ಬೆಂಗಳೂರು: ‘‘ರಾಯಲ್’ ಸಿನಿಮಾ ನೋಡಿದ ಪ್ರತಿಯೊಬ್ಬರು ಒಮ್ಮೆ ತಮ್ಮ ತಾಯಿಯನ್ನು ನೆನಪಿಸಿಕೊಳ್ಳುತ್ತಾರೆ. ಅಲ್ಲದೇ, ಅವರ ಜತೆ ವೈಮನಸ್ಸು ಇದ್ದರೆ, ಎಲ್ಲ ಮರೆತು, ಫೋನ್ ಮಾಡಿ ಮಾತಾಡಿಸ್ತಾರೆ. ಇಡೀ ಕುಟುಂಬ ಮತ್ತೊಮ್ಮೆ ‘ಸಂಕ್ರಾಂತಿ’ ಆಚರಿಸಲಿದ್ದಾರೆ’. ಎಂದು ‘ರಾಯಲ್’ ಚಿತ್ರದ ಬಗ್ಗೆ ಭರವಸೆಯೊಂದಿಗೆ ಮಾತನಾಡುತ್ತಾರೆ ನಾಯಕ ವಿರಾಟ್. ‘ಕಿಸ್’ ಮೂಲಕ ಚಂದನವನಕ್ಕೆ ಬಂದ ಚೆಂದದ ನಟ, ಇದೀಗ ಐದು ವರ್ಷಗಳ ಬಳಿಕ ಮತ್ತೆ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರವನ್ನು ದಿನಕರ್ ತೂಗುದೀಪ್ ನಿರ್ದೇಶಿಸಿದ್ದು, ವಿರಾಟ್‌ಗೆ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಈ ‘ರಾಯಲ್’ ಜರ್ನಿಯ ಬಗ್ಗೆ ವಿರಾಟ್, ‘ಇದೊಂದು ಹೈ-ಆ್ಯಕ್ಷನ್, ಫ್ಯಾಮಿಲಿ ಎಮೋಷನ್ ಜತೆಗೆ ಲವ್‌ಸ್ಟೋರಿ ಕಥೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ. ನಾಲ್ಕು ವರ್ಷಗಳ ಬಳಿಕ ಸಾಕಷ್ಟು ಸಿದ್ಧತೆ ನಡೆಸಿ ಸಿನಿಮಾ ಮಾಡಿದ್ದೇನೆ. ದಿನಕರ್ ಸರ್ ಅಂದವಾಗಿ ನನ್ನ ಪಾತ್ರ ನಿರೂಪಿಸಿದ್ದಾರೆ. ಉತ್ತಮ ಆ್ಯಕ್ಷನ್ ಇರೋ ಕಾರಣ ನಾನು ಜಿಮ್ನಾಸ್ಟಿಕ್, ಮಾಷರ್ರ್ಲ್ ಆರ್ಟ್ಸ್ ಸೇರಿ ಹಲವು ಸಾಹಸ ಕಲೆಗಳನ್ನು ಕಲಿತಿದ್ದೇನೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ಉತ್ತಮ ಕಥೆ ಮುಖ್ಯ: ಮೊದಲ ಚಿತ್ರಕ್ಕೂ ಎರಡನೇ ಚಿತ್ರಕ್ಕೂ ನಾಲ್ಕೈದು ವರ್ಷ ಗ್ಯಾಪ್ ಆದ ಬಗ್ಗೆ ವಿರಾಟ್,‘‘ಕಿಸ್’ ಬಳಿಕ ನನಗೆ ಅವಕಾಶಗಳು ಬಂದಿಲ್ಲ ಅಂತಲ್ಲ. ಹಲವು ಸ್ಕ್ರಿಪ್ಟ್ ಕೇಳಿದ್ದೆ. ಆದರೆ, ಆಯ್ಕೆ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಚ್ಯೂಸಿಯಾದೆ. ನನ್ನ ಪಾತ್ರಕ್ಕೆ ಮಹತ್ವ ಇರುವಂತಹ ಕಥೆಗಾಗಿ ಎದುರು ನೋಡುತ್ತಿದ್ದೆ. ಹೀಗಾಗಿ, ಸ್ವಲ್ಪ ತಡವಾಯಿತು. ಅದೇ ಸಮಯದಲ್ಲಿ ನಿರ್ಮಾಪಕರಾದ ಜಯಣ್ಣ-ಭೋಗೇಂದ್ರ ಕರೆದು ನನಗೆ ಈ ಅವಕಾಶ ನೀಡಿದರು. ಚಿತ್ರರಂಗದ ಯಾವುದೇ ಹಿನ್ನೆಲೆ ಇಲ್ಲದ ನನಗೆ ಅವರೇ ಗಾಡ್‌ಾದರ್. ಇತ್ತೀಚೆಗಷ್ಟೆ ದರ್ಶನ್ ಸರ್ ಸಿನಿಮಾ ವೀಕ್ಷಿಸಿ, ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ಪಾತ್ರಗಳಿಗೆ ನ್ಯಾಯ ಒದಗಿಸಿದ್ದೀರಿ ಎಂದು ಶುಭಹಾರೈಸಿರುವುದು ನಮಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿದೆ’ ಎಂದು ಮಾಹಿತಿ ನೀಡುತ್ತಾರೆ. ನಟ ವಿರಾಟ್ ಈ ಸಿನಿಮಾದ ಬಳಿಕ ಸೂರಿ ನಿರ್ದೇಶನದಲ್ಲಿ ಹೊಸ ಸಿನಿಮಾದಲ್ಲಿ ನಟಿಸಲಿದ್ದು, ಅದು ಸದ್ಯದಲ್ಲೇ ಅನೌನ್ಸ್ ಆಗಲಿದೆಯಂತೆ.