More

    ಜಾಲತಾಣದಲ್ಲಿ ಹೆಚ್ಚು ಹುಡುಕಾಡಿದ ಪ್ರಮುಖ 10 ಕ್ರಿಕೆಟಿಗರಲ್ಲಿ ಭಾರತೀಯರದ್ದೇ ಸಿಂಹಪಾಲು: ಇಲ್ಲೂ ವಿರಾಟ್​ ನಂ.1..!

    ನವದೆಹಲಿ: ಟೀಮ್​ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಮತ್ತು ಮಾಜಿ ನಾಯಕ ಎಂ.ಎಸ್​.ಧೋನಿ ಅವರು 2015 ರಿಂದ 2019ರವರೆಗೆ ಜಾಗತಿಕವಾಗಿ ಆನ್​ಲೈನ್​ನಲ್ಲಿ ಹೆಚ್ಚು ಹುಡುಕಾಡಿದ ಕ್ರಿಕೆಟಿಗರಾಗಿದ್ದಾರೆ​ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.

    ಸೀಮ್ರುಶ್​(SEMrush) ಎಂಬ ಸಾಫ್ಟ್​ವೇರ್​ ಕಂಪನಿ ನಡೆಸಿದ ಸಂಶೋಧನೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಧೋನಿಗೆ ಹೋಲಿಸಿಕೊಂಡರೆ ವಿರಾಟ್​ ಕೊಹ್ಲಿ ಅವರನ್ನು ಹೆಚ್ಚು ಜಾಲತಾಣದಲ್ಲಿ ಹುಡುಕಾಡಲಾಗಿದೆ. ಅಂಕಿ ಅಂಶದ ಪ್ರಕಾರ ಡಿಸೆಂಬರ್​ 2015ರಿಂದ ಡಿಸೆಂಬರ್​ 2019ರವರೆಗೆ ಬರೋಬ್ಬರಿ 1.76 ಮಿಲಿಯನ್ ಬಾರಿ ಕೊಹ್ಲಿಯನ್ನು ಹುಡುಕಾಡಿದ್ದಾರೆ.

    ಅತಿ ಹೆಚ್ಚು ಹುಡುಕಾಡಿದವರ ಪಟ್ಟಿಯಲ್ಲಿ ಭಾರತದ 7 ಆಟಗಾರರು ಸ್ಥಾನ ಪಡೆದಿದ್ದಾರೆ. ವಿರಾಟ್​ ಹೊರತುಪಡಿಸಿದರೆ, ಕ್ರಮವಾಗಿ ಎಂ.ಎಸ್​.ಧೋನಿ(2ನೇ ಸ್ಥಾನ), ರೋಹಿತ್​ ಶರ್ಮ(3), ಸಚಿನ್​ ತೆಂಡೂಲ್ಕರ್(4)​, ಹಾರ್ದಿಕ್​ ಪಾಂಡ್ಯ(5) ಮತ್ತು ಯುವರಾಜ್​ ಸಿಂಗ್(6)​ ಅವರನ್ನು ಹೆಚ್ಚು ಹುಡುಕಾಟ ನಡೆಸಲಾಗಿದೆ.

    ಭಾರತೀಯ ಆಟಗಾರರನ್ನು ಹೊರತುಪಡಿಸಿದರೆ, ಸ್ಟೀವ್​ ಸ್ಮಿತ್​, ಕ್ರಿಸ್​ ಗೇಲ್​ ಮತ್ತು ಎಬಿ ಡಿವಿಲಿಯರ್ಸ್​ ವಿದೇಶಿ ಆಟಗಾರರು ಪ್ರಮುಖ 10ರ ಸ್ಥಾನ ಪಡೆದಿದ್ದಾರೆ. ಐಪಿಎಲ್​ನಲ್ಲಿ ತಮ್ಮ ಪ್ರಖ್ಯಾತಿಯಿಂದ ಭಾರತೀಯರ ಮನಸ್ಸಿನಲ್ಲಿ ಉಳಿದಿರುವ ಕಾರಣದಿಂದಲೂ ಇವರು ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts