ಆಸ್ಟ್ರೇಲಿಯಾದಲ್ಲಿ ಅಗ್ನಿಶಾಮಕ ದಳದವರು ಕಾಳ್ಗಿಚ್ಚನ್ನು ನಿಯಂತ್ರಿಸುತ್ತ ಜನರು ಹಾಗೂ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಅವರಿಗೆ ಆರ್ಥಿಕ ನೆರವು ನೀಡಲು ಅಲ್ಲಿನ ಒಂದು ಪಿಜ್ಜಾ ಸ್ಟೋರ್ 338 ಅಡಿ ಉದ್ದದ ಪಿಜ್ಜಾ ತಯಾರಿಸಿದೆ.
ನ್ಯೂ ಸೌತ್ವೇಲ್ಸ್ನಲ್ಲಿ ಪಿಜೇರಿಯಾ ಎಂಬ ಪಿಜ್ಜಾ ಸ್ಟೋರ್ ನಡೆಸುತ್ತಿರುವ ಪಿಯೆರ್-ರೋಸ್ವೆುರಿ ಎಂಬ ಅವಳಿಗಳು ಕನ್ವೇಯರ್ ಓವನ್ ಬಳಸಿ ಈ ಪಿಜ್ಜಾ ತಯಾರಿಸಿದ್ದಾರೆ. ಇದನ್ನು ನಾಲ್ಕು ಸಾವಿರ ತುಂಡುಗಳನ್ನಾಗಿ ಕತ್ತರಿಸಿ ಹಂಚುವ ಮೂಲಕ ಅಗ್ನಿಶಾಮಕದಳದವರಿಗೆಂದು ಹಣ ಸಂಗ್ರಹಿಸಲಾಗಿದೆ.
ಈ ಮೊದಲು ಕ್ಯಾಲಿಫೋರ್ನಿಯಾದಲ್ಲಿ 6,333 ಅಡಿ ಉದ್ದದ ಪಿಜ್ಜಾ ತಯಾರಿಸಲಾಗಿತ್ತು.