Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಕೇರಳ-ಕರ್ನಾಟಕ ಅಂತಾರಾಜ್ಯ ಹೆದ್ದಾರಿ ಬಂದ್

Thursday, 14.06.2018, 5:25 AM       No Comments

ವಿರಾಜಪೇಟೆ: ಕೊಡಗು ಕೇರಳ ಗಡಿಪ್ರದೇಶದ ಪೆರುಂಬಾಡಿ ಸಮೀಪ ಮರಗಳು ಬಿದ್ದ ಪರಿಣಾಮವಾಗಿ ಕೊಡಗು ಕೇರಳ ಅಂತರ್ ರಾಜ್ಯ ರಸ್ತೆ ಸಂಪರ್ಕ ಬಂದ್ ಆಗಿದೆ.

ಏಳು ದಿನಗಳಿಂದಲೂ ಗಡಿಭಾಗವಾದ ಮಾಕುಟ್ಟ ಪ್ರದೇಶದಲ್ಲಿ ನಿರಂತರ ಭಾರೀ ಮಳೆಯಾಗುತ್ತಿದ್ದು, ಪೆರುಂಬಾಡಿಯಿಂದ ಮಾಕುಟ್ಟಕ್ಕೆ ತೆರಳುವ ರಸ್ತೆಗೆ ಬೇರು ಸಮೇತ ಮರಗಳು ಬಿದ್ದಿದ್ದು, ರಸ್ತ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಮರ ಬಿದ್ದ ಸುಮಾರು ಮೂರು ಕಿ.ಮೀ ದೂರದಲ್ಲಿ ಸೇತುವೆಯೊಂದರ ಒಂದು ಭಾಗ ಕುಸಿದ ಪರಿಣಾಮವಾಗಿ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಸೇತುವೆ ಪಕ್ಕದ ಮಲೆಯಾಳಿ ಅಂಬು ಹೊಟೇಲ್‌ಗೂ ನೀರು ನುಗ್ಗಿದ್ದು ಹೊಟೇಲ್ ವ್ಯವಹಾರ ಸ್ಥಗಿತಗೊಂಡಿದೆ. ಅಂಬು ಹೊಟೇಲ್ ಪಕ್ಕದಲ್ಲಿರುವ ಸೇತುವೆಯ ಮೇಲೆ ಮರಗಳು ಉರುಳಿದ್ದು ರಸ್ತೆ ಬಂದ್ ಆಗಿದೆ. ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಅಂತರರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿದೆ ಎಂದು ಸುದ್ದಿ ತಿಳಿಯುತ್ತಲೆ ತಾಲೂಕು ತಹಸಿಲ್ದಾರ್ ಆರ್.ಗೋವಿಂದರಾಜು, ಲೋಕೋಪಯೋಗಿ ಇಲಾಖೆಯ ಎಇ ಎಂ.ಕೆ.ಸುರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಸ್ತೆ ತೆರವಿಗೆ ಜೆ.ಸಿ.ಬಿ.ಯಂತ್ರ ಬಳಸಿ ತುರ್ತು ಪರಿಹಾರ ಕ್ರಮ ಕೈಗೊಂಡಿದ್ದಾರೆ.

ಗಡಿ ಭಾಗದಲ್ಲಿ ಭಾರೀ ಮಳೆಯ ಪರಿಣಾಮವಾಗಿ ಮಾಕುಟ್ಟದ ಎಡ ಪಾರ್ಶ್ವದಲ್ಲಿರುವ ಕೂಟುಪೊಳೆ ಉಕ್ಕಿ ಹರಿಯುತ್ತಿರುವ ಕಾರಣ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಅಂತರರಾಜ್ಯ ರಸ್ತೆ ಸಂಚಾರ ಬಂದ್ ಹಿನ್ನೆಲೆಯಲ್ಲಿ ಸುಮಾರು 600 ರಿಂದ 700 ಅಂತರ ರಾಜ್ಯ ವಾಹನಗಳು ಹಿಂತಿರುಗಿ ಕೇರಳದ ಮಟ್ಟನೂರು ಮಾರ್ಗವಾಗಿ ಮಾನಂದವಾಡಿ ಮೂಲಕ ಮೈಸೂರು, ಬೆಂಗಳೂರು, ಹಾಸನ ಇತರ ಊರುಗಳಿಗೆ ತೆರಳಬೇಕಾಯಿತು.

ಕೇರಳ ಶಾಸಕರ ಭೇಟಿ: ಕೇರಳ ರಾಜ್ಯದ ಕಣ್ಣಾನೂರಿನ ಶಾಸಕ ಸನ್ನಿಜೋಸೆಫ್ ಬುಧವಾರ ಬೆಳಗ್ಗೆ ಮಾಕುಟ್ಟಕ್ಕೆ ಭೇಟಿ ನೀಡಿ ಕೊಡಗು-ಕೇರಳ ಅಂತರಾಜ್ಯ ರಸ್ತೆ ಪರಿಶೀಲಿಸಿದರು. ಸೇತುವೆ ಮೇಲೆ ಬಿದ್ದಿದ್ದ ಮರಗಳನ್ನು ಕ್ರೈನ್ ಬಳಸಿ ಎತ್ತುವಂತೆ ಸೂಚಿಸಿದರಲ್ಲದೆ ಕೇರಳದಿಂದ ತಕ್ಷಣ ಕ್ರೈನ್ ತರಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ತುರ್ತು ಪರಿಹಾರಕ್ಕೆ ಕೇರಳ ಸರ್ಕಾರ ಸ್ಪಂದಿಸಲಿದೆ. ಪ್ರಕೃತಿ ವಿಕೋಪಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕ ರಾಜ್ಯದ ಸಂಬಂಧಿಸಿದ ಸಚಿವರು, ಉನ್ನತಾಧಿಕಾರಿಗಳೊಂದಿಗೆ ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

Back To Top