ಮಡಿಕೇರಿ: ಕೊಡಗು ಮೂಲದ ಕರೊನಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ 300 ಮಂದಿಯಲ್ಲಿ ಕೇವಲ 5 ಮಂದಿ ಮಾತ್ರ ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ವಿದೇಶದಿಂದ ಬಂದ ಆತ ಬೆಂಗಳೂರಿನ ಬ್ಯಾಟರಾಯನಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರಾಜಹಂಸ ಬಸ್ನಲ್ಲಿ ಕೊಡಗಿಗೆ ಆಗಮಿಸಿದ್ದ. ಆ ಬಸ್ನಲ್ಲಿ 32 ಮಂದಿ ಪ್ರಯಾಣಿಕರು ಇದ್ದರು. ಅಲ್ಲದೆ ಬಸ್ ಮದ್ದೂರಿನಲ್ಲಿ ಹೋಟೆಲ್ನಲ್ಲಿ ನಿಲುಗಡೆ ಮಾಡಿತ್ತು. ಹೀಗಾಗಿ ಆತ ಅಂದಾಜು 300 ಮಂದಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ. ಇವರಲ್ಲಿ ಕೇವಲ 5 ಮಂದಿ ಮಾತ್ರ ತಪಾಸಣೆಗೆ ಒಳಗಾಗಿದ್ದಾರೆ. ಇವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಪರೀಕ್ಷೆಗೆ ಕಳುಹಿಸಲಾಗಿದೆ ಶೀಘ್ರದಲ್ಲೇ ವರದಿ ಬರಲಿದೆ ಎಂದರು.
ವಿರಾಜಪೇಟೆಯ ಮೂವರು ಶಿಕ್ಷಕರು ಸಂಪರ್ಕಕ್ಕೆ ಬಂದಿದ್ದರು: ಸೋಂಕಿತ ವ್ಯಕ್ತಿಯೊಂದಿಗೆ ಬೆಂಗಳೂರಿನಿಂದ ಮಡಿಕೇರಿಗೆ ಬಂದ ರಾಜಹಂಸ ಬಸ್ನಲ್ಲಿ ವಿರಾಜಪೇಟೆ ಸರ್ಕಾರಿ ಶಾಲೆಯ ಮೂವರು ಶಿಕ್ಷಕರು ಇದ್ದರು. ಅವರು ಬಸ್ ಇಳಿದು ನೇರವಾಗಿ ಶಾಲೆಗೆ ತೆರಳಿದ್ದರು. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ವಿರಾಜಪೇಟೆಯಲ್ಲಿ ಶಿಕ್ಷಕರೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ತಹಸೀಲ್ದಾರ್ ವಿರಾಜಪೇಟೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ವಿರಾಜಪೇಟೆಯಲ್ಲಿ 75 ಮನೆಗಳು ಇದ್ದು ಯಾರು ಕೂಡ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಅಂಗಡಿಗಳನ್ನು ಮುಚ್ಚಲಾಗಿದೆ. (ದಿಗ್ವಿಜಯ ನ್ಯೂಸ್)
https://www.vijayavani.net/coronastopkarona-corona-marriage-at-chitradurga-molkalmuru/