್ದಾರೆ. 63ನೇ ಸ್ಥಾನದಲ್ಲಿರುವ ಟೆನಿಸ್ ತಾರೆ ಸೆರೇನಾ ವಿಲಿಯಮ್್ಸ (202 ಕೋಟಿ ರೂ.) ಅಗ್ರ 100ರಲ್ಲಿರುವ ಏಕೈಕ ಮಹಿಳಾ ಕ್ರೀಡಾಪಟುವಾಗಿದ್ದಾರೆ. (ಏಜೆನ್ಸೀಸ್​)