ಚಿತ್ರರಂಗಕ್ಕೆ ಕೊಹ್ಲಿ ಎಂಟ್ರಿ?

‘ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆಯೇ?’ – ಹೀಗೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ವಿರಾಟ್ ಇತ್ತೀಚೆಗೆ ಮಾಡಿರುವ ಟ್ವೀಟ್ ಇಂಥದ್ದೊಂದು ಅನುಮಾನ ಹುಟ್ಟುಹಾಕಿದೆ. ವಿರಾಟ್ ‘ಟ್ರೇಲರ್’ ಶೀರ್ಷಿಕೆಯ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.! ಈ ಚಿತ್ರಕ್ಕೆ ‘ದಿ ಮೂವಿ’ ಎನ್ನುವ ಅಡಿಬರಹವನ್ನೂ ನೀಡಲಾಗಿದೆ. ಈ ಪೋಸ್ಟರ್​ನಲ್ಲಿ ವಿರಾಟ್ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರ ಸೆ.28ರಂದು ತೆರೆಕಾಣಲಿದೆಯಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿರಾಟ್, ‘10 ವರ್ಷಗಳ ನಂತರ ಮತ್ತೊಂದು ಕ್ಷೇತ್ರಕ್ಕೆ ಪ್ರವೇಶ ಪಡೆಯುತ್ತಿದ್ದೇನೆ’ ಎಂದಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕುವುದರ ಜತೆಗೆ ಗೊಂದಲವನ್ನೂ ಸೃಷ್ಟಿಸಿದೆ.

ವಿರಾಟ್ ಸಿನಿಮಾ ಮಾಡುತ್ತಿಲ್ಲ ಎಂಬುದು ಕೆಲವರ ವಾದ. ಹಾಗಾದರೆ ಈ ಟ್ರೇಲರ್ ಏನು? ಯಾವುದೋ ಫ್ಯಾಷನ್ ಬ್ರಾ್ಯಂಡ್​ನ ಪ್ರಚಾರಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಕೆಲ ಹಿಂಬಾಲಕರು ಅಭಿಪ್ರಾಯ ಮುಂದಿಟ್ಟಿದ್ದಾರೆ.