25.9 C
Bengaluru
Wednesday, January 22, 2020

VIDEO| ಟಿಕ್​ಟಾಕ್​ ವಿರುದ್ಧ ತಿರುಗಿಬಿದ್ದ ಹಿಂದು-ಮುಸ್ಲಿಂ ಸಲಿಂಗಿ ಜೋಡಿಗೆ ನೆಟ್ಟಿಗರ ಭಾರಿ ಬೆಂಬಲ!

Latest News

ಪಾಲಿಕೆ ಕಾಂಗ್ರೆಸ್ ಸದಸ್ಯರಿಗೆ ಚಿಂತನ ಮಂಥನ ಸಮಾವೇಶ ಇಂದು

ದಾವಣಗೆರೆ: ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಿಗೆ ಚಿಂತನ ಮಂಥನ ಸಮಾವೇಶ ಹಾಗೂ ಸನ್ಮಾನ ಕಾರ್ಯಕ್ರಮ ಜ. 23 ರಂದು ನಗರದ ತೊಗಟವೀರ ಕಲ್ಯಾಣ...

ಕಲೂತಿ ನಗರ ಶಾಲೆಯಲ್ಲಿ ತಗ್ಗು-ಗುಂಡಿಗಳ ದರ್ಬಾರ್

ತೇರದಾಳ: ಹತ್ತು ವರ್ಷವಾದರೂ ಸ್ಥಳೀಯ ಕಲೂತಿ ನಗರದಲ್ಲಿರುವ ಸರ್ಕಾರಿ ಎಲ್‌ಪಿಎಸ್ ಶಾಲೆ ಆವರಣ ಸಮತಟ್ಟ ಮಾಡದ ಕಾರಣ ಮಂಗಳವಾರ ಅಕ್ಕನ ಜತೆಗೆ ಶಾಲೆಗೆ...

ಬಸ್​ನಿಲ್ದಾಣದಲ್ಲಿ ಸಿಕ್ಕಿದ್ದ ನಾಲ್ಕು ವಾರಸ್ದಾರರಿಲ್ಲದ ಬ್ಯಾಗ್​ಗಳನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಪರಿಶೀಲಿಸಿದ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ: ಇಂದು ನಗರದ ಕೆಎಸ್​​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಾರಸ್ದಾರರಿಲ್ಲದ ನಾಲ್ಕು ಬ್ಯಾಗ್​ಗಳು ಪತ್ತೆಯಾಗಿದ್ದವು. ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲುಬೆಂಚಿನ ಕೆಳಗೆ ಬ್ಯಾಗ್​ಗಳನ್ನು ಇಡಲಾಗಿತ್ತು. ಒಂದೊಂದು ಬ್ಯಾಗ್​ಗಳೂ ಒಂದೊಂದು...

ಸಮುದಾಯ ಅಭಿವೃದ್ಧಿ ಹೊಂದಲಿ

ಮಹಾಲಿಂಗಪುರ: ಬಸವಣ್ಣನವರ ಮಾರ್ಗದರ್ಶನದಂತೆ ನಡೆದು, ನಿಷ್ಠೆಯಿಂದ ಕಾಯಕ ಮಾಡಿ ದಾಸೋಹ ನಡೆಸಿದ ಶಿವಶರಣ ಮೇದಾರ ಕೇತೇಶ್ವರ ಸರ್ವ ಜನಾಂಗದ ಶರಣ ಆಗಿದ್ದಾರೆ ಎಂದು...

ಯುವಕರಲ್ಲಿ ಕಾನೂನಿನ ಅರಿವು ಅಗತ್ಯ

ಬಾಗಲಕೋಟೆ: ಯುವ ಸಮುದಾಯದಲ್ಲಿ ಉತ್ತಮ ಸಂಸ್ಕಾರ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ...

ನವದೆಹಲಿ: ಅಮೆರಿಕದಲ್ಲಿ ವಾಸವಾಗಿರೋ ಹಿಂದು-ಮುಸ್ಲಿಂ ಸಲಿಂಗಿ ಜೋಡಿಯು ಈ ಹಿಂದೆ ಫೋಟೋಶೂಟ್​ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು ನಿಮಗೆ ನೆನಪಿದೆಯೇ?. ಇದೀಗ ಇದೇ ಜೋಡಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ. ಅದಕ್ಕೆ ಕಾರಣ ಟಿಕ್​ಟಾಕ್.

