VIDEO| ಈ​ ವಿಡಿಯೋ ನೋಡಿದ್ರೆ ಯಾವುದೋ ದೈತ್ಯ ಪ್ರಾಣಿ ಎಂದೆನಿಸುವುದು ನಿಜ: ಅಸಲಿಯತ್ತು ತಿಳಿದರೆ ಬೆರಗಾಗುವುದೂ ಸತ್ಯ!

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ ವೈರಲ್​ ಆಗಿದೆ. ಆದರೆ, ಅದರ ವಾಸ್ತವನ್ನು ನೋಡಿದಾಗ ಅಲ್ಲಿ ಕಂಡಿದ್ದೇ ಬೇರೆ. ಅದೇನೆಂದು ತಿಳಿಯಲು ಮುಂದೆ ಓದಿ…

ನದಿಯಲ್ಲಿ ಈಜುತ್ತಿರುವ ಜೀವಿಯ ರೀತಿಯಲ್ಲಿ ಕಾಣುತ್ತಿದ್ದ ದೃಶ್ಯವೂ ಸ್ಕಾಟ್ಲೆಂಡ್​​ ಪುರಾತನದಲ್ಲಿ ಬರುವ ಲೋಚ್ ನೆಸ್ ದೈತ್ಯ ಪ್ರಾಣಿಯ ಆಕಾರವನ್ನು ಹೋಲುತ್ತಿತ್ತು. ಉದ್ದವಾಗಿ, ಕಪ್ಪುಬಣ್ಣದ ಸರೀಸೃಪ ರೀತಿಯಲ್ಲಿ ನದಿಯಲ್ಲಿ ಈಜುವ ದೃಶ್ಯದ ವಿಡಿಯೋ ಚೈನೀಸ್​​ ಟ್ವಿಟರ್​ನಲ್ಲಿ ಅಪ್​​ಲೋಡ್​ ಆಗಿದ್ದು, 6 ಮಿಲಿಯನ್​ ವೀಕ್ಷಣೆ ಕಂಡಿದೆ.

ಚೀನಾದ ಹುಬೈ ಪ್ರಾಂತ್ಯದ ಥ್ರೀ ಜಾರ್ಜ್​ ಡ್ಯಾಂಗೆ ಸಂಬಂಧಿಸಿದ ಈ ವಿಡಿಯೋ ನೋಡಿದ ಸಾಕಷ್ಟು ನೆಟ್ಟಿಗರು ತಮ್ಮ ಸಿದ್ದಾಂತಗಳನ್ನು ಮಂಡಿಸಿದ್ದಾರೆ. ಏರುತ್ತಿರುವ ಮಾಲಿನ್ಯದಿಂದ ಇದು ಜನ್ಮ ತಾಳಿದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಇದೊಂದು ದೈತ್ಯ ಪ್ರಾಣಿ ಎಂದು ಕೆಲವರು ತಿಳಿಸಿದ್ದಾರೆ. ಆದರೆ, ಇದನ್ನು ಅಲ್ಲಗೆಳೆದಿರುವ ವಿಜ್ಞಾನಿಗಳು ಇದೊಂದು ದೈತ್ಯ ನೀರಿನ ಹಾವು ಇರಬೇಕೆಂದಿದ್ದರು.

ಆದರೆ, ಎಲ್ಲರ ಊಹೆ ತಪ್ಪು ಎಂಬುದು ನಂತರದಲ್ಲಿ ತಿಳಿದಿದೆ. ಹೇಗೆಂದರೆ, ಹತ್ತಿರದಲ್ಲಿ ನೋಡಿದಾಗ ಅದೊಂದು 65 ಅಡಿ ಉದ್ದದ ಕಾರ್ಖಾನೆಯ ಏರ್​ಬ್ಯಾಗ್​ ಎಂದು ಗೊತ್ತಾಗಿದೆ. ಮಂಗಳವಾರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಹಡಗಿಗೆ ಕಟ್ಟಿದ್ದ ಉದ್ದದ ಕಪ್ಪುಬಣ್ಣದ ಏರ್​ಬ್ಯಾಗ್​ ಕಳಚಿಕೊಂಡು ನೀರಿನಲ್ಲಿ ಸಿಲುಕಿ ಈ ರೀತಿಗೆ ಭಾಸವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *