ಈ ಫೋಟೋ ನೋಡಿದರೆ ಕಲಾವಿದನೊಬ್ಬ ಪೇಂಟಿಂಗ್ ಮಾಡಿದಂತೆ ಕಾಣಿಸುತ್ತದೆಯಲ್ಲವೆ?
ಆದರೆ ಇದು ಚೀನಾದ ಗನ್ಸು ಪ್ರಾಂತ್ಯದಲ್ಲಿದಲ್ಲಿ ಗುಡ್ಡ ಬೆಟ್ಟಗಳಿಂದ ಕೂಡಿರುವ ಸುಂದರ ತಾಣ. ಲಕ್ಷಾಂತರ ವರ್ಷಗಳಿಂದ ರಾಶಿ ಬಿದ್ದು, ಖನಿಜಗಳ ಸಣ್ಣಸಣ್ಣ ಗುಡ್ಡಗಳು ನಿರ್ಮಾಣ
ವಾದವು. ಕ್ರಮೇಣ ಮಳೆ ಮತ್ತು ಗಾಳಿಗೆ ಕೆಂಪು ಮರಳುಗಲ್ಲುಗಳ ಸವೆತದಿಂದ ಅವುಗಳ ಮೇಲೆ ಪದರಗಳು ಸೃಷ್ಟಿಯಾದವು.
ಆ ಪದರಗಳು ಭಿನ್ನ ಭಿನ್ನ ಬಣ್ಣಗಳನ್ನು ಹೊಂದಿರುವುದರಿಂದ ಗುಡ್ಡ ಈ ರೀತಿ ಮನಮೋಹಕವಾಗಿ ಕಾಣಿಸುತ್ತದೆ.