ಬೆಳಗಾವಿ: ಕನ್ನಡಪರ ಹೋರಾಟಗಾರ, ಸಾಹಿತಿ ಅಶೋಕ ಚಂದರಗಿ ಅವರನ್ನು ಕರ್ನಾಟಕ ವಿಧಾನ ಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಎಂದು ಬೆಳಗಾವಿ ಸಿರಿಗನ್ನಡ ರಾಷ್ಟ್ರಿಯ ಪ್ರತಿಷ್ಠಾನ ಸದಸ್ಯರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಅಶೋಕ ಚಂದರಗಿ ಅವರು ಬೆಳಗಾವಿ ಹಾಗೂ ಗಡಿ ಭಾಗದಲ್ಲಿ 35 ವರ್ಷಗಳಿಂದ ನಾಡು-ನುಡಿಗಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕನ್ನಡ ಸೇವೆ, ಸಾಮಾಜಿಕ ಕಾಳಜಿ ಗಮನಿಸಿ ಸರ್ಕಾರ ವಿಧಾನ ಪರಿಷತ್‌ಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಬೇಕು.
ಈ ಮೂಲಕ ಗಡಿ ಭಾಗದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹಾಗೂ ವಿರೋಧ ಪಕ್ಷಗಳ ನಾಯಕರಿಗೂ ಮನವಿ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ, ಸಂಚಾಲಕ ಶ್ರೀಶೈಲ ಕುಪಾಟಿ, ಜಿ.ಎಸ್. ಸೋನಾರ ತಿಳಿಸಿದ್ದಾರೆ.