ಜೈಪುರ: ಐಎಎಸ್ ಅಧಿಕಾರಿ ಟೀನಾ ದಾಬಿಯ ತಾವು ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಾಗಿನಿಂದ ಇದುವರೆಗೂ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಶುಚಿತ್ವದ ಕುರಿತು ಅಂಗಡಿಯವರಿಗೆ ಛೀಮಾರಿ ಹಾಕಿದ್ದು ಹಾಗೂ ಸ್ಪಾ ಮತ್ತು ಮಸಾಜ್ ಪಾರ್ಲರ್ಗಳ ಮೇಲೆ ದಾಳಿ ಮಾಡಿದ ಸುದ್ದಿಗಳು ಹೆಚ್ಚು ಹೈಲೆಟ್ ಆಗಿದ್ದವು ಸದ್ಯ ಇದೀಗ ಟೀನಾ ದಾಬಿಯ ಅವರು ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು(Viral Video) ಸಾಕಷ್ಟು ಚರ್ಚೆಯನ್ನು ಉಂಟುಮಾಡಿದೆ.
ಇದನ್ನು ಓದಿ: ಬರ್ತ್ಡೇ ಗರ್ಲ್ಗೆ ಬಂಪರ್ ಗಿಫ್ಟ್; ಕೇಕ್ನಲ್ಲಿತ್ತು ದುಡ್ಡಿನ ಸರಮಾಲೆ! Viral Video
ವಿಡಿಯೋದಲ್ಲಿ ರಾಜಸ್ಥಾನದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರು ಕಾರಿನಿಂದ ಕೆಳಗಿಳಿದು ಮುಂದೆ ಹೋಗುವುದನ್ನು ನೋಡಬಹುದು. ಆ ಸಮಯದಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ನಮಸ್ಕರಿಸುತ್ತಾರೆ. ಆದರೆ ಸತೀಶ್ ಪೂನಿಯಾ ಅವರ ಗಮನ ಮೊಬೈಲ್ನಲ್ಲಿರುತ್ತದೆ. ಅಧಿಕಾರಿಯ ಕೆಲಸದ ಕುರಿತು ಸತೀಶ್ ಪುನಿಯಾ ಮೆಚ್ಚುಗೆಯ ಮಾತಗಳನ್ನು ಹೇಳುತ್ತಾರೆ.
ಆದರೆ ವಿಷಯ ಅದಲ್ಲಾ, ವಿಡಿಯೋದಲ್ಲಿ ಟೀನಾ ದಾಬಿ ಬಿಜೆಪಿ ನಾಯಕ ಸತೀಶ್ ಪುನಿಯಾ ಅವರ ಮುಂದೆ ನಿಂತು ಮತ್ತೆ ಮತ್ತೆ ತಲೆ ಬಾಗಿಸುತ್ತಿರುವುದನ್ನು ಕಾಣಬಹುದು. ಟೀನಾ ದಾಬಿ 7 ಸೆಕೆಂಡುಗಳಲ್ಲಿ ಸುಮಾರು 5 ಬಾರಿ ಸತೀಶ್ ಪುನಿಯಾ ಅವರ ಮುಂದೆ ತಲೆ ಬಾಗಿದ್ದಾರೆ. ಈ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಗೌರವದ ಸಂಕೇತವೆಂದು ಪರಿಗಣಿಸಿ ಐಎಎಸ್ ಅಧಿಕಾರಿಯನ್ನು ಹೊಗಳುತ್ತಿದ್ದು, ಮತ್ತೆ ಕೆಲವರು ಟೀಕಿಸುತ್ತಿದ್ದಾರೆ.
हरियाणा बीजेपी प्रभारी व पूर्व बीजेपी प्रदेश अध्यक्ष सतीश पुनिया ने आईएएस टीना डाबी द्वारा चलाए जा रहे नवो बाड़मेर स्वच्छता अभियान की तारीफ की। @dabi_tina @DrSatishPoonia pic.twitter.com/tV22BH6FRU
— Bhupesh Aacharya (@BhupeshAacharya) October 24, 2024
ಸತೀಶ್ ಪೂನಿಯಾ ದಾಬಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆ ವೇಳೆ ದಾಬಿ ಪದೇ ಪದೆ ಕೈಮುಗಿದು ಅಭಿನಂದಿಸಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಶುಚಿಗೊಳಿಸುವಿಕೆಯನ್ನು ಪೂರ್ಣಗೊಳಿಸುವುದು, ಕಸದ ತೊಟ್ಟಿಗಳನ್ನು ನಿರ್ವಹಿಸುವುದು ಅದ್ಭುತವಾಗಿದೆ. ನೀವು ಬಾರ್ಮರ್ ಅನ್ನು ನಿಭಾಯಿಸಿದರೆ ಅದು ಇಂದೋರ್‌ನಂತೆ ಆಗುತ್ತದೆ. ಅದಕ್ಕೆ ಪ್ರತಿಕ್ರಿಯಿಸಿ ದಾಬಿ ನನ್ನ ಕನಸು ಸರ್ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಬಿಂದಿಗೆ ಹಿಡಿದು ಜಗಳಕ್ಕೆ ನಿಂತ ಮಹಿಳಾಮಣಿಗಳು; ವಿಡಿಯೋ ನೋಡಿ ನೆಟ್ಟಿಗರು ಖುಷ್ | Viral Video