ಲಾಕ್​ಡೌನ್​ನಲ್ಲೂ ಕೊಹ್ಲಿ ಗಳಿಸಿದ್ದಾರೆ 3.6 ಕೋಟಿ ರೂ. !

ಬೆಂಗಳೂರು: ಕರೊನಾ ವೈರಸ್ ಹಾವಳಿಯಿಂದಾಗಿ ಕ್ರೀಡಾ ಜಗತ್ತು ಸ್ತಬ್ಧಗೊಂಡಿರಬಹುದು. ಆದರೆ ಸ್ಟಾರ್ ಕ್ರೀಡಾಪಟುಗಳ ಸಂಪಾದನೆ ಈಗಲೂ ನಿಂತಿಲ್ಲ. ಲಾಕ್​ಡೌನ್ ನಡುವೆಯೂ ಇನ್​ಸ್ಟಾಗ್ರಾಂನ ಪ್ರಾಯೋಜಿತ ಪೋಸ್ಟ್​ಗಳ ಮೂಲಕ ಭರ್ಜರಿ ಹಣ ಸಂಪಾದನೆ ಮಾಡುತ್ತಿರುವ ವಿಶ್ವದ ಅಗ್ರ 10 ಕ್ರೀಡಾಪಟುಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಪ್ರತಿ ಪೋಸ್ಟ್​ಗೆ 1.20 ಕೋಟಿ ರೂ.ನಂತೆ ಲಾಕ್​ಡೌನ್ ಅವಧಿಯಲ್ಲೂ ಒಟ್ಟು 3.62 ಕೋಟಿ ರೂಪಾಯಿ ಸಂಪಾದಿಸಿರುವ ಕೊಹ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ. ಮಾರ್ಚ್ 12ರಿಂದ ಮೇ … Continue reading ಲಾಕ್​ಡೌನ್​ನಲ್ಲೂ ಕೊಹ್ಲಿ ಗಳಿಸಿದ್ದಾರೆ 3.6 ಕೋಟಿ ರೂ. !