More

    VIDEO | ಹಣೆ ಮೇಲೆ ಪತಿಯ ಹೆಸರಿನ ಟ್ಯಾಟೂ ಹಾಕಿಸಿರುವುದು ನಿಜವೋ/ಸುಳ್ಳೋ? ಇಲ್ಲಿದೆ ಅಸಲಿ ಕಥೆ…

    ಬೆಂಗಳೂರು: ಯುವತಿಯೊಬ್ಬಳು ತನ್ನ ಸಂಗಾತಿಗಾಗಿ ವಿಶಿಷ್ಟವಾಗಿ ಪ್ರೀತಿಯನ್ನು ತೋರ್ಪಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಳು. ಬೆಂಗಳೂರಿನ ಯುವತಿ ತಮ್ಮ ಪತಿಯ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

    ಇದನ್ನೂ ಓದಿ: VIDEO| ಮಹಿಳೆಯ ಹಣೆ ಮೇಲೆ ಪತಿ ಹೆಸರಿನ ಟ್ಯಾಟೂ!

    ವಿಡಿಯೋ ವೈರಲ್ ಆಗುತ್ತಿದ್ದಂತೆ ಪರ-ವಿರೋಧ ಚರ್ಚೆ ಆರಂಭವಾಗಿತ್ತು. ಹಣೆಯ ಮೇಲೆ ಹೆಸರಿನ ಟ್ಯಾಟೂ ಹಾಕಿಸಿದ ವಿಚಾರವಾಗಿ ಅನೇಕರು ಜಾಲತಾಣದ ಮೂಲಕ ಆಕ್ಷೇಪ ವ್ಯಕ್ತಪಡಿಸಿ, ಯುವತಿಯ ನಡೆಗೆ ಕಿಡಿಕಾರಿದ್ದಾರು. ಇದು ಹುಚ್ಚುತನದ ಪರಮಾವಧಿ. ಇದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ತಿಳುವಳಿಕೆ ಇರಬೇಕು. ಈ ರೀತಿ ಹುಚ್ಚುತನ ಸರಿಯಲ್ಲ ಎಂಬ ಮಾತುಗಳು ವ್ಯಕ್ತವಾಗಿತ್ತು.

    ಇದನ್ನೂ ಓದಿ: ವಿವಸ್ತ್ರಗೊಂಡು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ವಿದೇಶಿ ಮಹಿಳೆ!

    ಇದೀಗ ರೇಡಿಯೋ ಸಿಟಿ ವಿಡಿಯೋವೊಂದನ್ನು ತನ್ನ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಘಟನೆಯ ಸತ್ಯಾಸತ್ಯತೆ ಹೊರಬಿದ್ದಿದೆ. ಈ ಬಗ್ಗೆ ರೇಡಿಯೋ ಸಿಟಿ ನಡೆಸಿದ ಸಂದರ್ಶನದಲ್ಲಿ ಯುವತಿ ಮಾತನಾಡುತ್ತಾ, ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗುತ್ತವೆ ಎಂಬುದನ್ನು ಮೊದಲೇ ಗ್ರಹಿಸಿದ್ದೆ. ವಾಸ್ತವದಲ್ಲಿ ಹಣೆಯ ಮೇಲೆ ಯಾವುದೇ ತರಹದ ಟ್ಯಾಟೂ ಹಾಕಿಸಿಕೊಂಡಿಲ್ಲ. ಕೇವಲ ತಮಾಷೆಗಾಗಿ ಈ ರೀತಿ ಮಾಡಿಕೊಂಡಿರುವುದು ಎಂದು ಹೇಳಿಕೊಂಡಿದ್ದಾಳೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Radio City Kannada (@radiocitykannada)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts