ವೈಲ್ಡ್ ಅನಿಮಲ್ ಎಂದಾಕ್ಷಣ ನೆನಪಿಗೆ ಬರುವಂತದ್ದೇ ಸಿಂಹ, ಹುಲಿ, ಚಿರತೆ. ಕಾಡಿನ ರಾಜ ಸಿಂಹ ಹೆಚ್ಚು ಶಕ್ತಿಶಾಲಿಯಾಗಿರುವುದರಿಂದ ಎಲ್ಲ ಪ್ರಾಣಿಗಳನ್ನು ನಿಯಂತ್ರಣದಲ್ಲಿ ಇಟ್ಟಿರುತ್ತದೆ ಎಂದು ಹೇಳುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು(Viral Video) ಇದಕ್ಕೆ ವ್ಯತಿರಿಕ್ತವಾಗಿದೆ. ಈ ವಿಡಿಯೋದಲ್ಲಿ ಹುಲಿಗಳು ಸಿಂಹದ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಬಹುದು.
ಇದನ್ನು ಓದಿ: ಕಾಫಿಗಾಗಿ ಅಪಾಯದ ಅಂಚಿಗೆ ಜನರ ಭೇಟಿ; Viral Video ನೋಡಿ ನೆಟ್ಟಿಗರಿಗೆ ಶಾಕ್
ವೈರಲ್ ವಿಡಿಯೋದಲ್ಲಿ ಸಿಂಹ ಮತ್ತು ಹುಲಿಗಳನ್ನು ಒಂದೇ ಬೋನಿನಲ್ಲಿ ಬಂಧಿಸಿರುವುದನ್ನು ನೋಡಬಹುದು. ಆರಂಭದಲ್ಲಿ ಎಲ್ಲವೂ ಶಾಂತವಾಗಿ ಮತ್ತು ಸಾಮಾನ್ಯವಾಗಿ ಇರುವಂತೆ ಕಾಣುತ್ತದೆ. ಮೊದಲಿಗೆ ಹುಲಿ ಮತ್ತು ಸಿಂಹ ಪರಸ್ಪರ ದೂರವಿರುವುದನ್ನು ಕಾಣಬಹುದು. ಆದರೆ ಇದ್ದಕ್ಕಿದ್ದಂತೆ ಹುಲಿಗಳ ಗುಂಪೊಂದು ಸಿಂಹದ ಮೇಲೆ ದಾಳಿ ಮಾಡುತ್ತದೆ. ಐದು ಹುಲಿಗಳು ಒಟ್ಟಾಗಿ ಸಿಂಹವನ್ನು ಸುತ್ತುವರೆದು ಹೊಡೆಯಲು ಪ್ರಾರಂಭಿಸುತ್ತವೆ. ಸಿಂಹವು ಏಕಾಂಗಿಯಾಗಿ ಹುಲಿಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಕ್ರಮೇಣ ಸಿಂಹವು ದುರ್ಬಲವಾಗುತ್ತ ಸುಮ್ಮನಾಗುವುದನ್ನು ಕಾಣಬಹುದು.
ವಿಡಿಯೋ ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಹುಲಿಗಳ ಗುಂಪು ಸಿಂಹವನ್ನು ಹೇಗೆ ಸೋಲಿಸಿತು, ಒಂದೇ ಸಿಂಹವು ಹುಲಿಗಳೊಂದಿಗೆ ಸ್ಪರ್ಧಿಸುವುದಿಲ್ಲ ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ, ಪ್ರಾಣಿಗಳ ನಡುವಿನ ನಿಜವಾದ ಹೋರಾಟವನ್ನು ತೋರಿಸುತ್ತದೆ, ಸಿಂಹ ಮತ್ತು ಹುಲಿ ಜಗಳವಾಡುತ್ತಿಲ್ಲ ಆದರೆ ಆಟವಾಡುತ್ತಿವೆ ಎಂದು ಕಾಮೆಂಟ್ ಮಾಡಿದ್ದಾರೆ.
ಮಹಿಳೆಯ ಕೈಯಿಂದ ಐಫೋನ್ ಕಸಿದುಕೊಂಡ ಕೋತಿ; Phone ಹಿಂಪಡೆಯಲು ಮಾಡಿದ ಸರ್ಕಸ್ Video Viral