ಸಲಿಂಗಿ ಜೋಡಿಯಾದ ಸುಂದಾಸ್​ ಮಲಿಕ್​ ಮತ್ತು ಅಂಜಲಿ ಚಕ್ರ ಆಗಾಗ ಜತೆಯಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇತ್ತೀಚೆಗೆ ಟಿಕ್​ಟಾಕ್​ ಆ್ಯಪ್​ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಆದರೆ, ಸಮುದಾಯ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣ ಹೇಳಿ ವಿಡಿಯೋವನ್ನು ಟಿಕ್​ಟಾಕ್​ನಿಂದ ತೆಗೆಯಲಾಗಿದೆ ಎಂದು ಅಂಜಲಿ ಆರೋಪಿಸಿದ್ದಾರೆ.

ಟಿಕ್​ಟಾಕ್​ ತನ್ನ ವಿಡಿಯೋವನ್ನು ತೆಗೆದಿದ್ದಕ್ಕೆ ಅದೇ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿ ಅಂಜಲಿ ಅಸಮಾಧಾನ ಹೊರಹಾಕಿದ್ದಾರೆ. ಸಮುದಾಯ ಮಾರ್ಗಸೂಚಿಯ ಉಲ್ಲಂಘನೆಯಾಗಿದೆ ಎಂದು ಟಿಕ್​ಟಾಕ್ ವಿಡಿಯೋ ಡಿಲೀಟ್​ ಮಾಡಿದೆ. ಹೀಗಾಗಿ ಹೋಮೋಫೋಬಿಯಾ (ಸಲಿಂಗಿಗಳ ಮೇಲಿನ ಭಯ) ಬಗ್ಗೆ ಹರಡಿರುವ ವದಂತಿ ನಿಜವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅಂಜಲಿ, ವಿಡಿಯೋ ತೆಗೆದಿರುವ ಬಗ್ಗೆ ಟಿಕ್​ಟಾಕ್​ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಅಂಜಲಿ ಮತ್ತು ಸುಂದಾಸ್​ ಸರಳವಾಗಿ ಡ್ಯಾನ್ಸ್​ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋ ಶೇರ್​ ಮಾಡುತ್ತಿದ್ದಂತೆ ನೆಟ್ಟಿಗರು ಸಲಿಂಗಿಗಳ ಬೆನ್ನಿಗೆ ನಿಂತಿದ್ದಾರೆ. ಟಿಕ್​ಟಾಕ್​ ಅನ್ನು ಟೀಕಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಕೂಡ ಟಿಕ್​ಟಾಕ್​ ಸಮುದಾಯ ಮಾರ್ಗಸೂಚಿಯನ್ನು ಓದಿದ್ದೇನೆ. ವಿಡಿಯೋದಲ್ಲಿ ಅದರ ಉಲ್ಲಂಘನೆ ಕಾಣುತ್ತಿಲ್ಲ. ನಿಜಕ್ಕೂ ಇದು ದುಃಖಕರವೆಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ವೀಟ್​ ಮಾಡಿ ವಿಡಿಯೋ ಶೇರ್​ ಮಾಡಿದಾಗಿನಿಂದ ಈವರೆಗೂ 2 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, 222 ಮಂದಿ ರೀಟ್ವೀಟ್​ ಮಾಡಿದ್ದಾರೆ.

ಇನ್ನು ಸಲಿಂಗಿ ಜೋಡಿಯ ವಿಚಾರಕ್ಕೆ ಬಂದರೆ ಸುಂದಾಸ್​ ಮಲ್ಲಿಕ್​ ಮುಸ್ಲಿಂ ಕಲಾವಿದರಾಗಿದ್ದಾರೆ. ಇವರು ಪಾಕಿಸ್ತಾನ ಮೂಲದವರು. ಇನ್ನು ಅಂಜಲಿ ಚಕ್ರ ಹಿಂದು ಆಗಿದ್ದು, ಭಾರತೀಯ ಮೂಲದವರು. ಇದೇ ವರ್ಷದ ಆರಂಭದಲ್ಲಿ ಇವರಿಬ್ಬರ ಫೋಟೋಶೂಟ್​ ಭಾರಿ ವೈರಲ್​ ಆಗಿತ್ತು. (ಏಜೆನ್ಸೀಸ್​)

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...