ಕೊಹ್ಲಿಗೆ ‘ಮಂಗಳ’ವಾರ: ಐಸಿಸಿ ಟೆಸ್ಟ್​- ಏಕದಿನ ಕ್ರಿಕೆಟರ್​ ಕೀರ್ತಿ ಜತೆಗೇ, ಐಸಿಸಿ ಕ್ಯಾಪ್ಟನ್​ ಗರಿ

ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿಗೆ ಮಂಗಳವಾರ ಅತ್ಯಂತ ಮಂಗಳ ತಂದಿದೆ. ಇಂದು ಹಲವು ಗೌರವಗಳಿಗೆ ಪಾತ್ರರಾಗಿಗಿರುವ ಅವರು ದಾಖಲೆ ಮೆರೆದಿದ್ದಾರೆ.

ಐಸಿಸಿ ವರ್ಷದ ಕ್ರಿಕೆಟರ್​ ಗೌರವಕ್ಕೆ ಪಾತ್ರವಾದ ಕೊಹ್ಲಿ ಭಾರತದ ಕ್ರಿಕೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸರ್​ ಗರ್​ಫೀಲ್ಡ್​ ಸೋಬರ್​ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದೇ ವೇಳೆ, ಐಸಿಸಿ ಪುರುಷರ ವರ್ಷದ ಟೆಸ್ಟ್​ ಆಟಗಾರ, ಐಸಿಸಿ ವರ್ಷದ ಏಕದಿನ ಆಟಗಾರ ಎಂಬ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.

30ರ ಹರೆಯದ ಕೊಹ್ಲಿ ಇದೇ ವೇಳೆ ಮತ್ತೊಂದು ದೊಡ್ಡ ಕೀರ್ತಿಯನ್ನೂ ತಮ್ಮದಾಗಿಸಿಕೊಂಡರು. 2018ರ ಐಸಿಸಿ ಟೆಸ್ಟ್​ ಮತ್ತು ಏಕದಿನ ತಂಡಕ್ಕೆ ಅವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ನಲ್ಲಿ ತೋರಿದ ಅದ್ಭುತ ಪ್ರದರ್ಶನ ಅವರಿಗೆ ಈ ಕೀರ್ತಿ ತಂದು ಕೊಟ್ಟಿದೆ.
ಇದರ ಜತೆಗೆ, ಟೀಂ ಇಂಡಿಯಾದ ಜಸ್ಪ್ರಿತ್​ ಭೂಮ್ರಾ (ಬೌಲಿಂಗ್​), ರಿಷಭ್​ ಪಂತ್​ (ವಿಕೆಟ್​ ಕೀಪರ್​) ಐಸಿಸಿ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರೋಹಿತ್​ ಶರ್ಮಾ ಮತ್ತು ಕುಲದೀಪ್​ ಯಾದವ್​ ಅವರು ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.