VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಹೈದರಾಬಾದ್​: ಸಾಮಾನ್ಯ ಆಟೋವೊಂದರಲ್ಲಿ ಎಷ್ಟು ಮಂದಿ ಪ್ರಯಾಣಿಸಬಹುದು ಎಂದು ಕೇಳಿದರೆ 4,5,7 ಅಥವಾ ಹೆಚ್ಚೆಂದರೆ 10 ಮಂದಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಒಂದೇ ಆಟೋದಲ್ಲಿ ಬರೋಬ್ಬರಿ 24 ಮಂದಿ ಪ್ರಯಾಣಿಸುತ್ತಿದ್ದರು ಎಂದರೆ ನೀವು ನಂಬಲೇ ಬೇಕು. ಅದರ ಒಂದು ವಿಡಿಯೋ ಝಲಕ್​ ಕೆಳಗಿದ್ದು, ಅದನ್ನು ನೋಡಿದವರು ಒಮ್ಮೆ ಬಾಯಿ ಮೇಲೆ ಬೆರಳಿಡುವುದು ಖಂಡಿತ.

ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋ ತೆಲಂಗಾಣಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ತುಂಬಿ ತುಳುಕುತ್ತಿದ್ದ ಆಟೋವನ್ನು ಪೊಲೀಸ್​ ಪೇದೆಗಳು ತಡೆದು ಪರಿಶೀಲನೆ ನಡೆಸಿದಾಗ ಒಬ್ಬೊಬ್ಬರೇ ಆಟೋದಿಂದ ಕೆಳಗಿಳಿಯುವುದನ್ನು ಕಂಡು ಪೊಲೀಸರೇ ಕಂಗಾಲಾಗಿದ್ದಾರೆ.

ಕರೀಮ್​ನಗರದ ಪೊಲೀಸ್​ ಆಯುಕ್ತರು ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ರಸ್ತೆ ಸುರಕ್ಷತೆ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಜನರು ತಮ್ಮ ಸುರಕ್ಷತೆ ಬಗ್ಗೆ ತಾವೇ ಎಚ್ಚರಿಕೆ ವಹಿಸಬೇಕು. ಪ್ರಯಾಣಿಕರ ಆಟೋಗಳಲ್ಲಿ ಅಗತ್ಯಕ್ಕಿತ ಹೆಚ್ಚಿನ ಮಂದಿ ಕೂರಬಾರದು. ಇದರಿಂದ ತಮ್ಮ ಪ್ರಾಣಕ್ಕೆ ಅಪಾಯ ಎದುರಾಗುವ ಸಂಭವ ಅಧಿಕವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.

2.09 ನಿಮಿಷ ಉದ್ದವಿರುವ ವಿಡಿಯೋ ಸದ್ಯ 16,400 ಮಂದಿ ವೀಕ್ಷಣೆ ಮಾಡಿದ್ದು, ಸಾವಿರಾರು ಲೈಕ್ಸ್​ ಗಿಟ್ಟಿಸಿಕೊಂಡಿದೆ. 370 ಬಾರಿ ರೀಟ್ವೀಟ್​ ಆಗಿದೆ. ವಿಡಿಯೋ ಬಗ್ಗೆ ಹಲವರು ಗಂಭೀರವಾಗಿ ಪ್ರತಿಕ್ರಿಯೆ ನೀಡಿದ್ದು, ಕೆಲವರು ಇದೊಂದು ವಿಶ್ವದಾಖಲೆ ಎಂದು ಹಾಸ್ಯಾತ್ಮಕವಾಗಿ ಟ್ರೋಲ್​ ಮಾಡಿದ್ದಾರೆ.

ಕಳೆದ ವಾರವಷ್ಟೇ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಟ್ರಕ್​ ಡಿಕ್ಕಿ ಹೊಡೆದು 12 ಮಂದಿ ಸಾವಿಗೀಡಾಗಿ 6 ಮಂದಿ ಗಂಭೀರವಾಗಿ ಗಾಯಕೊಂಡಿದ್ದರು. ತೆಲಂಗಾಣದ ಮೆಹಬೂಬ್​ನಗರದ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿತ್ತು. ಇದಾದ ಬಳಿಕವೂ ಜನರು ಎಚ್ಚೆತ್ತುಕೊಳ್ಳದೇ ಇರುವುದು ಆಘಾತಕಾರಿ ಬೆಳವಣಿಗೆ ಆಗಿದೆ. (ಏಜೆನ್ಸೀಸ್​)

One Reply to “VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!”

  1. For Auto Rickshaw there is no any rules they can carry unlimited people and they can run unlimited speed this our India. Better to introduce 4 wheeler vehicle and stop Auto Rickshaw manufacturing

Leave a Reply

Your email address will not be published. Required fields are marked *