More

  ವ್ಯೂವ್ಸ್​, ಲೈಕ್ಸ್​ಗಾಗಿ ಇಂತಹ ಕೀಳುಮಟ್ಟಕ್ಕೆ ಇಳೀತಾರಾ? ಪಬ್ಲಿಕ್​ನಲ್ಲೇ ಇದೆಂಥಾ ಅಸಹ್ಯ!

  ಮುಂಬೈ: ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯನ್ನು ಸಾರ್ವಜನಿಕವಾಗಿ ಪ್ರಾಣಿಯಂತೆ ನಡೆಸಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.

  ಪ್ರಾಣಿಯಂತೆ ಪೋಸ್ ಕೊಡುತ್ತಿರುವ ಮಹಿಳೆ, ತನ್ನ ಕುತ್ತಿಗೆಯ ಸುತ್ತ ನಾಯಿಯ ಕಾಲರ್ ಸಹ ಹೊಂದಿದ್ದಾಳೆ. ಮುಂಬೈನ ಮೀರಾ-ಭಾಯಂದರ್ ಪ್ರದೇಶದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯೂವ್ಸ್​ ಮತ್ತು ಲೈಕ್ಸ್​ಗಾಗಿ ಈ ವಿಡಿಯೋ ಪೋಸ್ಟ್‌ ಮಾಡಿದ್ದಾರಾ? ಅಥವಾ ಪ್ರಾಣಿ ಹಿಂಸೆಯ ವಿರುದ್ಧ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾರಾ? ಎಂಬುದು ಅಸ್ಪಷ್ಟವಾಗಿದೆ. ಆದರೂ ಜಾಲತಾಣದಲ್ಲಿ ಈ ವಿಡಿಯೋ ಆಕ್ರೋಶಕ್ಕೆ ಗುರಿಯಾಗಿದೆ.

  ವಿಡಿಯೋದಲ್ಲಿ ಏನಿದೆ?
  ವೈರಲ್ ವಿಡಿಯೋದಲ್ಲಿ ಕಪ್ಪು ಬಣ್ಣದ ತುಂಡುಡುಗೆ ಧರಿಸಿರುವ ಮಹಿಳೆಯೊಬ್ಬಳು ನಾಲ್ಕು ಕಾಲಿನ ಪ್ರಾಣಿಯಂತೆ ನಟಿಸುತ್ತಿರುವ ದೃಶ್ಯವಿದೆ. ಮಹಿಳೆ ನಾಯಿಯ ಕಾಲರ್ ಧರಿಸಿದ್ದಾಳೆ. ಮತ್ತೊಬ್ಬ ಮಹಿಳೆ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಹಿಡಿದುಕೊಂಡು ರಸ್ತೆಯಲ್ಲಿ ನಡೆಯುತ್ತಿರುವುದು ಕಾಣಿಸುತ್ತದೆ. ಜನನಿಬಿಡ ರಸ್ತೆಯಲ್ಲೇ ಈ ವಿಡಿಯೋ ಸೆರೆಹಿಡಿಯಲಾಗಿದೆ. ಅಲ್ಲಿ ನೆರೆದಿದ್ದ ಜನರು ಮಹಿಳೆಯರಿಬ್ಬರನ್ನು ಅಚ್ಚರಿಯಿಂದ ನೋಡುವ ದೃಶ್ಯವು ಸಹ ಇದೆ.

  ಎಕ್ಸ್ ಖಾತೆಯಲ್ಲಿ ವಿಡಿಯೋನ್ನು ಹಂಚಿಕೊಂಡಿರುವ ವ್ಯಕ್ತಿ, ಮುಂಬೈಗೆ ಏನಾಯಿತು? ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವೀಕ್ಷಣೆ ಗಿಟ್ಟಿಸಲು ಜನರು ಹೇಗೆ ಇಂತಹ ಕೆಳಮಟ್ಟಕ್ಕೆ ಇಳಿಯಬಹುದಾ? ಈ ವಿಲಕ್ಷಣ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರೊಬ್ಬರು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮನವಿ ಮಾಡಿದ್ದಾರೆ.

  ವಿಡಿಯೋ ನೋಡಿದ ನೆಟ್ಟಿಗರು ಮಹಿಳೆರನ್ನು ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಅತಿರೇಕದ ಕ್ರಮ ಸರಿಯಲ್ಲ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕು ಮತ್ತು ಇದ್ದು ಹುಚ್ಚುತನದ ಪರಮಾವಧಿ ಎಂದೆಲ್ಲಾ ಟ್ವೀಟ್​ ಮೂಲಕ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

  ನನ್ನ ಲವರ್​ಗೆ ಎಕ್ಸಾಂ ಇದೆ ಶುಭಕೋರಿ ಎಂದ ಅಭಿಮಾನಿ: ಕಿಚ್ಚನ ಪ್ರತಿಕ್ರಿಯೆ ವೈರಲ್​

  ಪ್ರಭಾಸ್ ಜಾತಕ ಸರಿಯಿಲ್ಲ! ನನ್ನ ಹತ್ರ ಸಾಕ್ಷಿ ಇದೆ; ಮತ್ತೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ವೇಣುಸ್ವಾಮಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts