ಈ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಕೊಹ್ಲಿ ಎಂದ ಆಸ್ಟ್ರೇಲಿಯನ್‌ ಮಾಜಿ ಆಟಗಾರ

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸದ್ಯದ ಪೀಳಿಗೆಯ ಉತ್ತಮ ಬ್ಯಾಟ್ಸ್‌ಮನ್‌ ಎಂದು ಆಸ್ಟ್ರೇಲಿಯದ ಮಾಜಿ ಲೆಗ್‌ಸ್ಪಿನ್ನರ್‌ ಶೇನ್‌ ವಾರ್ನ್​ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟ್ಸ್‌ಮನ್‌ ಎಂದೇ ಹೆಸರಾಗಿರುವ ವೀವ್‌ ರಿಚರ್ಡ್ಸ್ ಅವರಿಗೆ ಗಂಭೀರ ಸವಾಲನ್ನು ವಿರಾಟ್‌ ಕೊಹ್ಲಿ ಹಾಕಬಲ್ಲರು ಎಂದು ಕೊಹ್ಲಿಯನ್ನು ವಾರ್ನ್​ ಹೊಗಳಿದ್ದಾರೆ.

ವಿರಾಟ್ ಕೊಹ್ಲಿ ಅವರು ಸ್ಫೋಟಕ ಆಟಗಾರ. ನಮಗೆಲ್ಲರಿಗೂ ತಿಳಿದಿರುವಂತೆ ಡಾನ್‌ ಬ್ರಾಡ್ಮನ್‌ ಅವರು ಸಾರ್ವಕಾಲಿಕ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿದ್ದರು ಎಂಬುದು ತಿಳಿದಿದೆ. ಹಾಗಾಗಿ ಮುಂದಿನ ಪೀಳಿಗೆಯ ಉತ್ತಮ ಬ್ಯಾಟ್ಸಮನ್‌ ಯಾರು ಎಂಬುದು ಚರ್ಚಿತ ವಿಷಯವಾಗಿದೆ. ನನ್ನ ಮಟ್ಟಿಗೆ ವೀವ್‌ ರಿಚರ್ಡ್ಸ್‌ ನಾನು ನೋಡಿದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿದ್ದರು. ಅವರಿಗಿಂತ ಉತ್ತಮರನ್ನು ನಾನು ನೋಡಿಯೇ ಇಲ್ಲ ಎಂದು ವಾರ್ನ್​ ತಿಳಿಸಿದ್ದಾರೆ.

ವಿರಾಟ್​ ಆಟ ಶುರುಮಾಡಿದಾಗ ಬೌಲಿಂಗ್​ ಮಾಡುತ್ತಾ ನಾನು ಅವರನ್ನು ನೋಡುತ್ತಿದ್ದೆ. ನಾನು ಅವರನ್ನು ಔಟ್ ಮಾಡಿದ್ದೆನೇನೋ ನನಗೆ ಗೊತ್ತಿಲ್ಲ… ಅದು ಖಚಿತವಾಗಿಲ್ಲ. ಆದರೆ ನನಗೆ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆ ವೇಳೆಯಲ್ಲಿ ವೀವ್‌ ರಿಚರ್ಡ್‌ಗೆ ಸವಾಲೊಡ್ಡಬಲ್ಲರು ಎನಿಸಿತು. ವೀವ್‌ ಕೂಡ ನಂಬಲಸಾಧ್ಯವಾದವರು. ಆದರೆ, ಕೊಹ್ಲಿ ದಾಖಲೆ, ಮುಖ್ಯವಾಗಿ ಚೇಸಿಂಗ್‌ನಲ್ಲಿ ಆತ 24 ಅಥವಾ 25 ಶತಕಗಳನ್ನು ಗಳಿಸಿರಬಹುದು ಮತ್ತು ಬಹುಪಾಲು ವಿಜಯ ಸಾಧಿಸಿರಬಹುದು ಎಂದು ಹೇಳಿದ್ದಾರೆ.

ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಭಾರತ ಸೋಲನ್ನೊಪ್ಪಿಕೊಂಡಿದ್ದರೂ ಕೂಡ, ಕೊಹ್ಲಿ ಮಾತ್ರ ತಮ್ಮ ರನ್‌ಗಳ ಭೇಟೆಯನ್ನು ಮುಂದುವರಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ 41 ಶತಕಗಳು ಇವರ ಹೆಸರಿನಲ್ಲಿವೆ. (ಏಜೆನ್ಸೀಸ್)

One Reply to “ಈ ಪೀಳಿಗೆಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಕೊಹ್ಲಿ ಎಂದ ಆಸ್ಟ್ರೇಲಿಯನ್‌ ಮಾಜಿ ಆಟಗಾರ”

Comments are closed.