VIDEO| ನಂಬಿಕೆ ಭಾಗವಾಗಿ ಆನೆ ವಿಗ್ರಹದಡಿ ನುಸುಳಲು ಹೋಗಿ ಸಿಲುಕಿ ಪರದಾಡಿದ ಮಹಿಳೆ ಕೊನೆಗೂ ಹೊರಬಂದಿದ್ದು ಹೀಗೆ….

ಅಹಮದಾಬಾದ್​: ಭಾರತದಂತಹ ಆಧ್ಯಾತ್ಮಿಕ ದೇಶದಲ್ಲಿ ಧಾರ್ಮಿಕ ಆಚರಣೆಗಳು ಸರ್ವೇ ಸಾಮಾನ್ಯ. ತಮ್ಮ ಆಸೆಗಳ ಪೂರೈಕೆಗಾಗಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಜನರು ದೇವರ ಮೊರೆ ಹೋಗುತ್ತಾರೆ. ಅನೇಕ ಚಿತ್ರ-ವಿಚಿತ್ರವಾದ ಆಚರಣೆಗಳು ಹಾಗೂ ನಂಬಿಕೆಗಳು ನಮ್ಮ ದೇಶದಲ್ಲಿವೆ. ಅವುಗಳಲ್ಲಿ ಒಂದು ತೆರನಾದ ಆಚರಣೆಯನ್ನು ಪಾಲಿಸಲು ಹೋಗಿ ಮಹಿಳೆಯೊಬ್ಬಳು ನಗೆಪಾಟಿಲಿಗೀಡಾಗಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಗುಜರಾತ್​ನ ದೇವಸ್ಥಾನವೊಂದರಲ್ಲಿ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಮುಂದೆ ಓದಿ… ಹರಕೆಯ ಅಥವಾ ನಂಬಿಕೆಯ ಹಾಗೂ ಆಚರಣೆಯ ಭಾಗವಾಗಿ ದೇವಸ್ಥಾನದ ಎದುರು ಇರುವ ಆನೆಯ ವಿಗ್ರಹದ ಕಾಲುಗಳ ಅಡಿಯಲ್ಲಿ ನುಗ್ಗಲು ಪ್ರಯತ್ನಿಸಿದ ಮಹಿಳೆಯೊಬ್ಬಳು ಸ್ವಲ್ಪ ದಪ್ಪವಾಗಿದ್ದರಿಂದ ಅಲ್ಲಿಯೇ ಸಿಲುಕಿ ಕೆಲಕಾಲ ಪರದಾಡಿದ ಪ್ರಸಂಗ ನಡೆದಿದೆ. ಕೊನೆಗೆ ಇತರೆ ಭಕ್ತರ ಸಹಾಯದಿಂದ ಆಕೆ ಯಶಸ್ವಿಯಾಗಿ ಹೊರಬಂದ ಸಂಪೂರ್ಣ ಸನ್ನಿವೇಶ ಮತ್ತೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋ ರಾಜೇಶ್​ ಅರೋರ ಎಂಬುವರ ಫೇಸ್​ಬುಕ್​ ಖಾತೆಯಲ್ಲಿ ಅಪ್​ಲೋಡ್​ ಆಗಿದ್ದು, ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದುವರೆಗೂ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್​ ಮಾಡಿದ್ದಾರೆ. 400 ಕ್ಕೂ ಹೆಚ್ಚು ಮಂದಿ ಕಾಮೆಂಟ್ಸ್​ ಮಾಡಿದ್ದು, ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಶೇರ್​ ಮಾಡಿದ್ದಾರೆ. (ಏಜೆನ್ಸೀಸ್​​)

ये सैंपल अब कभी नहीं जाएगी मन्नत मांगने।😯😯

Rajesh Arora ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 21, 2019

Leave a Reply

Your email address will not be published. Required fields are marked *