ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನೇದಿನೆ ಸಂತ್ರಸ್ತರ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತಿದೆ. ಅವರಿಗೆಲ್ಲ ಊಟ-ವಸತಿಯ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ. ಹೀಗಾಗಿ ಎಷ್ಟೋ ಸಂಘಸಂಸ್ಥೆಗಳವರು, ಸ್ವಯಂಸೇವಕರು ತಾವಾಗಿಯೇ ಮುಂದೆ ಬಂದು ನೆರವಾಗುತ್ತಿದ್ದಾರೆ. ಮೆಲ್ಬೋರ್ನ್ನಲ್ಲಿರುವ
35 ವರ್ಷದ ಸುಖವಿಂದರ್ ಕೌರ್, ಹತ್ತು ವರ್ಷಗಳ ಬಳಿಕ ಭಾರತಕ್ಕೆ ಹೋಗುವುದನ್ನು ರದ್ದು ಮಾಡಿದ್ದಾರೆ. ಪ್ರತಿನಿತ್ಯ ಒಂದು ಸಾವಿರ ಊಟವನ್ನು ಸಿದ್ಧಪಡಿಸಿ ಸಂತ್ರಸ್ತರಿಗೆ ಕೊಡುತ್ತಿದ್ದಾರೆ. ಅವರ ಈ ಮಾನವೀಯ ಮನೋಭಾವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.