Girls Fight : ಹುಡುಗರು ಮತ್ತು ಹುಡುಗಿಯರು ಜಗಳವಾಡುವ ಸಂದರ್ಭಗಳಿಗೆ ಸಂಬಂಧಿಸಿದ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸಣ್ಣ ವಿಷಯಗಳು ಅವರ ನಡುವೆ ಜಗಳ ಮತ್ತು ಘರ್ಷಣೆಗೆ ಕಾರಣವಾಗುತ್ತವೆ. ಇಂತಹ ವಿಡಿಯೋಗಳು ಜನರನ್ನು ನಗಿಸುತ್ತದೆ. ಅಂತಹದ್ದೇ ಮತ್ತೊಂದು ವಿಡಿಯೋ ಬೆಳಕಿಗೆ ಬಂದಿದೆ.
ಇಬ್ಬರು ಕಾಲೇಜು ಹುಡುಗಿಯರ ಜಗಳದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೀವು ಬೆರಗಾಗುತ್ತೀರಿ. ಗೆಳೆಯನ ವಿಚಾರಕ್ಕೆ ಈ ಜಗಳ ನಡೆದಿದೆ ಎಂದು ವರದಿಯಾಗಿದೆ.
Cat-Kalesh b/w Two girls over a Guy
Source: Reddit
pic.twitter.com/7WbBZYarlJ— Ghar Ke Kalesh (@gharkekalesh) November 8, 2024
ಇಬ್ಬರು ಹುಡುಗಿಯರು ಪರಸ್ಪರ ಕೂದಲು ಎಳೆದುಕೊಂಡು ಒದ್ದಾಡುತ್ತಿದ್ದಾರೆ. ಇತರ ವಿದ್ಯಾರ್ಥಿಗಳು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಬ್ಬರೂ ಕೂಡಾ ಜುಟ್ಟು ಬಿಡುತ್ತಿಲ್ಲ. ಈ ವಿಡಿಯೋವನ್ನು ತೆಗೆದುಕೊಂಡ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋಗೆ ನೆಟಿಜನ್‌ಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ವಿಡಿಯೋವನ್ನು ಹಲವರು ಶೇರ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಯುವಜನತೆಗೆ ಮನರಂಜನೆಯ ಸಾಧನವಾಗಿ ಮಾರ್ಪಟ್ಟಿವೆ. ಒಬ್ಬ ಹುಡುಗನಿಗೆ ನೀವಿಬ್ರು ಕಿತ್ತಾಡುತ್ತಿದ್ದೀರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.