ಆಸ್ಕರ್ ಸ್ವೀಕಾರ ಭಾಷಣವನ್ನು ಸಿದ್ಧಪಡಿಸುವ ಮುನ್ನ ಈ ವಿಡಿಯೋ ಪರಿಶೀಲಿಸಿ: ವಿರಾಟ್​

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ರಂಗೀನ್​ ದುನಿಯಾಗೆ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ‘10 ವರ್ಷಗಳ ನಂತರ ಮತ್ತೊಂದು ಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿದ್ದೇನೆ’ ಎಂದು ಈ ಹಿಂದೆ ಮಾಡಿದ್ದ ಟ್ವೀಟ್​ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕುವುದರ ಜತೆಗೆ ಗೊಂದಲವನ್ನೂ ಸೃಷ್ಟಿಸಿತ್ತು.

ಇದೀಗ ಕೊಹ್ಲಿ ಅವರು ತಮ್ಮ ಟ್ವಿಟರ್​ನಲ್ಲಿ ಟ್ರೇಲರ್​ ಒಂದನ್ನು ಶೇರ್​ ಮಾಡಿದ್ದಾರೆ. ಹಾಲಿವುಡ್​ನ ಹಿಟ್ ಮ್ಯಾನ್ ಚಿತ್ರಗಳನ್ನು ನೆನಪಿಸುವಂತಹ ಸಾಹಸ ದೃಶ್ಯಗಳು ಟ್ರೇಲರ್​​​ನಲ್ಲಿವೆ. ಕೊಹ್ಲಿ ಜಾಂಬಿಸ್, ಡೈನೋಸರ್ಸ್, ಸೂಪರ್ ವಿಲನ್ಸ್​ಗಳೊಂದಿಗೆ ಫೈಟ್​ ಮಾಡಿದ್ದಾರೆ. ಆದರೆ, ಇದು ನಿಜಕ್ಕೂ ಚಿತ್ರದ ಟ್ರೇಲರೋ..? ಅಥವಾ ಯಾವುದಾದರೂ ಜಾಹೀರಾತಿನ ಟ್ರೇಲರೋ ಎಂಬ ಅನುಮಾನವೂ ಎದ್ದಿದೆ.

ಈ ಮಧ್ಯೆ ಎಂದಿನಂತೆ ಕೊಹ್ಲಿ ಅವರು ನಾನು ನನ್ನ ಆಸ್ಕರ್ ಸ್ವೀಕಾರ ಭಾಷಣವನ್ನು ಸಿದ್ಧಪಡಿಸುವ ಮುನ್ನ ಅದನ್ನು ಪರಿಶೀಲಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್​)